ಮಹಿಳೆಯರಿಗೆ ದುಪ್ಪಟ್ಟಾ ಕಡ್ಡಾಯಗೊಳಿಸಿದ ಪಾಕ್ ಸರ್ಕಾರ

Pakistan--01
ಇಸ್ಲಮಾಬಾದ್,ಅ.20-ಲಾಹೋರ್‍ನಲ್ಲಿನ ಪಂಜಾಬ್ ಸಿವಿಲ್ ಸೆಕ್ರೆಟರಿಯೆಟ್ ಪ್ರವೇಶಿಸಲು ಮಹಿಳೆಯರಿಗೆ ಹೆಡ್‍ಸ್ಕಾರ್ಫ್ ಅಥವಾ ದುಪ್ಪಟ್ಟಾ ಇರಲೇಬೇಕು. ದುಪ್ಪಟ್ಟಾ ಇಲ್ಲದ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ.ಪಂಜಾಬ್‍ನ ಪ್ರಾಥಮಿಕ ಹಾಗೂ ದ್ವಿತೀಯ ಆರೋಗ್ಯ ಸೇವಾ ಸಚಿವ ಡಾ.ಯಾಸ್ಮಿನ್ ರಶೀದ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ಮಹಿಳೆಯರು ದುಪ್ಪಟ್ಟವಿಲ್ಲದೆ ಕಾರ್ಯಾಲಯಕ್ಕೆ ಪ್ರವೇಶಿಸುವಂತಿಲ್ಲ.

ಸಿದ್ರಾ ಬಟ್ ಎಂಬುವರು ತಮ್ಮ ಅನುಭವವನ್ನು ರೆಕಾರ್ಡ್ ಮಾಡಿ ಟ್ವಿಟರ್‍ನಲ್ಲಿ ಅಪ್‍ಲೋಡ್ ಮಾಡಿದ್ದು,ಹೆಡ್ ಸ್ಕಾರ್ಫ್ ಧರಿಸದ ಕಾರಣಕ್ಕೆ ನನಗೆ ಸೆಕ್ರೆಟೆರಿಯೆಟ್‍ಗೆ ಪ್ರವೇಶ ನಿರಾಕರಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಪಾಕಿಸ್ತಾನದಲ್ಲಿ ಭಾರೀ ವೈರಲ್ ಆಗಿದ್ದು, ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ಮಹಿಳೆಯೊಬ್ಬರಿಗೆ ಮುಖವಸ್ತ್ರ ತೆಗೆದು ಕೆಲಸಕ್ಕೆ ಬರಬೇಕು ಇಲ್ಲಾಂದ್ರೆ ಕೆಲಸಕ್ಕೆ ರಾಜೀನಾಮೆ ನೀಡಬೇಕೆಂದು ಅಧಿಕಾರಿಯೊಬ್ಬರು ತಾಕೀತು ಮಾಡಿದ್ದು, ಇಂದರಿಂದ ಬೇಸತ್ತು ಕಂಪನಿಯ ಸಿಇಒ ಜವ್ವಾದ್ ಖಾದಿರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮ್ಯಾನೇಜರ್ ಆದೇಶದಿಂದಾಗಿ ಮಹಿಳೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಇದೀಗ ಸಿಇಒ ಕ್ಷಮಾಪಣೆಯ ನಂತರ ರಾಜೀನಾಮೆ ಹಿಂಪಡೆದಿದ್ದಾಳೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಕೂಡ ಭಾರೀ ಚರ್ಚೆಯಾಗುತ್ತಿದ್ದು, ಮುಖವಸ್ತ್ರ ಧರಿಸಿ ಬರುವುದು ಕಂಪನಿಗೆ ಅವಮಾನ ಎಂದು ತಮ್ಮ ಸಂಸ್ಥೆಯ ಮ್ಯಾನೇಜರ್ ಮಹಿಳೆಗೆ ಹೇಳಿರುವುದು ನಿಜಕ್ಕೂ ಖೇದಕರ ಎಂದು ಖಾದಿರ್ ಹೇಳಿಕೊಂಡಿದ್ದಾರೆ.