ಡ್ರಗ್ಸ್ ಸಾಗಿಸುತ್ತಿದ್ದ ಜೈಲಿನ ಎಫ್‍ಡಿಎ ಸೆರೆ

Social Share

ಬೆಂಗಳೂರು, ಫೆ.3- ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಮಾದಕ ವಸ್ತು ಸರಬರಾಜಾಗುತ್ತಿದೆ ಎಂಬ ದೂರು ಕೇಳಿ ಬಂದಿರುವ ಬೆನ್ನಲ್ಲೇ ಒಳ ಉಡುಪಿನಲ್ಲಿ ಡ್ರಗ್ಸ್ ಇಟ್ಟುಕೊಂಡು ಸರಬರಾಜು ಮಾಡುತ್ತಿದ್ದ ಜೈಲಿನ ಪ್ರಥಮ ದರ್ಜೆ ಸಹಾಯಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಗಾಧರ್(53) ಜೈಲು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು , ಪೊಲೀಸರ ಬಂಧನದಲ್ಲಿರುವ ಪ್ರಥಮ ದರ್ಜೆ ಸಹಾಯಕ. ಮಾದಕ ದ್ರವ್ಯಗಳಾದ ಎಲ್‍ಎಸ್‍ಡಿ ಮತ್ತು ಹ್ಯಾಶ್ ಆಯಿಲ್‍ನ್ನು ಆರೋಪಿ ಗಂಗಾಧರ್ ಒಳ ಉಡುಪಿನಲ್ಲಿ ಇಟ್ಟುಕೊಂಡು ಜೈಲಿನೊಳಗೆ ಸಾಗಿಸುವ ಯತ್ನ ಮಾಡುತ್ತಿದ್ದನು.
ಆತನ ವರ್ತನೆ ಕಂಡು ಅನುಮಾನ ಗೊಂಡ ಜೈಲಿನ ಅಧಿಕಾರಿಗಳು ಪರಿಶೀಲಿಸಿದಾಗ ಮಾದಕ ವಸ್ತುಗಳು ಕಂಡು ಬಂದಿವೆ. ತಕ್ಷಣ ಪರಪ್ಪನ ಅಗ್ರಹಾರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗಂಗಾಧರ್‍ನನ್ನು ಬಂಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಈ ಮಾದಕ ವಸ್ತುಗಳನ್ನು ಗಂಗಾಧರ್ ಎಲ್ಲಿಂದ ತಂದರು, ಯಾರು ಈ ವಸ್ತುಗಳನ್ನು ಕೊಟ್ಟರು, ಕೈದಿಗಳಿಗೆ ಕೊಡಲು ತಂದಿದ್ದರೇ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Articles You Might Like

Share This Article