ಥಾಣೆ,ಜ.1-ಮಹಾರಾಷ್ಟ್ರದ ನವಿ ಮುಂಬೈ ನಗರದಲ್ಲಿ ರೋ ಹೌಸ್ನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 16 ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಪೂರೈಕೆಗಾಗಿ ಕೆಲವು ಆಫ್ರಿಕನ್ನರು ಮಾದಕ ದ್ರವ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ನಿನ್ನೆ ಮನೆಯ ಮೇಲೆ ದಾಳಿ ನಡೆಸಲಾಯಿತು ಎಂದು ನವಿ ಮುಂಬೈ ಪೊಲೀಸ್ ಉಪ ಕಮಿಷನರ್ (ಅಪರಾಧ) ಅಮಿತ್ ಕಾಳೆ ತಿಳಿಸಿದ್ದಾರೆ.
ವಶಪಡಿಸಿಕೊಂಡ ಡ್ರಗ್ಸ್ 1,00,70,000 ರೂ ಮೌಲ್ಯದ ಗಾಂಜಾ, ಚರಸ್, ಹೆರಾಯಿನ್ ಮತ್ತು ಮೆಥಾಕ್ವಾಲೋನ್ ಸೇರಿವೆ. ಆರು ಮಹಿಳೆಯರು ಸೇರಿದಂತೆ 16 ನೈಜೀರಿಯನ್ನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಕ್ಗೆ ಬೈಕ್ ಡಿಕ್ಕಿ: ಪೊಲೀಸ್ ಸೇರಿ ಇಬ್ಬರು ಸಾವು
ಕ್ರೈಂ ಬ್ರಾಂಚ್ ಮತ್ತು ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆಯನ್ನು ನಡೆಸಲಿದ್ದು, ಅಕ್ರಮ ವಸ್ತುಗಳನ್ನು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂದು ಪತ್ತೆ ಹಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
Drugs, worth, Rs 1 crore seized, Navi Mumbai, 16 Nigerians, arrested,