BIG NEWS : ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕಾರ ಸ್ವೀಕಾರ

Social Share

ನವದೆಹಲಿ, ಜು.25- ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪತಿ ಮುರ್ಮು ಇಂದು ಪ್ರಮಾಣ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದೇಶದ ಪ್ರಥಮ ಪ್ರಜೆಯಾಗಿ ಭರ್ಜರಿ ಬಹುಮತದಿಂದ ಆಯ್ಕೆಯಾದ ದ್ರೌಪತಿ ಮುರ್ಮು ಅವರಿಗೆ ಇಂದು ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರಿಂಕೋರ್ಟ್‍ನ ಮುಖ್ಯನ್ಯಾಯ ಮೂರ್ತಿ ಎನ್.ವಿ.ರಮಣ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಸಿದರು.

ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನ್ಯಾಯ್ಡು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತೀನ್ ಗಡ್ಕರಿ, ಎಸ್.ಜಯಶಂಕರ್, ಪ್ರಹ್ಲಾದ್‍ಜೋಷಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮುರ್ಮು ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ನಿರ್ಗಮಿತ ಹಾಗೂ ಚುನಾಯಿತರಾಷ್ಟ್ರಪತಿಯವರು ಭವ್ಯ ರಾಷ್ಟ್ರಪತಿ ಭವನದಿಂದ ಭವ್ಯ ಮೆರವಣಿಗೆಯಲ್ಲಿ ಗಣ್ಯರೊಂದಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದರು. ಈ ವೇಳೆ ರಕ್ಷಣಾ ಪಡೆಗಳು ರಾಷ್ಟ್ರಪತಿ ಅವರಿಗೆ ಗೌರವ ವಂದನೆ ಸಲ್ಲಿಸಿದವು.

21 ಕುಶಾಲ ತೋಪು ಸಿಡಿಸುವ ಸಂಭ್ರಮದ ನಡುವೆ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಪ್ರತಿ ಹಂತದಲ್ಲೂ ಘನತವೆತ್ತ ಮೌಲ್ಯ ಹಾಗೂ ಶಿಷ್ಠಾಚಾರಗಳಿಗೆ ಆದ್ಯತೆ ನೀಡಲಾಯಿತು. ವೈಭೋಗದ ಸಾಂಪ್ರದಾಯಗಳು ಕಣ್ಣು ಕೋರೈಸಿದವರು.

ಸೆಂಟ್ರಲ್ ಹಾಲ್‍ಗೆ ಆಗಮಿಸಿದ ದ್ರೌಪತಿ ಮುರ್ಮು ಅವರನ್ನು ಗುಡುಗಿನ ಅಬ್ಬರದ ಚಪ್ಪಾಳೆಗಳು ಸ್ವಾಗತಿಸಿದವು. ಸಭಾಂಗಣದ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಒಡಿಸಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.

ಬಳಿಕ ಔಪಚಾರಿಕ ಕಾಗದ ಪತ್ರಗಳಿಗೆ ಸಹಿ ಹಾಕಿದ ಬಳಿಕ ಭಾಷಣ ಮಾಡಿದ ಮುರ್ಮು ಅವರು, ನನ್ನ ಆಯ್ಕೆ ಬಡ ಭಾರತೀಯನು ಕನಸನ್ನು ಕಾಣ ಬಹುದು ಮತ್ತು ಅದನ್ನು ಈಡೇರಿಸಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದೆ ಎಂದರು.

Articles You Might Like

Share This Article