ಬೆಂಗಳೂರು,ಫೆ.15- ಅಧಿಕಾರಿ ಮತ್ತು ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ಜಾರಿಗೆ ಬಿಬಿಎಂಪಿ ಆಡಳಿತ ಮೀನಾಮೇಷ ಎಣಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸರ್ಕಾರಿ ನೌಕರರು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಆಯಾ ವರ್ಷದ ಜ.1ರಿಂದ ಪ್ರಾರಂಭಗೊಂಡಂತೆ ಡಿ.31 ರವರೆಗೆ 155 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಆದ್ಯರ್ಪಿಸಿ ಮತ್ತೆ ರಜೆ ವೇತನಕ್ಕೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ.
ಸರ್ಕಾರ ಹಾಗೂ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೃಂದದ ಅಕಾರಿ ಮತ್ತು ನೌಕರರು ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಿ ಜ.1 ರಿಂದ ಡಿ.31ರವರೆಗಿನ ಅವಯಲ್ಲಿ ಅವರ ಇಚ್ಚೆಯಂತೆ ಯಾವುದೆ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಆರ್ಹರಾಗಿರುತ್ತಾರೆ.
ರಾಜ್ಯ ಸರ್ಕಾರ 2022ನೇ ಸಾಲಿನ ಬ್ಲಾಕ್ ಅವಗೆ ಗಳಿಕೆ ರಜೆಯನ್ನು ನಗದೀಕರಣ ಪಡೆಯುವ ಯೋಜನೆಗೆ ಕಳೆದ ಡಿಸಂಬರ್ 17ರಲ್ಲೇ ಆದೇಶ ಹೊರಡಿಸಿದೆ.ಸರ್ಕಾರ ಗಳಿಕೆ ರಜೆ ನಗದೀಕರಣ ಯೋಜನೆಗೆ ಕಳೆದ ಡಿ.17ರಂದೇ ಆದೇಶ ಹೊರಡಿಸಿದ್ದರು. ಬಿಬಿಎಂಪಿಯಲ್ಲಿ ಮಾತ್ರ ಈ ಯೋಜನೆ ಇನ್ನು ಜಾರಿಗೆ ಬಂದಿಲ್ಲ.
ಗಳಿಗೆ ರಜೆ ನಗದೀಕರಣಕ್ಕೆ ಕಳೆದ ಡಿಸಂಬರ್‍ನಲ್ಲೇ ಆದೇಶವಾಗಿದ್ದರೂ ಸರ್ಕಾರಿ ನೌಕರರಿಗೆ ಇರುವ ಈ ಯೋಜನೆಯನ್ನು ಫೆಬ್ರವರಿ ತಿಂಗಳೂ ಕಳೆಯುತ್ತ ಬಂದಿದ್ದರೂ ಬಿಬಿಎಂಪಿ ಯಾಕೆ ಇನ್ನು ಅನುಷ್ಠಾನಗೊಳಿಸಿಲ್ಲ ಎನ್ನುವುದೆ ಅರ್ಥವಾಗುತ್ತಿಲ್ಲ. ಈ ಕುರಿತಂತೆ ಸಂಬಂಧಪಟ್ಟ ಅಕಾರಿಗಳನ್ನು ಕೇಳಿದರೆ ಅವರು ಬೇಜವಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಕೆಲ ಬಿಬಿಎಂಪಿ ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಯೋಜನೆ ಜಾರಿಗೆ ಬಂದು ಈಗಾಗಲೇ ಸರ್ಕಾರಿ ನೌಕರರು ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆದುಕೊಂಡಿದ್ದರು ನಮ್ಮನ್ನು ಮಾತ್ರ ಮಲತಾಯಿ ಮಕ್ಕಳಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ನೌಕರರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಈಗಲಾದರೂ ಮನಸು ಮಾಡಬೇಕು ಎಂದು ಪಾಲಿಕೆ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
#EarnedLeaveScheme, #BBMP, #Bengaluru,