ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಭಾಷಣದ ಹೈಲೈಟ್ಸ್

Social Share

ನವದೆಹಲಿ, ಜು.25- ದೇಶದ ಉನ್ನತ ಸಾಂವಿಧಾನಿಕ ಸ್ಥಾನಕ್ಕೆ ಆಯ್ಕೆಯಾಗಿರುವುದು ಆಕೆಯ ವೈಯಕ್ತಿಕ ಸಾಧನೆಯಲ್ಲ ಬದಲಾಗಿ ಭಾರತದ ಪ್ರತಿಯೊಬ್ಬ ಬಡವರ ಸಾಧನೆಯಾಗಿದೆ ಎಂದು ಅಧ್ಯಕ್ಷೆ ದ್ರೌಪದಿ ಮುರ್ಮು ಹೇಳಿದ್ದಾರೆ.

ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ 64 ವರ್ಷದ ಮುರ್ಮು ಅವರು ತಮ್ಮ ಸ್ವೀಕಾರ ಭಾಷಣದಲ್ಲಿ, ದೇಶದ ವಂಚಿತರು, ಬಡವರು, ದಲಿತರು ಮತ್ತು ಬುಡಕಟ್ಟು ಜನರು ತಮ್ಮ ಪ್ರತಿಬಿಂಬವನ್ನು ತಮ್ಮಲ್ಲಿ ನೋಡಬಹುದು, ಇದು ತನಗೆ ದೊಡ್ಡ ತೃಪ್ತಿಯ ವಿಷಯವಾಗಿದೆ ಎಂದರು.

ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ಮತ್ತು ಸಬ್ ಕಾ ಕರ್ತವ್ಯ (ಎಲ್ಲರ ಕರ್ತವ್ಯ) ದ ಅವಳಿ ಮಾರ್ಗಗಳಲ್ಲಿ ತ್ವರಿತವಾಗಿ ದೇಶ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಪ್ರತಿಯೊಬ್ಬ ನಾಗರೀಕರ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ಹೇಳಿದರು.

ಸ್ವಾತಂತ್ರ್ಯತ್ತೋರ ಭಾರತದಲ್ಲಿ ಜನಿಸಿದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು,75 ನೇ ಸ್ವಾತಂತ್ರ್ಯೋತ್ಸವದಲ್ಲಿ ಈ ಜವಾಬ್ದಾರಿ ವಹಿಸಿಕೊಂಡಿರುವುದು ನನ್ನ ಅದೃಷ್ಟ ಎಂದರು.ಭಾರತದ ಮೊದಲ ಬುಡಕಟ್ಟು ಅಧ್ಯಕ್ಷೆಯಾಗಿರುವ ಅವರು, ಒಂದು ಸಣ್ಣ ಹಳ್ಳಿಯ ಬುಡಕಟ್ಟು ಕುಟುಂಬದಲ್ಲಿ ಬೆಳೆದು, ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದೇ ಕನಸಿನಂತಿತ್ತು. ಕಾಲೇಜು ಶಿಕ್ಷಣಕ್ಕೆ ದಾಖಲಾದ ಹಳ್ಳಿಯ ಮೊದಲ ವ್ಯಕ್ತಿ ತಾವು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದನ್ನು ನೆನಪಿಸಿಕೊಂಡರು.

ಇದು ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಸಲ್ಲುವ ಗೌರವವಾಗಿದೆ, ಪ್ರಗತಿ ಹೊಂದುತ್ತಿರುವ ದೇಶಕ್ಕೆ ತಾವು ಅಧ್ಯಕ್ಷರಾಗಿ ಮುನ್ನೆಡೆಸುವುದು ಹೆಮ್ಮೆಯ ಸಂಗತಿಯಾಗಿದೆ. ದೇಶದ ನಾಗರೀಕರು ಅದರಲ್ಲೂ ಯುವಕರು ಮತ್ತು ಮಹಿಳೆಯರ ಹಿತಾಸಕ್ತಿಯೇ ತಮ್ಮ ಆದ್ಯತೆ ಎಂದು ಹೇಳಿದರು.

ಪ್ರತಿಯೊಬ್ಬ ಸಹೋದರಿ ಮತ್ತು ಮಗಳು ಮತ್ತಷ್ಟು ಸಬಲೀಕರಣಗೊಳ್ಳುವುದು ಮುಂದುವರೆಯಬೇಕು, ಪ್ರತಿಕ್ಷೇತ್ರದಲ್ಲೂ ಅವರ ಕೊಡುಗೆಗಳು ಮತ್ತಷ್ಟು ಹೆಚ್ಚಬೇಕು. ಹಲವು ಭಾಷೆಗಳು, ಧರ್ಮಗಳು, ಆಹಾರ, ಹವ್ಯಾಸ ಮತ್ತು ಉಡುಗೆಗಳನ್ನು ಅಪ್ಪಿಕೊಂಡಿರುವ ವೈವಿಧ್ಯ ಭಾರತವನ್ನು ಮತ್ತಷ್ಟು ಸದೃಢಗೊಳಿಸಿ, ಏಕ ಭಾರತ್-ಸಶಕ್ತ ಭಾರತ ನಿರ್ಮಿಸುವ ಗುರಿತ ತಮ್ಮದು.

ದೇಶದ ಸಂಸದೀಯ ಪ್ರಜಾಪ್ರಭುತ್ವದ 75ನೇ ವರ್ಷದಲ್ಲಿ ಎಲ್ಲರ ಒಳ್ಳಗೊಳ್ಳುವಿಕೆ ಮತ್ತು ಒಮ್ಮತದ ಸಂಕಲ್ಪದಿಂದ ಅಭಿವೃದ್ಧಿ ಸಾಧ್ಯವಾಗಲಿದೆ. ಅಮೃತ್ ಕಾಲ್ನ ಹೊಸ ಚಿಂತನೆಗಳೊಂದಿಗೆ 75ನೇ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ಸಾವಿರಾರು ವರ್ಷಗಳಿಂದ ಬುಡಕಟ್ಟು ಸಮುದಾಯಗಳು ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿವೆ. ಅರಣ್ಯ ಮತ್ತು ನೀರಿನ ಅಗತ್ಯವನ್ನು ಚೆನ್ನಾಗಿ ಅರಿತವಳಾಗಿದ್ದೇನೆ. ಪ್ರಕೃತಿಯಿಂದ ಪಡೆದುಕೊಳ್ಳುವ ಸಂಪನ್ಮೂಲ ಮತ್ತು ಸೇವೆಗೆ ಪ್ರತಿಯಾಗಿ ನಾವು ಗೌರವದಿಂದ ಸೇವೆ ಮಾಡುವುದು ಪರಸ್ಪರ ಪ್ರಯೋಜನಕಾರಿ ಎಂದರು.

ಭಾರತವು ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ.ಕೋವಿಡ್-19ರ ಸಾಂಕ್ರಾಮಿಕ ರೋಗದ ನಿರ್ವಹಣೆ ಮತ್ತು ಅದನ್ನು ಹತ್ತಿಕ್ಕಲು 200 ಕೋಟಿಗೂ ಹೆಚ್ಚು ಲಸಿಕೆ ಡೋಸ್ ನೀಡಿಕೆಯನ್ನು ಶ್ಲಾಘಿಸಿದರು.

ಭಾರತ ತನ್ನನ್ನು ತಾನಷ್ಟೆ ಕಾಳಜಿ ಮಾಡುವುದಿಲ್ಲ. ಇತರರಿಗೂ ಸಹಾಯ ಮಾಡಲಿದೆ ಎಂಬುದು ಕೋವಿಡ್ ವೇಳೆಯಲ್ಲಿ ಕಂಡು ಬಂದಿದೆ. ಜಾಗತಿಕ ಕೂಟಗಳು ಭಾರತದಿಂದ ಹಲವು ನಿರೀಕ್ಷೆಗಳನ್ನು ಹೊಂದಿವೆ ಎಂದ ಅವರು, ಕೇಂದ್ರ ಸರ್ಕಾರದ ವೋಕಲ್ ಫಾರ್ ಲೋಕಲ್ ಮತ್ತು ಡಿಜಿಟಲ್ ಇಂಡಿಯಾ ಉತ್ತೇಜನಗಳನ್ನು ಶ್ಲಾಘಿಸಿದರು. ಖ್ಯಾತ ಸಾಹಿತಿ ಭೀಮ್ ಬೋಯಿ ಜೀ ಅವರ ಸಾಲುಗಳನ್ನು ಉಲ್ಲೇಖಿಸಿ ಭಾವನಾತ್ಮಕವಾಗಿ ಮಾತನಾಡಿದರು.

Articles You Might Like

Share This Article