ಗೋಡೋನ್‍ವೊಂದರಲ್ಲಿ ಇರಿಸಿದ್ದ 120 ಕೋಟಿ ಮೌಲ್ಯದ ಮಾದಕವಸ್ತು ವಶ

Social Share

ಮುಂಬೈ,ಅ.7- ಇಲ್ಲಿನ ಗೋಡೋನ್‍ವೊಂದರಲ್ಲಿ ಇರಿಸಿದ್ದ ಸುಮಾರು 120 ಕೋಟಿ ರೂ. ಮೌಲ್ಯದ ಮೆಥೆಟೋಣ್ ಎಂಬ ಡ್ರಗ್ಸ್ ನ್ನು ಮಾದಕವಸ್ತು ನಿಯಂತ್ರಣ ದಳ (ಎನ್‍ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ಮಾಜಿ ಪೈಲೆಟ್ ಹಾಗೂ ಮುಂಬೈ ಹಾಗೂ ಗುಜರಾತ್‍ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
ನೌಕಾ ಪಡೆ, ಜಾಗೃತ ದಳದಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಗುಪ್ತ ಕಾರ್ಯಾಚರಣೆ ನಡೆಸಿದ ಎನ್‍ಸಿಬಿ ಅಧಿಕಾರಿಗಳು ದಕ್ಷಿಣ ಮುಂಬೈನ ಎಸ್‍ಡಿ ರಸ್ತೆ, ಕೋಟೆ ಪ್ರದೇಶದ ಗೋಡೌನ್‍ವೊಂದರಲ್ಲಿ ಇರಿಸಿದ್ದ ಸುಮಾರು 60 ಕೆಜಿ ಮೆಥೆಡ್ರೋಣ್ ಡ್ರಗ್ಸ್‍ನ್ನು ವಶಕ್ಕೆ ಪಡೆಯಲಾಗಿದೆ.

ಗುಜರಾತ್‍ನ ಜಾಮ್‍ನಗರದಲ್ಲಿ ಇತ್ತೀಚೆಗೆ ನಡೆದಿದ್ದ ದಾಳಿ ಸಂದರ್ಭದಲ್ಲಿ 10 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈಗ ಮುಂಬೈನಲ್ಲಿ ಸುಮಾರು 50 ಕೆಜಿ ಡ್ರಗ್ಸ್ ಸಿಕ್ಕಿರುವುದರಿಂದ ಒಂದೇ ತಂಡ ಇದರ ಹಿಂದೆ ಇರಬಹುದು ಎಂದು ಶಂಕಿಸಲಾಗಿದೆ.

ಇದರ ಹಿಂದೆ ಇನ್ನು ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ವಿದೇಶದಿಂದ ಕಳ್ಳ ಸಾಗಾಣೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.ಏರ್ ಇಂಡಿಯಾ ಪೈಲೆಟ್ ಕೂಡ ಇದರಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಎಲ್ಲಿಂದ ತರಲಾಯಿತು, ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆದಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Articles You Might Like

Share This Article