ಡ್ರಗ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ

Social Share

ಬೆಂಗಳೂರು,ಮಾ.6- ಸಿಂಥೆಟಿಕ್ ಡ್ರಗ್ಸ್‍ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು, ಒಬ್ಬ ಮಾದಕ ವ್ಯಸನಿ ಸೇರಿದಂತೆ ನಾಲ್ವರನ್ನು ಈಶಾನ್ಯ ವಿಭಾಗದ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಪ್ರಕೃತಿ ನಗರದ ಒಂದನೇ ಕ್ರಾಸ್ ಬಳಿ ಮೂವರು ಎರಡು ದ್ವಿಚಕ್ರ ವಾಹನದಲ್ಲಿ ಎಂಡಿಎಂ ಸಿಂಥೆಟಿಕ್ ಡ್ರಗನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಇನ್‍ಸ್ಪೆಕ್ಟರ್‍ಗಳಾದ ಕೆ.ಪಿ.ಸತ್ಯನಾರಾಯಣರಾವ್, ಸಂತೋಷ್ ರಾಮ್ ಅವರ ತಂಡ ದಾಳಿ ನಡೆಸಿದೆ.
ಜಾಲ ಹೋಬಳಿಯ ಸಾತನೂರು ವಿಲೇಜ್‍ನಲ್ಲಿ ವಾಸವಿರುವ ನೈಜೀರಿಯಾ ಮೂಲದ ಅಲ್‍ಉದೆಉದೆ ಉಜಾ(36), ಇಕೆಚುಕ್ವಾ ಡ್ಯಾನಿಯಲ್(39), ಯಲಹಂಕ ನಿವಾಸಿ ತಸ್ಲೀಮ್(20) ಹಾಗೂ ಮೊಹಮ್ಮದ್ ಉಮರ್ ಮುಕ್ತಿಯಾರ್(23) ಅವರನ್ನು ಬಂಧಿಸಲಾಗಿದೆ.
ನೈಜೀರಿಯಾ ಮೂಲದವರು ಮಾದಕವಸ್ತು ಮಾರಾಟದಲ್ಲಿ ಪುನರಾವರ್ತಿತ ಆರೋಪಿಗಳಾಗಿದ್ದಾರೆ. ಉಜಾ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ, ಡ್ಯಾನಿಯಲ್ ಮೇಲೆ ರಾಜಗೋಪಾಲನಗರ ಠಾಣೆಯಲ್ಲಿ ಈ ಮೊದಲು ಪ್ರಕರಣ ದಾಖಲಾಗಿದ್ದವು.
ಆರೋಪಿಗಳಿಗೆ ದೆಹಲಿ ಹಾಗೂ ಮುಂಬೈನಿಂದ ಮಾದಕವಸ್ತು ಸರಬರಾಜು ಆಗುತ್ತಿರುವ ಮಾಹಿತಿ ಇದ್ದು ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

Articles You Might Like

Share This Article