ಆತಂಕ ಮೂಡಿಸಿದೆ ಹೆಚ್ಚುತ್ತಿರುವ ಭೂಮಿಯ ಪರಿಭ್ರಮಣೆ ವೇಗ

Social Share

ಬೆಂಗಳೂರು, ಆ.18- ತಿರುಗುವ ಭೂಮಿ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿದರೆ… ಇದರ ಪರಿಣಾಮ ಊಹಿಸಲಸಾಧ್ಯ. ಆದರೂ ಪ್ರಕೃತಿ ವೈಪರಿತ್ಯದಿಂದ ಇಂತಹ ಅನಾಹುತ ಘಟಿಸುತ್ತಿದೆ. ಭೂಮಿ ತನ್ನ ನೈಸರ್ಗಿಕ ವೇಗವನ್ನು ದಾಟಿ ಕೆಲವು ವೇಳೆ ವೇಗವಾಗಿ ತಿರುಗಲಾರಂಭಿಸಿದೆ.

ಖಗೋಳದಲ್ಲಿ ನೀಲಿ ಗ್ರಹವೆಂದೇ ಕರೆಯಲಾಗುವ ಭೂಮಿ 24 ಗಂಟೆಗಳಿಗೊಮ್ಮೆ ತನ್ನ ಅಕ್ಷದ ಪರಿ ಸುತ್ತಿವಿಕೆಯ ಪರಿಭ್ರಮಣೆಯನ್ನು ಪೂರ್ಣಗೊಳಿಸುತ್ತದೆ. ಆದರೆ ಪ್ರಮುಖ ಬೆಳವಣಿಗೆಯಲ್ಲಿ ಸ್ಥಾಪಿತ ಸತ್ಯವನ್ನು ಮೀರಿ ಭೂಮಿ ವೇಗ ಪಡೆದುಕೊಂಡಿದೆ.

ವಿಜÁ್ಞನಿಗಳ ಪ್ರಕಾರ ಜುಲೈ 29 ರಂದು ಪ್ರಮಾಣಿತ ಕಾಲಮಿತಿಗಿಂತ (23 ಗಂಟೆಗಳು ಮತ್ತು 56 ನಿಮಿಷಗಳು) ಸುಮಾರು 1.59 ಮಿಲಿಸೆಕೆಂಡ್‍ಗಳಲ್ಲಿ ಪರಿಯನ್ನು ಪೂರ್ಣಗೊಳಿಸಿದೆ. ಯಾಂತ್ರಿಕೃತ ಗಡಿಯಾರಗಳು ಭೂಮಿಯ ಪರಿಭ್ರಮಣೆ ವೇಗ ಇತ್ತೀಚೆಗೆ ಹೆಚ್ಚಾಗಿರುವುದನ್ನು ದಾಖಲಿಸಿವೆ.

ಈ ವೈಪರಿತ್ಯದಿಂದಾಗಿ 2020 ರಲ್ಲಿ ಭೂಮಿ ಕಡಿಮೆ ತಿಂಗಳನ್ನು ದಾಖಲಿಸಿತ್ತು. ಜುಲೈ 19 ಅನ್ನು ಆ ವರ್ಷದ ಕಡಿಮೆ ದಿನವೆಂದು ಗುರುತಿಸಲಾಗಿದೆ. ಅಂದು 24 ಗಂಟೆಗಳ ಒಳಗೆ 1.47 ಮಿಲಿಸೆಕೆಂಡ್‍ಗಳು ಕಡಿಮೆಯಾಗಿದ್ದವು. ಭೂಮಿ ವೇಗವಾಗಿ ತಿರುಗುವುದು ಹೊಸದೇನು ಅಲ್ಲ, ಮುಂದಿನ ದಿನಗಳಲ್ಲೂ ಇದು ಘಟಿಸಬಹುದು ಎಂದು ಹೇಳಲಾಗಿದೆ.

ಈ ವರ್ಷದ ಜೂನ್ 29ರ ಪರಿಭ್ರಮಣೆ ಹೆಚ್ಚಿನ ವೇಗದ್ದು ಎಂದು ಗುರುತಿಸಲಾಗಿದೆ. ಇದೇ ವರ್ಷದ ಜುಲೈ 26 ರಂದು 1.50 ಮಿಲಿಸೆಕೆಂಡ್‍ಗಳಷ್ಟು ಕಡಿಮೆ ಅವಯಲ್ಲಿ ದಿನ ಮುಗಿದಿತ್ತು. ಇಂಟರೆಸ್ಟಿಂಗ್ ಇಂಜಿನಿಯರಿಂಗ್ (ಐಇ) ಸುದ್ದಿ ಔಟ್‍ಲೆಟ್ ಪ್ರಕಾರ, ಭೂಮಿಗೆ 50 ವರ್ಷಗಳ ಹಂತದ ಕಡಿಮೆ ದಿನಗಳು ಈಗ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಲಾಗಿದೆ.

ವೇಗದ ಪರಿಭ್ರಮಣೆಗೆ ಕಾರಣ:

ಭೂಮಿಯು ಏಕೆ ವೇಗವಾಗಿ ತಿರುಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಕ್ಷಣಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. ಆದರೆ ಕೆಲವು ಪ್ರಮುಖ ಸಿದ್ಧಾಂತಗಳ ಸ್ಥಿತಿ ಸ್ಥಾಪಕತ್ವವನ್ನು ಚರ್ಚಿಸಲಾಗುತ್ತಿದೆ. ಹವಾಮಾನ ವೈಪರಿತ್ಯದಿಂದ ಹಿಮನದಿಗಳ ಕರಗುವಿಕೆಯಿಂದಾಗಿ ಗ್ರಹಗಳ ತೂಕವು ಕುಸಿಯುತ್ತಿದೆ.

ಹೀಗಾಗಿ ಪರಿಭ್ರಮಣೆಯ ವೇಗ ಹೆಚ್ಚುತ್ತಿದೆ ಎಂಬ ಒಂದು ವಾದವಿದೆ.
ಭೂಮಿಯ ಒಳಂತರದಲ್ಲಿ ಪ್ರಮುಖ ಅಂಶಗಳು ಕರಗುತ್ತಿರುವುದರಿಂದ ಪರಿ ಚಲನೆ ವೇಗ ತೀವ್ರಗೊಂಡಿದೆ ಎಂದು ಕೆಲವರು ಗಮನಿಸಿದ್ದಾರೆ. ಭೂಮಿಯ ಅಕ್ಷಾಂಶದ ಕೇಂದ್ರ ಬಿಂಧುವಿನಲ್ಲಿ ಸಣ್ಣ ವಿಚಲನೆ ಅಥವಾ ಭೂಕಂಪನದ ಪರಿಣಾಮಗಳು ಭೂಮಿಯ ತಿರುಗುವಿಕೆ ಹೆಚ್ಚಾಗಲು ಕಾರಣವಾಗಿರಬಹುದು ಎಂದು ಭಾವಿಸಲಾಗಿದೆ.

ಪರಿಣಾಮ:

ಭೂಮಿಯ ವೇಗದ ಚಲನೇ ಆಧುನಿಕ ಯುಗದಲ್ಲಿ ಭಾರೀ ಪರಿಣಾಮಗಳನ್ನು ಬೀರಲಿದೆ. ಯಾಂತ್ರಿಕೃತ ಗಡಿಯಾರಗಳಲ್ಲಿ ವ್ಯತ್ಯಾಸಗಳಾಗಲಿದೆ. ಭೂಮಿಯ ಪರಿಭ್ರಮಣೆ ಆಧರಿಸಿ ಉಪಗ್ರಹ ಆಧಾರಿತ ಜಿಪಿಎಸ್ ಕಾಲಮಾನವನ್ನು ನಿಗದಿ ಮಾಡಲಾಗಿರುತ್ತದೆ. ಐಸ್ಟೀನ್ ಸಿದ್ಧಾಂತದ ಮೇಲೆ ಈಗಾಗಲೇ ಖಚಿತ ಪಡಿಸಿರುವ ಗಡಿಯಾರ ಕಾಲಾನುಕರಣ ಅನುಪಯುಕ್ತವಾಗುತ್ತದೆ.

ಸ್ಮಾಟ್‍ಫೋನ್, ಕಂಪ್ಯೂಟರ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ನೆಟ್‍ವರ್ಟ್ ಟೈಮ್ ಪ್ರೋಟೊಕಾಲ್ (ಎನ್‍ಟಿಪಿ) ಆಧರಿಸಿ ಹೊಂದಿಸಲಾದ ವ್ಯವಸ್ಥೆಯಲ್ಲಿ ಸರ್ವರ್ ದತ್ತಾಂಶಗಳು ಸಿಂಕ್ರೋನೈಸ್‍ಗೊಳ್ಳುತ್ತವೆ. ಅದರ ಪ್ರಕಾರ 23:59:59ರ ನಂತರ 23:59:60 ರಿಂದ 00:00:00 ಸಮಯ ಬದಲಾವಣೆಯಾಗುತ್ತದೆ. ಭೂಮಿಯ ತಿರುಗುವಿಕೆ ಮಿಲಿ ಸೆಕೆಂಡ್‍ಗಳಲ್ಲಿ ವ್ಯತ್ಯಾಸವಾಗುವುದರಿಂದ ಕೆಲವು ದತ್ತಾಂಶಗಳು ಮತ್ತು ಪ್ರೋಗ್ರಾಮಮ್‍ಗಳು ನಾಶವಾಗುವ ಅಪಾಯವಿದೆ. ಇದು ಇತರ ನೈಸರ್ಗಿಕ ಅಪಾಯಕ್ಕೂ ಕಾರಣವಾಗುವ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ.

Articles You Might Like

Share This Article