ದ್ರಾವಿಡ್, ಪಾಂಟಿಂಗ್‍ಗೆ ಹಾಲ್‍ಫೇಮ್ ಗೌರವ

dravid-pointing-1

ದುಬೈ, ಜು.2- ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಆಸ್ಟ್ರೇಲಿಯಾದ ವಿಶ್ವಕಪ್ ನಾಯಕ ರಿಕ್ಕಿಪಾಂಟಿಂಗ್ ಅವರಿಗೆ ಐಸಿಸಿಯ ಹಾಲ್‍ಫೇಮ್ ಗೌರವ ಲಭಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ರಿಕ್ಕಿ ಹಾಗೂ ರಾಹುಲ್ ದ್ರಾವಿಡ್ ಅವರು ತೋರಿರುವ ಅಭೂತಪೂರ್ವ ಸಾಧನೆಯನ್ನು ಪರಗಣಿಸಿ ಈ ಗೌರವ ಪ್ರಾಪ್ತಯಾಗಿದೆ. ಇಂಗ್ಲೆಂಡ್ ಮಹಿಳಾ ತಂಡದ ಕಾರ್ಲೆ ಟೈಲರ್ ಕೂಡ ಈ ಗೌರವ ಲಭಿಸಿದೆ.

dravid-pointing

ರಾಹುಲ್ ಐದನೇ ಆಟಗಾರ:
ಕ್ರಿಕೆಟ್ ದೇವರೆಂದೇ ಬಿಂಬಿಸಿಕೊಂಡಿ ರುವ ಸಚಿನ್ ತೆಂಡೂಲ್ಕರ್ ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರೂ ಕೂಡ ಐಸಿಸಿಯ ಹಾಲ್ ಫೇಮ್ ಗೌರವ ಲಭಿಸಿಲ್ಲ. ಆದರೆ ರಾಹುಲ್ ದ್ರಾವಿಡ್‍ಗೆ ಈ ಗೌರವ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಭಾರತ ತಂಡದ ಪರ ಈ ಗೌರವ ಪಡೆದ 5ನೆ ಆಟಗಾರರಾಗಿ ರಾಹುಲ್ ದ್ರಾವಿಡ್ ಬಿಂಬಿಸಿಕೊಂಡಿದ್ದಾರೆ. ಈ ಹಿಂದೆ ಬಿಸನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್, ಕಪಿಲ್‍ದೇವ್, ಕನ್ನಡಿಗರಾದ ಅನಿಲ್‍ಕುಂಬ್ಳೆ ಅವರು ಈ ಗೌರವಕ್ಕೆ ಭಾಜನರಾಗಿದ್ದರು.

Sri Raghav

Admin