ನಾಗರಿಕರಿಗೆ ಎಂಬೆಡೆಡ್ ಚಿಪ್‍ ಹೊಂದಿರುವ ಇ-ಪಾಸ್‍ಪೋರ್ಟ್ ಸೌಲಭ್ಯ

Social Share

ನವದೆಹಲಿ,ಫೆ.1- ದೇಶದಲ್ಲಿ ಎಂಬೆಡೆಡ್ ಚಿಪ್‍ಗಳು ಮತ್ತು ಫ್ಯೂಚರ್‍ಸ್ಟಿಕ್ ತಂತ್ರಜ್ಞಾನವನ್ನು ಹೊಂದಿರುವ ಇ-ಪಾಸ್‍ಪೋರ್ಟ್‍ಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಘೋಷಿಸಿದ್ದಾರೆ.
2019ರಲ್ಲಿ ಈ ಸೇವೆಯನ್ನು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮಾನದಂಡಗಳನ್ನು ಅನುಸರಿಸಿ ಇ-ಪಾಸ್‍ಪೋರ್ಟ್‍ಗಳನ್ನು ರೂಪಿಸಲಾಗಿದೆ. ಇವುಗಳು ಶೀಘ್ರವಾಗಿ ನಾಗರಿಕರಿಗೆ ಸಿಗಲಿವೆ. ಈ ಹಿಂದಿನಂತೆ ಸಾಂಪ್ರದಾಯಿಕ ಶೈಲಿಯಲ್ಲೇ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಬೇಕು. ಕಾಗದದ ಪಾಸ್‍ಪೋರ್ಟ್ ಬದಲಾಗಿ ಇ-ಪಾಸ್‍ಪೋರ್ಟ್‍ಗಳು ಎಂಬೆಡೆಡ್ ಚಿಪ್‍ಗಳನ್ನು ಹೊಂದಿರಲಿವೆ. ಇದರಲ್ಲಿ ವೈಯಕ್ತಿವಾದ ಎಲ್ಲಾ ಮಾಹಿತಿಗಳು ಜೈವಿಕ, ಭೌಗೋಳಿಕ ವಿವರಗಳು ಪುಟ ಎರಡಲ್ಲಿ ಗೋಚರವಾಗಲಿವೆ ಎಂದರು.
ಇ-ಪಾಸ್‍ಪೋರ್ಟ್ ವಿಭಿನ್ನವಾದಂತಹ ಡಿಜಿಟಲ್ ಸಹಿಯನ್ನು ಹೊಂದಿರಲಿದೆ. ಇದರಿಂದ ಪ್ರತಿಯೊಂದು ದೇಶದಲ್ಲೂ ಸುಲಭವಾಗಿ ಪರಿಶೀಲನೆ ಮತ್ತು ದೃಢೀಕರಣಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈವರೆಗೂ ಕೇಂದ್ರ ಸರ್ಕಾರ 20ಸಾವಿರ ಇ-ಪಾಸ್‍ಪೋರ್ಟ್‍ಗಳನ್ನು ಅಕಾರಿಗಳು ಮತ್ತು ರಾಜತಾಂತ್ರಿಕರಿಗೆ ನೀಡಿದೆ. ನಾಗರಿಕರಿಗೆ ಈ ಸೇವೆ ಒದಗಿಸುತ್ತಿರುವುದು ಮೊದಲ ಬಾರಿಯಾಗಿದೆ. 2008ರಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಇ-ಪಾಸ್‍ಪೋರ್ಟ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಇ-ಪಾಸ್‍ಪೋರ್ಟ್ ಹಿಂಪುಟ ಮತ್ತು ಮುಂಪುಟಗಳನ್ನು ಹೊಂದಿರಲಿವೆ. ಇದನ್ನು ಓದಲು ಕೆಲವೇ ಕ್ಷಣಗಳು ಸಾಕು. ಎಂಬೆಡೆಡ್ ಆಗಿರುವ ಸಣ್ಣ ಸಿಲಿಕಾನ್ ಚಿಪ್‍ಗಳನ್ನು ಅಳವಡಿಸಲಾಗುವುದು. ಅದು 44 ಕೆಬಿ ಸ್ಮರಣ ಸಾಮಥ್ರ್ಯ ಹೊಂದಿರಲಿದೆ.
ಪಾಸ್‍ಪೋರ್ಟ್‍ದಾರರ ಫೋಟೋ ಮತ್ತು ಬೆರಳಚ್ಚು ಮುದ್ರೆಯನ್ನು ಹೊಂದಿರಲಿದೆ. ಇ-ಪಾಸ್‍ಪೋರ್ಟ್‍ಗಳು 30ಅಂತಾರಾಷ್ಟ್ರೀಯ ಭೇಟಿಗಳನ್ನು ಸಂಗ್ರಹಿಸುವ ಸಾಮಥ್ರ್ಯ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

Articles You Might Like

Share This Article