ಯುಪಿಯಲ್ಲಿ ಧೂಳು ಬಿರುಗಾಳಿ ರೌದ್ರಾವತಾರಕ್ಕೆ 7 ಮಂದಿ ಬಲಿ

Dust-Strome
ಲಕ್ನೋ, ಜೂ.14-ಉತ್ತರ ಪ್ರದೇಶದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಮತ್ತೆ ರುದ್ರ ನರ್ತನ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಧೂಳ್ ಸುನಾಮಿ ಮಾದರಿಯ ಪ್ರಕೃತಿ ವಿಕೋಪದಲ್ಲಿ ಏಳು ಮಂದಿ ಮೃತಪಟ್ಟು, 21 ಜನ ಗಾಯಗೊಂಡಿದ್ದಾರೆ. ಕಳೆದ 24 ತಾಸುಗಳಲ್ಲಿ ಧೂಳು ಬಿರುಗಾಳಿಗೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಗೊಂಡಾ ಮತ್ತು ಸೀತಾಪುರ್‍ನಲ್ಲಿ ತಲಾ ಮೂವರು ಹಾಗೂ ಫೈಜಾಬಾದ್‍ನಲ್ಲಿ ಒಬ್ಬರು ಮರಣ ಹೊಂದಿದ್ದಾರೆ ಎಂದು ಅಧಿಕೃತ ವಕ್ತಾರರೊಬ್ಬರು ಲಕ್ನೋದಲ್ಲಿ ತಿಳಿಸಿದ್ದಾರೆ.

ಫೈಜಾಬಾದ್‍ನಲ್ಲಿ 11 ಮಂದಿ ಹಾಗೂ ಸೀತಾಪುರದಲ್ಲಿ 10 ಜನರು ಗಾಯಗೊಂಡಿದ್ದಾರೆ ಎಂದು ಅªರು ಹೇಳಿದ್ದಾರೆ. ಈ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ತ್ವರಿತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಆಯಾ ಜಿಲ್ಲಾ ದಂಡಾಧಿಕಾರಿಯವರಿಗೆ ಆದೇಶ ನೀಡಿದ್ದಾರೆ.

Sri Raghav

Admin