ಬೆಂಗಳೂರು, ಸೆ.16- ಅಂತರಾಷ್ಟ್ರೀಯ ಮತ್ತು ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳು ಸೇರಿದಂತೆ 14 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 7 ಕೋಟಿ 83 ಲಕ್ಷದ 70 ಸಾವಿರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು, ಒರಿಸ್ಸಾದ 4, ಕೇರಳದ 4, ಬೆಂಗಳೂರಿನ ಮೂವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿ ನಗರದ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್ಪೇಟೆ, ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ 7 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಮಂದಿಯನ್ನು ಬಂಧಿಸಿ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ 1.20 ಕೋಟಿ ಮೌಲ್ಯದ ಮಾದಕ ವಸ್ತುಗಳು , 2 ಮೊಬೈಲ್, 16 ಸಿರಿಂಜ್ಗಳು, ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ 1.25 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, 1 ಮೊಬೈಲ್, ಕಾಟನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ 1.40 ಕೋಟಿ ಮೌಲ್ಯದ ಗಾಂಜಾ, ಕಾರು, ಮೊಬೈಲ್ ವಶಪಡಿಸಿಕೊಂಡರೆ ಕಾಡುಗೋಡಿಯಲ್ಲಿ ಒಬ್ಬಾತನನ್ನು ಬಂಧಿಸಿ 3.85 ಕೋಟಿ ರೂ. ಮೌಲ್ಯದ ವಿವಿಧ ಮಾದಕ ವಸ್ತುಗಳು, ಕಾರು, ಸ್ಕೂಟರ್, 1 ಮೊಬೈಲ್, ತೂಕದ ಯಂತ್ರ, ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಜರಾತ್‍ನಲ್ಲಿ ಒಬಿಸಿ ಸಮುದಾಯಕ್ಕೆ ಶೇ.27ರಷ್ಟು ಮೀಸಲಾತಿ
ಆರೋಪಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ 182 ಕೆಜಿ ತೂಕದ ಗಾಂಜಾ, 1450 ಕೆಜಿ ಆಶಿಷ್ ಆಯಿಲ್, 16.2 ಗ್ರಾಂ ಎಂಡಿಎನ್ಎ ಕ್ರಿಸ್ಟೆಲ್, 135 ಎಕ್ಸ್ಟಿಸಿ ಪಿಲ್ಸ್ಗಳು, ವೈಟ್ ಪೌಡರ್ 1 ಕೆಜಿ, ಮಫಡ್ರಿನ್ ಕ್ರಿಸ್ಟೆಲ್ 870 ಗ್ರಾಂ, ಕೊಕೈನ್ 80 ಗ್ರಾಂ, ಎಂಡಿಎಂಎ ಎಕ್ಸ್ ಟಿಸಿ ಪೌಡರ್ 230 ಗ್ರಾಂ ಹಾಗೂ 8 ಮೊಬೈಲ್ಗಳು, 2 ಕಾರು, 1 ಸ್ಕೂಟರ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪಪೊಲೀಸ್ ಆಯುಕ್ತ (ಅಪರಾಧ-2) ಆರ್ ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಡಿ ಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ಈ ಕಾರ್ಯಾಚರಣೆ ಕೈಗೊಂಡಿತ್ತು.
#Drugs, #worth7.83crore, #seized, #14arrested,