ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ, ಆತಂಕಕ್ಕೊಳಗಾದ ಜನ..!

Social Share

ಶಿವಮೊಗ್ಗ,ಅ.6- ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಪಟ್ಟಣದ 3 ಕಿಮೀ ವ್ಯಾಪ್ತಿಯಲ್ಲಿ ಬೆಳಗಿನ ಜಾವ 3.55ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.

ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲ ಒಂದು ಕಿಮೀ ಸುತ್ತಮುತ್ತ ಈ ಅನುಭವವಾಗಿದೆ ಎಂದು ಜನ ತಿಳಿಸಿದ್ದಾರೆ. ಭೂಮಿ ಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲವರು ಜೋರು ಶಬ್ದವಾಯಿತು ಎಂದೂ ತಿಳಿಸಿದ್ದು, ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದವರಿಗೆ ಕಂಪನದ ಅನುಭವದಿಂದ ಆತಂಕಗೊಂಡಿದ್ದಾರೆ.

ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ. ಆದರೆ, ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ. 4.1ರ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.

ಶಿರಾಳಕೊಪ್ಪ ಪಟ್ಟಣದ 3 ಕಿಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ. ಭೂಕಂಪದ ಜೊತೆ ಜನರಿಗೆ ಭಾರಿ ಶಬ್ಧ ಕೇಳಿಸಿದೆ. ಇದರಿಂದ ಜನರಲ್ಲಿ ಆತಂಕ ಎದುರಾಗಿದೆ.

ಇದು ಭೂಕಂಪನವೊ ಅಥವಾ ಬೇರೇನಾದರು ಕಾರಣವೋ ಅನ್ನುವ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇವೆ. ಬೆಂಗಳೂರಿನಿಂದ ಅಕೃತ ವರದಿ ಬರಬೇಕಿದೆ ಎಂದು ಸ್ಥಳೀಯ ಅಕಾರಿಗಳು ಹೇಳಿದ್ದಾರೆ.

ಹರಿದಾಡಿದ ಸ್ಕ್ರೀನ್ ಶಾಟ್:

ಮತ್ತೊಂದೆಡೆ ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭಸಿರುವ ಬಗ್ಗೆ ಸ್ಕ್ರೀನ್ ಶಾಟ್ ಎಲ್ಲೆಡೆ ಹರಿದಾಡುತ್ತಿದೆ. ರಾಳಕೊಪ್ಪದಲ್ಲಿ 4.1 ತೀವ್ರತೆಯ ಭೂಕಂಪನವಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಮ್ಯಾಪ್‍ನಲ್ಲಿ ಶಿರಾಳಕೊಪ್ಪದಲ್ಲಿ ಕೆಂಪು ಮಾರ್ಕ್ ತೋರಿಸಲಾಗಿದೆ. ಆದರೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಭೂಕಂಪನದ ಕುರಿತು ಖಚಿತಪಡಿಸಿಲ್ಲ. ಮತ್ತೊಂದೆಡೆ ಭೂಕಂಪನ ಅಧ್ಯಯನ ಮಾಡುವ ಪ್ರತಿಷ್ಠಿತ ಸಂಸ್ಥೆಗಳು ಕೂಡ ಇದನ್ನು ಕುರಿತು ಖಚಿತಪಡಿಸಿಲ್ಲ.

ಕೆಲ ತಿಂಗಳ ಹಿಂದೆ ಜಯಪುರ ನಗರದಲ್ಲಿ ಭಾರೀ ಸೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿತ್ತು. ಜಿಲ್ಲೆಯ ಅಲಿಯಾಬಾದ್ ಭೂಕಂಪನದ ಕೇಂದ್ರವಾಗಿತ್ತು. ಜಯಪುರ ಜಿಲ್ಲೆಯಲ್ಲಿ ಪದೇಪದೆ ಭೂಕಂಪನ ಸಂಭಸುತ್ತಿರುವ ವಿಚಾರ ಈ ಹಿಂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿತ್ತು. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಅನೇಕ ಸದಸ್ಯರು ಒತ್ತಾಯಿಸಿದ್ದರು.

Articles You Might Like

Share This Article