ನವದೆಹಲಿ, ಜ.27- ಡ್ರಗ್ಸ್ ಪ್ರಕರಣದಲ್ಲಿ ಶಿರೋಮಣಿ ಅಕಾಲಿದಳ ನಾಯಕ ಬಿಕ್ರಂಸಿಂಗ್ ಮಜೀಥಿಯಾ ಅವರು ಅಂಗೀಕರಿಸಿರುವ ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸುವುದಾಗಿ ಹೇಳಿದೆ. ಸೋಮವಾರ ಈ ಅಜಿಯ ವಿಚಾರಣೆ ನಡೆಯಲಿದ್ದು, ಅಲ್ಲಿತನಕ ಅಂದರೆ ಜ.31ರ ವರೆಗೆ ಮಜೀಥಿಯಾ ಅವರನ್ನು ಬಂಧಿಸಬಾರದು ಎಂದು ಪಂಜಾಬ್ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಆರೋಪಿಯು ರಾಜಕೀಯ ದ್ವೇಷ ಎದುರಿಸುತ್ತಿರುವುದರಿಂದ ಅವರಿಗೆ ತತ್‍ಕ್ಷಣವೇ ನಿರೀಕ್ಷಣಾ ಜಾಮೀನು ಆಗತ್ಯವಿದೆ ಎಂದು ಮಜೀಥಿಯಾ ಅವರ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರ ಹೇಳಿಕೆಗಳನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು.
ಎನ್‍ಡಿಪಿಸಿ ಅನಿಯಮದ ಪ್ರಕಾರ ಮಜೀಥಿಯಾ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜ.24ರಂದು ತಿರಸ್ಕರಿಸಿತ್ತು.
