ಮದ್ಯದಮಲಿನಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕುಡುಕ

Social Share

ಪಾಟ್ನಾ,ಮಾ.11-ಹೋಳಿ ಹಬ್ಬದ ಸಂದರ್ಭದಲ್ಲಿ ಕುಡುಕನೊಬ್ಬ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದ ಬೇಗುಸರಾಯ್ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ಥ ಬಾಲಕಿ ತನ್ನ ಸ್ನೇಹಿತೆಯೊಂದಿಗೆ ಬೇಗುಸರಾಯ್ ಜಿಲ್ಲೆಯ ತಮ್ಮ ಹಳ್ಳಿಗೆ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯೊಂದರ ಬಳಿ ನಿಂತಿದ್ದ ಬಾಲಕಿಯನ್ನು ಕುಡುಕನೊಬ್ಬ ಬಲವಂತವಾಗಿ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಅದನ್ನು ತಡೆಯಲು ಹೋದ ಸಂತ್ರಸ್ಥೆ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಷ್ಟೇ ಕಿರುಕುಳ ನೀಡಿದರೂ ಬಿಜೆಪಿ ಮುಂದೆ ತಲೆ ಬಾಗಲ್ಲ : ಲಾಲೂ

ಮಗುವಿನ ಮೇಲೆ ಅತ್ಯಾಚಾರ ಎಸಗಿದ ನಂತರ ಪೊದೆಗೆ ಎಸೆದಿದ್ದಾನೆ. ಗಾಯಗೊಂಡ ಬಾಲಕಿ ತಪ್ಪಿಸಿಕೊಂಡು ಸ್ಥಳೀಯರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ನಾವು ಮಾಹಿತಿ ಪಡೆದ ತಕ್ಷಣ ಅಪರಾಧ ಸ್ಥಳಕ್ಕೆ ತಲುಪಿದ್ದೇವೆ ಮತ್ತು ಆರೋಪಿ ಚೋಟು ಕುಮಾರ್‍ನನ್ನು ಬಂಧಿಸಿದ್ದೇವೆ ಎಂದು ಬೇಗುಸರಾಯ್ ಉಪ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಹೇಳಿದರು.

Drunk, rapes, 7-year-old, girl, Bihar, Begusarai,

Articles You Might Like

Share This Article