ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ದ್ವಿಗುಣ

Social Share

ನವದೆಹಲಿ, ನ.13- ಪಾಕಿಸ್ತಾನದ ಗಡಿಯುದ್ದಕ್ಕೂ ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭಾರತದೊಳಗೆ ನುಗಿಸುವ ಪಯತ್ನಗಳು ದ್ವಿಗುಣಗೊಂಡಿದ್ದು ಬಿಎಸ್‍ಎಫ್ ಪಡೆಗಳು ಸಾಕಷ್ಟು ಹೊಡೆದುರುಳಿಸಿದೆ ಬೆದರಿಕೆಯ ಅಗಾಧತೆ ಹವ್ವಗಿದೆ ಎಂದು ಡೈರೆಕ್ಟರ್ ಜನರಲ್ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕಳೆದ 2020 ರಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 79 ಡ್ರೋನ್ ಹಾರಾಟ ಬಿಎಸ್‍ಎಫ್ ಪತ್ತೆ ಮಾಡಿತ್ತ ಆದರೆ ಕಳೆದ ವರ್ಷ 109 ಕ್ಕೆ ಏರಿದ್ದು ಮತ್ತು ಈ ವರ್ಷ ಈವರೆಗೆ 266 ಕಂಡುಬಂದಿದ್ದು ಸಂಖ್ಯೆ ದ್ವಿಗುಣಗೊಂಡಿದೆ ತಿಳಿಸಿದ್ದಾರೆ.

ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನಾದ್ಯಂತ ಹಾದುಹೋಗುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ 3,000 ಕಿ.ಮೀ.ಗೂ ಹೆಚ್ಚು ಕಾವಲು ಕಾಯುವ ಬಿಎಸ್‍ಎಫ್‍ಗೆಸವಾಲಾಗಿದೆ.

3 ಹಂತಗಳಲ್ಲಿ ಜೆಡಿಎಸ್ ಪಟ್ಟಿ ಬಿಡುಗಡೆ

ಸಾಕಷ್ಟು ಎತ್ತರದಲ್ಲಿ ಅಧುನಕ ಡ್ರೋನ್‍ನಳು ಹಾರಾಟ ಮಾಡಿ ಭಾರತದೊಳಗೆ ಬರಬಹುದು ಕಳೆದ ಕೆಲವು ವರ್ಷಗಳಿಂದ ತಲೆ ಎತ್ತುತ್ತಿರುವ ಈ ಗಡಿಯಾಚೆಗಿನ ಕಾನೂನುಬಾಹಿರ ಚಟುವಟಿ ನಮಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದರು.

ಈ ನಿಟ್ಟಿನಲ್ಲಿ ಡ್ರೋನ್ ಸಂಶೋಧನ ಅನ್ನು ಅಧ್ಯಯನ ಮಾಡಲು ದೆಹಲಿಯಲ್ಲಿ ಇತ್ತೀಚೆಗೆ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ ಇದರ ಫಲಿತಾಂಶಗಳು ತುಂಬಾ ಉತ್ತೇಜಕವಾಗಿವೆ ಎಂದು ಅವರು ಹೇಳಿದರು.

ಫೋರೆನ್ಸಿಕ್ ಲ್ಯಾಬ್ ಅನ್ನು ವೆಬ್‍ನಾರ್ ಮೂಲಕ ಉದ್ಘಾಟಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲೆ ಅವರಿಗೆ ಮಾಹಿತಿ ನೀಡುವಾಗ ಡಿಜಿ ಈ ವಿಷಯ ತಿಳಿಸಿದರು. ನಮಗೀಗ ಪ್ರಮುಖ ಅಪರಾ ಕಳ್ಲಸಗಣೆ ಪ್ರದೇಶಗಳೆಂದರೆ ಪಂಜಾಬ್ ಗಡಿ , ಈ ವರ್ಷ 215 ಡ್ರೂನ್ ಕಂಡಿದೆ ಅದೇ ರೀತಿ ಜಮ್ಮು -ಕಾಶೀರ ವಲಯದಲ್ಲೂ ಸಲ್ಪ ಹೇರಿಕೆ ಕಂಡಿದೆ.

ಡ್ರೋನ್‍ಗಳ ಮೂಲಕ ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು, ನಕಲಿ ಕರೆನ್ಸಿ ಮತ್ತು ಎಲ್ಲಾ ರೀತಿಯ ವಸ್ತುಗಳನ್ನು ತರುತ್ತಿದ್ದಾರೆ ಸಮಸ್ಯೆಯು ಗಂಭೀರವಾಗಿದೆ ಎಂದಿದ್ದಾರೆ. ಆರಂಭದಲ್ಲಿ ಬಿಎಸ್‍ಎಫ್ ಏನು ಮಾಡಬೇಕೆಂದು ತಿಳಿಯದ ಪರಿಸ್ತಿತಿ ಇತ್ತಿ ಈ ಸವಾಲನ್ನು ಎದುರಿಸಿತು ಆದರೆ ಡ್ರೋನ್ ಹೊಡೆದುರುಳಿಸಿದ್ದಾಗ ಅದು ಎಲ್ಲಿಂದ ಬರುತ್ತಿದೆ ಅಥವಾ ಹೋಗುತ್ತಿದೆ ಎಂದು ಸುಳಿವಿಲ್ಲ ಸಿಗುತ್ತಿರಲಿಲ್ಲ ಎಂದು ಡಿಜಿ ಹೇಳಿದರು.

ಈಗ ನಾವು ವಿಧಿವಿಜ್ಞಾನದ ಭಾಗಕ್ಕೆ ಬರಲು ಪ್ರಾರಂಭಿಸಿದ್ದೇವೆ. ಈ ಡ್ರೋನ್‍ಗಳು ಕಂಪ್ಯೂಟರ್‍ಗಳು ಮತ್ತು ಮೊಬೈಲ್ ಫೋನ್‍ಗಳಂತಹ ಕಂಪ್ಯೂಟೇಶನ್ ಸಾಧನಗಳಿಗೆ ಹೋಲುವ ಚಿಪ್‍ಗಳನ್ನು ಹೊಂದಿವೆ ಎಂದು ನಾವು ಅರಿತುಕೊಂಡೆವು.

ರಾಜ್ಯದಲ್ಲಿ ಇನ್ನೂ 2 ದಿನ ಜಿಟಿ ಜಿಟಿ ಮಳೆ

ಸೈಬರ್ ಅಪರಾಧಗಳನ್ನು ಪರಿಹರಿಸುವಲ್ಲಿ ಡಿಜಿಟಲ್ ಫೋರೆನ್ಸಿಕ್ಸ್ ಸಹಾಯ ಮಾಡುವುದರಿಂದ, ನಾವು ಇಲ್ಲಿಯೂ ಉತ್ತರಗಳನ್ನು ಪಡೆದುಕೊಂಡಿದ್ದೇವೆ ಎಂದು ಸಿಂಗ್ ಹೇಳಿದರು. ಈ ಫೋರೆನ್ಸಿಕ್ ಲ್ಯಾಬ್ ರಚಿಸಲು ಸುಮಾರು 50 ಲಕ್ಷ ಖರ್ಚು ಮಾಡಿಲಾಗಿದೆ ಎಂದರು.

Articles You Might Like

Share This Article