ಬೇಸಿಗೆ ಆರಂಭಕ್ಕೂ ಮುನ್ನವೆ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ

Social Share

ಬೆಂಗಳೂರು,ಫೆ.13- ಬೇಸಿಗೆ ಆರಂಭಕ್ಕೂ ಮುನ್ನವೆ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲುಮುಟ್ಟಿದೆ.ಬಿಸಿಲು ಏರಿಕೆಯಾಗುತ್ತಿರುವಂತೆ ನಗರದಲ್ಲಿರುವ ಕೊಳವೆಬಾವಿಗಳು ಒಂದೊಂದೆ ಬತ್ತಲು ಶುರುವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

ನೀರಿನ ದಾಹ ನೀಗಿಸುವ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲೇ ಬತ್ತಿರೋದ್ರಿಂದ ನಗರದಲ್ಲಿ ಜಲಗಂಡಾಂತರ ಭೀತಿ ಶುರುವಾಗಿದೆ.ಬೇಸಿಗೆ ಮುನ್ನ ಜಲಮಂಡಳಿ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ನಗರದಲ್ಲಿ ಜಲಕ್ಷಾಮ ಎದುರಾಗುವುದು ಗ್ಯಾರಂಟಿ ಎನ್ನುವಂತಾಗಿದೆ.

ಬೇಸಿಗೆ ಮುನ್ನವೇ ನಗರದಲ್ಲಿರುವ 644ಕ್ಕೂ ಹೆಚ್ಚು ಬೋರ್ ವೆಲ್‍ಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೋರ್‍ವೆಲ್‍ಗಳು ಬತ್ತಿಹೋಗುವ ಸಾಧ್ಯತೆ ಇರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ನಗರದಲ್ಲಿರೋ ಬೋರ್ ವೆಲ್ ಗಳು ಬೇಸಿಗೆ ಆರಂಭದಲ್ಲೇ ಬತ್ತಿ ಹೋಗಿರುವ ಸೋಟಕ ಮಾಹಿತಿಯನ್ನು ನಗರಕ್ಕೆ ನೀರು ಪೂರೈಸುವ ಹೊಣೆ ಹೊತ್ತಿರೋ ಜಲಮಂಡಳಿ ಅಕಾರಿಗಳೇ ಬಿಚ್ಟಿಟ್ಟಿದ್ದಾರೆ.

ಬೇಸಿಗೆ ಶುರುವಾದರೆ ಸಾಕು ಕಾವೇರಿಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಕುಸಿತ ಆಗುತ್ತೆ.ಕಾವೇರಿ ಸಂಪರ್ಕ ಇರುವ ಪ್ರದೇಶಗಳಲ್ಲೇ ನೀರಿಗೆ ಹಾಹಾಕಾರ ಕಾಣುತ್ತೆ. ಇತ್ತ ಹಣ ಕೊಟ್ಟರು ಸಮರ್ಪಕ ಟ್ಯಾಂಕರ್ ನೀರು ಸಿಗಲ್ಲ. ನಗರದ ಹಲವೆಡೆ ನಿವಾಸಿಗಳು ಬೋರ್‍ವೆಲ್‍ಗಳನ್ನ ಅವಲಂಬಿಸಿದ್ದಾರೆ.

ಅಮೆರಿಕದ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಏಲಿಯನ್ಸ್ ಇರಬಹುದೇ.. ?

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರೋ 110 ಹಳ್ಳಿಗಳು ಸೇರಿದಂತೆ ಕಾವೇರಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಕೊಳವೆಬಾವಿಗಳೇ ಆಧಾರವಾಗಿದ್ದು,644 ಬೋರ್ ವೆಲ್ ಬತ್ತಿರೋದು ಜನರ ನಿದ್ದೆಗೆಡಿಸಿದೆ.ಅಂತರ್ಜಲ ಮಟ್ಟ ಕಡಿಮೆಯಾಗಿ ಬೋರ್ ವೆಲ್ ಗಳು ಬತ್ತಿವೆ ಎಂದು ಜಲಮಂಡಳಿ ಅಕಾರಿಗಳು ಹೇಳ್ತಾ ಇದ್ದಾರೆ.

ನಗರದಲ್ಲಿ ಸುಮಾರು 8892 ಬೋರ್ ವೆಲ್ ಗಳು ಇವೆ.ಇತ್ತೀಚಿಗೆ ಬಿಬಿಎಂಪಿಯಿಂದ 2486 ಬೋರ್‍ವೆಲ್‍ಗಳನ್ನ ಮಂಡಳಿ ಸುಪರ್ದಿಗೆ ಸಹ ಪಡೆದಿದೆ. ಇವುಗಳಲ್ಲಿ ಅಂದಾಜು ಶೇ.20ರಷ್ಟು ಬೋರ್‍ವೆಲ್‍ಗಳು ಬತ್ತಿ ಹೋಗಲಿವೆಯಂತೆ.

ಕೊಳವೆಬಾವಿಗಳ ನಿರ್ವಹಣೆಯಲ್ಲಾಗುತ್ತಿರುವ ಲೋಪ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದ ಸುಳಿಯಿಂದ ಪಾರಾಗಲು ತನ್ನ ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳ ನಿರ್ವಹಣೆ ಜವಾಬ್ದಾರಿಯನ್ನು ಜಲಮಂಡಳಿಗೆ ಬಿಬಿಎಂಪಿ ಹಸ್ತಾಂತರ ಮಾಡಿದೆ.

ಜಲ ಮಂಡಳಿ ಮತ್ತು ಬಿಬಿಎಂಪಿ ತಮ್ಮದೇ ಆದ ಕೊಳವೆಬಾವಿಗಳನ್ನು ಕೊರೆಯಿಸಿ ಅವುಗಳಿಂದ ಸಾರ್ವಜನಿಕರು ಹಾಗೂ ಉದ್ಯಾನವನಗಳಿಗೆ ನೀರು ಪೂರೈಸುತ್ತಿವೆ. ತನ್ನ ವ್ಯಾಪ್ತಿಯ ಕೊಳವೆಬಾವಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬಿಬಿಎಂಪಿ ಪರದಾಡುತ್ತಿದೆ.ಹೀಗಾಗಿ ಕೊಳವೆಬಾವಿಗಳ ನಿರ್ವಹಣೆಯನ್ನು ಜಲಮಂಡಳಿಗೆ ವಹಿಸಿಕೊಟ್ಟಿದೆ.

ಆದರೆ ಇತ್ತ ಜಲಮಂಡಳಿ ಕೂಡ ನಿರ್ವಹಣೆ ಮಾಡೋದರಲ್ಲಿ ವಿಫಲವಾಗಿದೆ. ಬೇಸಿಗೆ ಆರಂಭವಾದರು ಕೊಳವೆಬಾವಿಗಳನ್ನ ನಿರ್ವಹಣೆ ಮಾಡುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ.ಬೇಸಿಗೆ ಮುನ್ನ ಬೆಂಗಳೂರು ಕೇಂದ್ರ ವಲಯದಲ್ಲಿ 161,ಪೂರ್ವ ದಲ್ಲಿ 91,ದಕ್ಷಿಣ ದಲ್ಲಿ-98 ಹಾಗೂ ಉತ್ತರ ವಲಯದಲ್ಲಿ 294 ಬೋರ್‍ವೆಲ್‍ಗಳು ಬತ್ತಿಹೋಗಿವೆ ಎಂದು ಜಲಮಂಡಳಿ ಮುಖ್ಯ ಅಭಿಯಂತರ ರಂಗಸ್ವಾಮಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೇಸಿಗೆ ಎದುರಿಸಲು ಜಲಮಂಡಳಿ ಸಮರ್ಪಕವಾಗಿ ಸಜ್ಜಾಗಿಲ್ಲ.ಕಾವೇರಿ ನದಿಯಿಂದ ಪೂರೈಕೆಯಾಗೋ ನೀರನ್ನು ಸಹ ಸರಿಯಾಗಿ ಪೂರೈಕೆ ಮಾಡ್ತಿಲ್ಲ.ಬರೋ ಅರ್ಧದಷ್ಟು ನೀರು ಸೋರಿಕೆಯಲ್ಲೇ ಮಾಯವಾಗ್ತಿದೆ.ಇತ್ತ ಇರೋ ಬೋರ್‍ವೆಲ್‍ಗಳನ್ನ ನಿರ್ವಹಣೆ ಮಾಡದೆ,ನಿರ್ಲಕ್ಷ್ಯ ವಹಿಸಿರುವುದರಿಂದ ಆತಂಕ ಎದುರಾಗಿದೆ.

#DrinkingWater, #Bengaluru, #BWSSB,

Articles You Might Like

Share This Article