ದೇಶದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಳ, ದುಶ್ಚಟಕ್ಕೆ ದಾಸರಾದ 62ಲಕ್ಷಕ್ಕೂ ಹೆಚ್ಚು ಅಪ್ರಾಪ್ತರು..!

Social Share

ನವದೆಹಲಿ,ಜು.21- ದೇಶದಲ್ಲಿ ದಿನೇ ದಿನೆ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. 10ರಿಂದ 17 ವರ್ಷದೊಳಗಿನ 62 ಲಕ್ಷಕ್ಕೂ ಹೆಚ್ಚು ಅಪ್ರಾಪ್ತರು ಕೊಕೇನ್, ಗಾಂಜಾದಂತಹ ಅಪಾಯಕಾರಿ ವ್ಯಸನಗಳಿಗೆ ದಾಸರಾಗಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಲಿಖಿತ ಉತ್ತರ ನೀಡಿದ್ದು, ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ (ಏಮ್ಸ್)ಯ ಮಾದಕ ವ್ಯಸನಿಗಳ ಚಿಕಿತ್ಸಾ ಕೇಂದ್ರದ ವರದಿಯ ಪ್ರಕಾರ ಅಪ್ರಾಪ್ತರು ದುಶ್ಚಟಕ್ಕೆ ಒಳಗಾಗುತ್ತಿರುವ ಮಾಹಿತಿ ನೀಡಲಾಗಿದೆ. 18ರಿಂದ 75 ವರ್ಷದೊಳಗಿನ 4.8 ಕೋಟಿ ಮಂದಿ ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂದು ತಿಳಿಸಲಾಗಿದೆ.

ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ, 2019ರಿಂದ 2021ರವರೆಗೆ 3,92,643 ಮಂದಿ ದೇಶದ ಪೌರತ್ವವನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ.

ಭಾರತದ ಪೌರತ್ವ ತೊರೆದ ಅಷ್ಟು ಮಂದಿ ವಿಶ್ವದ 120 ದೇಶಗಳಲ್ಲಿ ಅಲ್ಲಿನ ಪೌರತ್ವ ಪಡೆದಿದ್ದಾರೆ. ಅತಿ ಹೆಚ್ಚು ಅಂದರೆ 1.70 ಲಕ್ಷ ಮಂದಿ ಅಮೆರಿಕದ ಪೌರತ್ವ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ. ಸೈಬರ್ ಅಪರಾಧಗಳು ಕೂಡ ಭಾರತದಲ್ಲಿ ತೀವ್ರವಾಗಿ ಹೆಚ್ಚಳವಾಗಿವೆ. ಭಾರತೀಯ ಕಂಪ್ಯೂಟರ್ ತ್ವರಿತ ಪ್ರತಿಕ್ರಿಯಾ ತಂಡ (ಸಿಇಆರ್ಟಿ) ವರದಿಯ ಪ್ರಕಾರ 2019ರಿಂದ ಇಲ್ಲಿಯವರೆಗೂ ದೇಶದಲ್ಲಿ 36.29 ಲಕ್ಷ ಸೈಬರ್ ಕ್ರೈಮ್ಗಳು ವರದಿಯಾಗಿವೆ ಎಂದರು.

ಕೇಂದ್ರ ಸಚಿವ ಅಜಯ್ಕುಮಾರ್ ಮಿಶ್ರಾ ಸಂಸತ್ಗೆ ಉತ್ತರ ನೀಡಿದ್ದು, 2019ರಲ್ಲಿ 3,94,499, 2020ರಲ್ಲಿ 11,58,208, 2021ರಲ್ಲಿ 14,02,809, 2022ರ ಜೂನ್ವರೆಗೂ 6,74,021 ಸೈಬರ್ ಭದ್ರತಾ ಪ್ರಕರಣಗಳು ವರದಿಯಾಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪರಾಧಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

Articles You Might Like

Share This Article