ಸುಪ್ರೀಂಕೋರ್ಟ್‍ನ 50ನೇ ಸಿಜೆ ಆಗಿ ಚಂದ್ರಚೂಡ್ ಪ್ರಮಾಣ ವಚನ

Social Share

ನವದೆಹಲಿ,ನ.9- ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸುಪ್ರೀಂಕೋರ್ಟ್‍ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿಯವರಿಗೆ ಇಂದು ಪ್ರಮಾಣವಚನ ಬೋಧಿಸಿದರು.

ಹಾಲಿ ನ್ಯಾಯಮೂರ್ತಿ ಉಮೇಶ್ ಉದಯ್ ಲಲಿತ್ ಅವರು 74 ದಿನಗಳ ಸೇವೆಗಳ ಬಳಿಕ ನಿನ್ನೆ ನಿವೃತ್ತರಾದರು.
ವಾಲ್ಮೀಕಿ ಜಯಂತಿ ಪ್ರಯುಕ್ತ ನಿನ್ನೆ ರಜಾದಿನವಾಗಿದ್ದರಿಂದ ಡಿ.ವೈ.ಚಂದ್ರಚೂಡ್ ಇಂದು ಪ್ರಮಾಣವಚನ ಸ್ವೀಕರಿಸಿದರು. ಇವರ ಅಧಿಕಾರ ಅವಧಿ 2024ರ ನವೆಂಬರ್ 10ರವರೆಗೂ ಮುಂದುವರೆಯಲಿದೆ.

ಸತೀಶ್ ಜಾರಕಿಹೊಳಿ ತಕ್ಷಣ ಕ್ಷಮೆ ಕೇಳಬೇಕು : ಬಿಎಸ್‌ವೈ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಇದ್ದು, ಚಂದ್ರಚೂಡ್ ಅವರು ಎರಡು ವರ್ಷ ಮುಖ್ಯ ನ್ಯಾಯಮೂರ್ತಿಗಳಾಗಿರುತ್ತಾರೆ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ತಂದೆ ಮತ್ತು ಮಗ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸಿದ ದಾಖಲೆ ಇದಾಗಿದೆ.

ಡಿ.ವೈ.ಚಂದ್ರಚೂಡ್ ಅವರ ತಂದೆ ವೈ.ವಿ.ಚಂದ್ರಚೂಡ್ 1978ರ ಫೆ.22ರಿಂದ 1985ರ ಜುಲೈ 11ರವರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಚುಕ್ಕಾಣಿ ಹಿಡಿದಿದ್ದರು. ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಾೀಧಿಶರಾಗಿ ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ್ದ ದಾಖಲೆಯು ಅವರ ಹೆಸರಿನಲ್ಲೇ ಇದೆ. ಈಗ ಅವರ ಪುತ್ರ ಡಿ.ವೈ.ಚಂದ್ರಚೂಡ್ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ್ದಾರೆ.

1959ರ ನವೆಂಬರ್ 11ರಂದು ಜನಿಸದ ಡಿ.ವೈ.ಚಂದ್ರಚೂಡ್, ದೆಹಲಿ ವಿಶ್ವವಿದ್ಯಾಲಯದ ಸೆಂಟ್‍ಜೋಸೆಫ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ಬಳಿಕ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಕಲಿತಿದ್ದರು. 2016ರ ಮೇ 13ರಂದು ಸುಪ್ರೀಂಕೋರ್ಟ್‍ಗೆ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು

ದೇಶದ ಗಮನಸೆಳೆದ ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿದ ಪೀಠಗಳಲ್ಲಿ ಡಿ.ವೈ.ಚಂದ್ರಚೂಡ್ ನ್ಯಾಯಮೂರ್ತಿಗಳಾಗಿದ್ದರು. ಜಮ್ಮುಕಾಶ್ಮೀರದ ಸೆಕ್ಷನ್ 377ರ ರದ್ದತಿ , ಅಯೋಧ್ಯೆ ವಿವಾದ, ಖಾಸಗಿತನದ ಹಕ್ಕು ಸೇರಿದಂತೆ ಹಲವು ಪ್ರಕರಣಗಳಲ್ಲಿ ಚಂದ್ರಚೂಡ್ ತೀರ್ಪು ನೀಡಿದ್ದಾರೆ.

ಇತ್ತೀಚೆಗೆ ದೇಶದ ಗಮನಸೆಳೆದ ತೀರ್ಪಾಗಿರುವ ಅವಿವಾಹಿತ ಮಹಿಳೆಯರ 20ರಿಂದ 24 ತಿಂಗಳ ಗರ್ಭಪಾತಕ್ಕೆ ಅನುಮತಿಸಿದ ತೀರ್ಪು ನೀಡಿದ ಪೀಠದಲ್ಲೂ ಚಂದ್ರಚೂಡ್ ನ್ಯಾಯಮೂರ್ತಿಗಳಾಗಿದ್ದರು.

Articles You Might Like

Share This Article