ರಿಷಭ್‍ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್‍ಮಾನ್‍ಗೆ ಸನ್ಮಾನ

Social Share

ನವದೆಹಲಿ, ಜ.1- ಖ್ಯಾತ ಕ್ರಿಕೆಟಿಗ ರಿಷಭ್ ಪಂತ್‍ರ ಜೀವ ಉಳಿಸಲು ಸಹಕರಿಸಿದ ಬಸ್ ಚಾಲಕ ಸುಶೀಲ್ ಮಾನ್‍ರನ್ನು ಗೌರವಿಸಲು ಉತ್ತರ ಖಂಡ್ ಸರ್ಕಾರವು ತೀರ್ಮಾನಿಸಿದೆ.

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಸಮಾರಂಭದಲ್ಲಿ ಉತ್ತರ ಖಂಡ್‍ನ ಮುಖ್ಯಮಂತ್ರಿ ಶ್ರೀ ಪುಷ್ಕರ್ ಧಾಮಿ ಅವರು ಪದಕ ನೀಡಿ ಸನ್ಮಾನಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.

ಕಳೆದ ಶುಕ್ರವಾರ ಕ್ರಿಕೆಟಿಗ ರಿಷಭ್ ಪಂತ್ ಚಲಿಸುತ್ತಿದ್ದ ಐಷಾರಾಮಿ ಕಾರು ನವದೆಹಲಿ- ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ಅಪಘಾತಕ್ಕೆ ಒಳಗಾಗಿತ್ತು. ರಸ್ತೆಯ ಡಿವೈಡರ್‍ಗೆ ರಿಷಭ್ ಪಂತ್‍ರ ಕಾರು ಡಿಕ್ಕಿ ಹೊಡೆದು ಎರಡು ಮೂರು ಬಾರಿ ಉರುಳಿ ನೆಲಕ್ಕೆ ಅಪ್ಪಳಿಸಿದೆ, ಈ ವೇಳೆ ಕಾರಿಗೆ ಸಂಪೂರ್ಣವಾಗಿ ಬೆಂಕಿ ಒತ್ತುಕೊಂಡಿದೆ. ಪಂತ್ ಕಾರಿನಿಂದ ಹೊರಗೆ ಬರಲು ಹರಸಾಹಸ ಪಡುತ್ತಿದ್ದರು.

ಈ ವೇಳೆ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್‍ನ ಸುಶೀಲ್ ಮಾನ್ ಹಾಗೂ ಕಂಡೆಕ್ಟರ್ ಪರಮಜಿತ್ ಸಿಂಗ್ ಅವರು ನೆರವಿಗೆ ಆಗಮಿಸಿ, ಕಾರಿನ ಗಾಜನ್ನು ಒಡೆದು ರಿಷಭ್ ಪಂತ್‍ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
ಅಪಘಾತದಲ್ಲಿ ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳು, ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಹರಿದುಹೋಗಿದೆ ಮತ್ತು ಅವರ ಬಲ ಮಣಿಕಟ್ಟು, ಪಾದದ ಮತ್ತು ಕಾಲ್ಬೆರಳುಗಳಿಗೆ ಗಾಯವಾಗಿದೆ ಮತ್ತು ಅವರ ಬೆನ್ನಿನ ಮೇಲೆ ಸವೆತದ ಗಾಯಗಳಾಗಿದ್ದವು.

ನಕಲಿ ದಾಖಲೆ ಸೃಷ್ಟಿಸಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆ: ವಂಚಕ ಖಾಕಿ ಬಲೆಗೆ

ರಿಷಭ್ ಪಂತ್ ಅವರಿಗೆ ಸದ್ಯ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸದ್ಯದಲ್ಲೇ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ನೀಡುವ ಸಲುವಾಗಿ ನವದೆಹಲಿಗೆ ಶಿಫ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಡೆಲ್ಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶಕ ಶ್ಯಾಮ್ ಶರ್ಮಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆಯಲ್ಲಿದ್ದ ಹಳ್ಳವನ್ನು ತಪ್ಪಿಸಲು ಹೋಗಿದ್ದರಿಂದ ರಿಷಭ್ ಪಂತ್ ಕಾರು ಅಪಘಾತಕ್ಕೊಳಗಾಗಿತ್ತು ಎಂದು ತಿಳಿಸಿದ್ದಾರೆ.

ವರ್ಷಪೂರ್ತಿ ವರ್ಚಸ್ಸು ಕಾಪಾಡಿಕೊಂಡರೆ ರಾಹುಲ್ ರಾಜಕೀಯವಾಗಿ ಯಶಸ್ವಿ

ರಿಷಭ್ ಪಂತ್‍ಗೆ 3-4 ತಿಂಗಳುಗಳ ಕಾಲ ವಿಶ್ರಾಂತಿ ಅವಶ್ಯಕತೆ ಯಿರುವುದರಿಂದ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಹಾಗೂ ಐಪಿಎಲ್‍ನಿಂದ ದೂರ ಉಳಿಯಬಹುದು.

Rishabh Pant, bus driver, Sushil Kumar, saved, Driver, conductor, Rishabh Pant, honoured, Haryana Roadways,

Articles You Might Like

Share This Article