ಚಿನ್ನ ಕರಗಿಸುವ ಅಂಗಡಿ ಮೇಲೆ ದಾಳಿ : 36 ಕೆಜಿ ಚಿನ್ನ, 20 ಲಕ್ಷ ನಗದು ವಶ

Social Share

ಮುಂಬೈ,ಜ.25- ಮುಂಬೈನ ಝವೇರಿ ಬಜಾರ್‍ನಲ್ಲಿರುವ ಚಿನ್ನದ ಅಂಗಡಿಯೊಂದರ ಮೇಲೆ ಕಂದಾಯ ಗುಪ್ತಚರ ವಿಭಾಗದ ನಿರ್ದೇಶಕರ (ಡಿಆರ್‍ಐ) ತಂಡ ದಾಳಿ ನಡೆಸಿ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ದೊಡ್ಡ ದಂಧೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಝವೇರಿ ಬಜಾರ್‍ನ ಅಂಗಡಿಯೊಂದರಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಕರಗಿಸುವ ಕೆಲಸ ನಡೆಯುತ್ತಿತ್ತು. ರ್ನಿಧಿಷ್ಟ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಆರ್‍ಐ ತಂಡ, 36 ಕೆಜಿ ಚಿನ್ನ ಮತ್ತು 20 ಲಕ್ಷ ರೂ. ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ.

27ರಂದು ಹುಬ್ಬಳ್ಳಿಗೆ ಅಮಿತ್ ಷಾ ಆಗಮನ, ನಾಯಕರಿಗೆ ಹೊಸ ಜವಾಬ್ದಾರಿ

ಚಿನ್ನದ ಮೌಲ್ಯ ಸುಮಾರು 21 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ.

ಈ ಚಿನ್ನವನ್ನು ವಿವಿಧ ಹವಾಲಾ ದಂಧೆಕೋರರ ಮೂಲಕ ಈ ಚಿನ್ನವನ್ನು ವಿದೇಶದಿಂದ ನಗರಕ್ಕೆ ತರಲಾಗಿತ್ತು. ಡಿಆರ್‍ಐ ನಿರ್ದಿಷ್ಟ ಮಾಹಿತಿ ಪಡೆದ ನಂತರ ಈ ದಾಳಿ ನಡೆಸಲಾಗಿದೆ ಡಿಆರ್‍ಐ ಅಧಿಕಾರಿಗಳು ತಿಳಿಸಿದ್ದಾರೆ.

DRI, gold, smuggling ,seizes, 36 kg gold, worth, Rs 21 crore, Mumbai,

Articles You Might Like

Share This Article