ಬೆಂಗಳೂರು,ಫೆ.12- ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಮೂರು ಪ್ರಕರಣಗಳಲ್ಲಿ ಪಶ್ಚಿಮ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 19 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ:
ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಸುನೀಲ್ ಎಂಬಾತನನ್ನು ಬಂಧಿಸಿರುವ ಪೊಲೀಸರು 10 ಕೆಜಿ 200 ಗ್ರಾಂ ಗಾಂಜಾ, 500ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿ ದ್ದಾರೆ. ಫೆ.7ರಂದು ಬೆಳಗ್ಗೆ ಸಿಬ್ಬಂದಿ ಗಸ್ತು ಮಾಡು ತ್ತಿದ್ದಾಗ ಮಾದಕ ವಸ್ತು ಗಾಂಜಾ ಮಾರಾಟ ಮಾಡು ತ್ತಿ ದ್ದಾರೆಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಒಬ್ಬಾತನನ್ನು ಬಂಧಿಸಿದ್ದಾರೆ.
ಇನ್ಸ್‍ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ವಿಚಾರಣೆ ನಡೆಸಿ ಮಾಹಿತಿ ಪಡೆದು ಆರೋಪಿ ವಶದಿಂದ 10 ಕೆಜಿ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಡರಹಳ್ಳಿ:
ಫೆ.11ರಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಸೂರ್ಯನಾರಾಯಣ ಮತ್ತು ಲೋಕೇಶ್ ಬಂಧಿತರು. ಗಾಂಜಾ ಸರಬರಾಜು ಮಾಡಿಕೊಂಡು ನಗರದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾ ಹಣಗಳಿಸುತ್ತಿದ್ದರು.
ಇನ್ಸ್‍ಪೆಕ್ಟರ್ ರವಿ ಕುಮಾರ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿ, ನೀಡಿದ ಮಾಹಿತಿ ಮೇರೆಗೆ 4 ಕೆಜಿ 422 ಗ್ರಾಂ ತೂಕದ ಗಾಂಜಾ ಹಾಗೂ 500ರೂ. ವಶಪಡಿಸಿಕೊಂಡಿದ್ದಾರೆ.
ಮಾಗಡಿ ರಸ್ತೆ:
ಮಾದಕ ವಸ್ತು ಗಾಂಜಾ ಹಾಗೂ ಗಾಂಜಾ ಎಣ್ಣೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಶರತ್ ಎಂಬ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿ 4 ಕೆಜಿ ಗಾಂಜಾ ಮತ್ತು 375 ಗ್ರಾಂ ಕ್ರೀಂ ರೂಪದ ಗಾಂಜಾ ಎಣ್ಣೆ ವಶಪಡಿಸಿಕೊಂಡಿದ್ದಾರೆ. ಫೆ.10ರಂದು ಮಧ್ಯಾಹ್ನ 1.15ರ ಸುಮಾರಿನಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಗಾಂಜಾ ಮತ್ತು ಗಾಂಜಾ ಎಣ್ಣೆ ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಂಜುಂಡೇಗೌಡ ಅವರ ಅಪರಾಧ ಪತ್ತೆ ತಂಡದ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಸಿ ವಿಚಾರಣೆಗೊಳಪಡಿಸಿ 4 ಕೆಜಿ ಗಾಂಜಾ, 375 ಗ್ರಾಂ ಗಾಂಜಾ ಎಣ್ಣೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
