ಔಷಧಿ-ವೈದ್ಯಕೀಯ ಉಪಕರಣ ಪೂರೈಕೆದಾರರಿಗೆ ಇನ್ನೂ ಹಣ ನೀಡದ ಸರ್ಕಾರ

Social Share

ಬೆಂಗಳೂರು,ಜ.12- ಈ ಹಿಂದೆ ಒಂದು ಮತ್ತು 2ನೇ ಅಲೆಯ ವೇಳೆ ಸರ್ಕಾರಕ್ಕೆ ಔಷಧಿ ಮತ್ತು ಉಪಕರಣಗಳನ್ನು ಪೂರೈಸಿದ್ದ ಕೆಎಸ್ ಸಿಎಸ್‍ಎಂಎಲ್‍ಗೆ ಸರ್ಕಾರ ಈವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಸರಿಸುಮಾರು ಆರು ತಿಂಗಳು ಕಳೆದರೂ ಸಂಸ್ಥೆಗೆ ಹಣವನ್ನು ಕೊಡದಿರುವುದರಿಂದ ಪೂರೈಕೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಒಂದು ಕಡೆ ರಾಜ್ಯದಲ್ಲಿ ಮತ್ತೆ ಮೂರನೇ ಅಲೆ ಸದ್ದಿಲ್ಲದೆ ಕಾಲಿಟ್ಟಿದ್ದು ಅಗತ್ಯವಾದ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಈ ಹಿಂದಿನ ಎರಡು ಅಲೆಯ ವೇಳೆ ನೂರಾರು ಕೋಟಿ ಮೊತ್ತದ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡಿದ ಸಂಸ್ಥೆಗಳಿಗೆ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡದಿರುವುದು ಪೂರೈಕೆದಾರರಲ್ಲಿ ಅಸಮಾಧಾನ ಉಂಟು ಮಾಡಿದೆ.
ಮೊದಲನೆಯ ಹಾಗೂ ಎರಡನೆಯ ಅಲೆಯಲ್ಲಿ ಎಲ್ಲ ರೀತಿಯ ಕರೋನಾಗೆ ಸಂಬಂಧಪಟ್ಟ ಎಲ್ಲ ಔಷಧೋಪಚಾರಗಳನ್ನೂ ಸರ್ಕಾರದ  ಇಲಾಖೆಗೆ ಸುಮಾರು 27 ಕ್ಕೂ ಹೆಚ್ಚು ಕಂಪೆನಿಗಳು ಸಪ್ಲೆ ಮಾಡಲಾಗಿದೆ ಸುಮಾರು 130 ಕೋಟಿಗೂ ಹೆಚ್ಚು ಹಣ ಕಂಪೆನಿಗಳಿಗೆ ಹಾಗೂ ವಿತರಕರಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ವಿತರಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳಿನಿಂದ ಹಣವನ್ನೇ ಬಿಡುಗಡೆ ಮಾಡದಿದ್ದರೆ ನಾವು ದೈನಂದಿನ ವಹಿವಾಟು ನಡೆಸುವುದಾದರೂ ಹೇಗೆ? ಕೋಟ್ಯಾಂತರ ಹಣವನ್ನು ವಿನಿಯೋಗಿಸುತ್ತೇವೆ. ಸರ್ಕಾರ ಆರು ತಿಂಗಳಿನಿಂದ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಪೇಮೆಂಟ್ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರಾದರೂ ಈವರೆಗೂ ಹಣವನ್ನೇ ಕೊಟ್ಟಿಲ್ಲ. ಹೆಚ್ಚು ಒತ್ತಡ ಹಾಕಿದರೆ ನಮಗೆ ಬೆದರಿಕೆಯೂ ಹಾಕುತ್ತಾರೆ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ.
ಕೋವಿಡ್ ಅಲೆಯ ಸಂದರ್ಭದಲ್ಲಿ ನಾವು ವಿಟಮಿನ್ ಸಿ, ಐರೊನ್ ಪೊಲೀಕ್, ಪಾರಾಸಿಟಮಲ್, ತೆಲ್ಮಿಸೆಟ್ರಮ್, ಪಿಪಿಇ ಕಿಟ್, ಐವಿ ಫ್ಲ್ಯೂಯ್ಡ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಔಷಧಿಗಳು ವೇದಿಕೆ ಉಪಕರಣಗಳನ್ನು ಪೂರೈಕೆ ಮಾಡಲಾಗಿತ್ತು. ಸುಮಾರು ಇದರ ಮೊತ್ತವೇ 150 ಕೋಟಿ ರೂ.ಗೂ ಅಕ ಎನ್ನಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿತರಕರು ಪರದಾಡುತ್ತುವಂತಾಗಿದೆ.
ಪೂರೈಕೆ ಮಾಡಿರುವ ಔಷಧಿಗಳ ಹಣ ಬಿಡುಗಡೆ ಮಾಡುವಂತೆ ನಾವು ಒತ್ತಡ ಹಾಕಿದರೆ ನಮಗೆ ನೋಟಿಸ್ ಕೊಡುವುದು, ಇಲ್ಲವೇ ಔಷಧಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಅಧಿಕಾರಿಗಳ ಈ ನಡೆ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ವಿತರಕರು ನೋವು ಹೊರಹಾಕಿದ್ದಾರೆ.
ಪದೇ ಪದೇ ಹಣ ಕೇಳಿದರೆ ಅಧಿಕಾರಿಗಳು ನಮ್ಮ ಕಂಪನಿಗಳಿ ನೋಟಿಸ್ ಕೊಟ್ಟು ಇಲ್ಲಸಲ್ಲದ ಬೆದರಿಕೆವೊಡ್ಡುತ್ತಾರೆ. ಕೆಲವರಿಗೆ ಕಪ್ಪು ಪಟ್ಟಿಗೆ ಸೇರಿಸುವ ಬೆದರಿಕೆಯನ್ನು ಹಾಕಿದ್ದಾರೆ. ಜನರ ಹಿತಕ್ಕಾಗಿ ನಾವು ಔಷಧಿ ಮತ್ತು ಉಪಕರಣಗಳನ್ನು ಪೂರೈಕೆ ಮಾಡಿದರೆ ಸರ್ಕಾರದ ನಡೆ ನಮಗೆ ಬೇಸರ ತಂದಿದೆ ಎಂದು ವಿತರಕರು ಹೇಳಿದ್ದಾರೆ.

Articles You Might Like

Share This Article