ಹೃದಯಾಘಾತದಿಂದ ಡಿವೈಎಸ್ಪಿ ಶ್ರವಣ ಗಾಂವ್ಕರ್ ನಿಧನ

Police--01

ಧಾರವಾಡ, ಆ.28- ಮುಂಜಾನೆ ತೀವ್ರ ಹೃದಯಾಘಾತದಿಂದ ಡಿವೈಎಸ್ಪಿ ಶ್ರವಣ ಗಾಂವ್ಕರ್ (42) ನಿಧನರಾಗಿದ್ದಾರೆ. ಧಾರವಾಡದ ರಜತಗಿರಿ ಬಡಾವಣೆಯಲ್ಲಿ ಶ್ರವಣ ಗಾಂವ್ಕರ್ ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದರು.  ಜಿಲ್ಲಾ ಮೀಸಲು ಪಡೆಯ ಡಿವೈಎಸ್ಪಿ ಯಾಗಿ ಶ್ರವಣ ಗಾಂವ್ಕರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ನಸುಕಿನ ಜಾವ ಶ್ರವಣ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಂಬುಲೆನ್ಸ್ ಕರೆಸಿಕೊಂಡು ಇವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಶ್ರವಣ ಅವರ ನಿಧನದಿಂದಾಗಿ ಕುಟುಂಬ ವರ್ಗದವರು, ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

Sri Raghav

Admin