ರಾಷ್ಟ್ರಪತಿಯಗಿ ದ್ರೌಪದಿ ಮುರ್ಮು ನಾಳೆ ಪ್ರಮಾಣವಚನ ಸ್ವೀಕಾರ

Social Share

ನವದೆಹಲಿ, ಜು.24- ದೇಶದ ಅತ್ಯುನ್ನತ ಹುದ್ದೆಯ್ದಾ ರಾಷ್ಟ್ರಧ್ಯಕ್ಷರಾಗಿ ದ್ರೌಪದಿ ಮುರ್ಮ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಸೋಮವಾರ ಬೆಳಗ್ಗೆ 10.15ಕ್ಕೆ ಸಮಾರಂಭ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೂತನ ರಾಷ್ಟ್ರಾಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ರಾಷ್ಟ್ರಪತಿಯವರು 21 ಗನ್ ಸೆಲ್ಯೂಟ್ ಸ್ವೀಕರಿಸಿದ ಬಳಿಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಭಾಷಣ ಮಾಡಲಿದ್ದಾರೆ. ಸಮಾರಂಭಕ್ಕೂ ಮೊದಲು ನಿರ್ಗಮಿತ ಅಧ್ಯಕ್ಷರು ಮತ್ತು ನೂತನ ಅಧ್ಯಕ್ಷರು ವಿಧ್ಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸಲಿದ್ದಾರೆ.

ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳ ಮುಖ್ಯಸ್ಥರು, ಸಂಸತ್ತಿನ ಸದಸ್ಯರು ಮತ್ತು ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‍ನ ಸಮಾರಂಭದ ಮುಕ್ತಾಯದ ನಂತರ, ನೂತನ ರಾಷ್ಟ್ರಾಧ್ಯಕ್ಷರು ರಾಷ್ಟ್ರಪತಿ ಭವನಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಸೇವಾ ಗಾರ್ಡ್ ಆಫ್ ಆನರ್ ನೀಡಲಾಗುತ್ತದೆ. ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಸಂದರ್ಭದಲ್ಲಿ ಹಾಜರಿಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ 64 ವರ್ಷದ ದ್ರೌಪದಿ ಮುರ್ಮು 6,76,803 ಮತಗಳನ್ನು ಪಡೆದು, ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾರನ್ನು ಸೋಲಿಸಿದ್ದರು. ಈ ಮೂಲಕ ಬುಡಕಟ್ಟು ಸಮುದಾಯದ ಮಹಿಳೆ ಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆಯಾಗಿದ್ದಾರೆ.

Articles You Might Like

Share This Article