ಬೆಂಗಳೂರು, ಮಾ.2- ಮದ್ಯಪಾನ ಮಾಡಿ ಬಾರ್‍ಗಳ ಬಳಿ ಗಲಾಟೆ ಮಾಡುತ್ತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಾರಿ ಬ್ರೋಕರ್ ಕೆಲಸ ಮಾಡುತ್ತಿದ್ದ ಪೀಣ್ಯ ನಿವಾಸಿ ಶಿವಕುಮಾರ್(42) ಕೊಲೆಯಾದ ವ್ಯಕ್ತಿ. ರಾತ್ರಿ 10.30ರ ಸುಮಾರಿನಲ್ಲಿ ಗೊರಗುಂಟೆ ಪಾಳ್ಯದ ಸಪ್ಲಮ್ಮ ದೇವಸ್ಥಾನದ ಬಳಿ ಶಿವಕುಮಾರ್ ಕುಡಿದು ಇಬ್ಬರಿಗೆ ಕೆಟ್ಟದಾಗಿ ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಪತ್ನಿ ಜೊತೆ ವಾಯು ಪಡೆಯ ಮಾಜಿ ಅಧಿಕಾರಿ ಆತ್ಮಹತ್ಯೆ
ನಿಂದನೆಗೊಳಗಾದ ಇಬ್ಬರು ಶಿವಕುಮಾರ್ ಜೊತೆ ಜಗಳವಾಡಿ ತಳ್ಳಾಟ, ನೂಕಾಟ ನಡೆದಾಗ ಕೆಳಗೆ ಬಿದ್ದ ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮುಂಜಾನೆ 2.30ರ ಸುಮಾರಿನಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಬಿಜೆಪಿ ಯತ್ನ ಫಲಿಸುವುದಿಲ್ಲ: ಕಾಂಗ್ರೆಸ್
ಆರ್‍ಎಂಸಿ ಯಾರ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದಾಗ ಕೊಲೆಯಾಗಿರುವುದು ಕಂಡು ಬಂದಿದೆ. ಪೊಲೀಸರು ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಕರ್ಣ ಅಲಿಯಾಸ್ ಸಿದ್ಧೋಜಿರಾವ್ ಹಾಗೂ ಗಿರೀಶ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
drunk, man, killed, Bengaluru,