ಶಿವಮೊಗ್ಗ,ಫೆ.23- ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ಇಡಲು ನಗರದಲ್ಲಿ ಈಗ ಡ್ರೋಣ್‍ಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ನುರಿತ ತಂಡವೊಂದು ನಗರಕ್ಕೆ ಆಗಮಿಸಿದ್ದು ಕಾರ್ಯಾಚರಣೆ ಆರಂಭಿಸಿದೆ. ನಕ್ಸಲ್ ನಿಗ್ರಹ ಪಡೆ, ಕರಾವಳಿ ಕಾವಲು ಪಡೆ, ಉತ್ತರಕನ್ನಡ ಹಾಗೂ ಮಂಡ್ಯ ಜಿಲ್ಲೆಗಳಿಂದ ಪೊಲೀಸರ ತಂಡ ಇಲ್ಲಿಗೆ ಆಗಮಿಸಿವೆ.
ಬೆಳಗ್ಗೆಯಿಂದಲೇ ಡ್ರೋಣ್‍ಗೆ ಕ್ಯಾಮೆರಾಗಳನ್ನು ಅಳವಡಿಸಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಚಿತ್ರೀಕರಿಸಲಾಗುತ್ತಿದೆ. ಕಫ್ರ್ಯೂ ನಡುವೆಯೂ ನಿನ್ನೆ ಕೆಲವು ದುಷ್ಕøತ್ಯಗಳು ನಡೆದಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಪತ್ತೆಗೆ ತಂತ್ರಜ್ಞಾನವನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ.
ಸುಮಾರು 5 ಕಿ.ಮೀವರೆಗೂ ಈ ಕ್ಯಾಮೆರಾಗಳು ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದು, ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲು ವಿಶೇಷ ಕೇಂದ್ರವನ್ನು ಕೂಡ ತೆರೆಯಲಾಗಿದೆ.
