ಗುಜರಾತ್‍ನ ಅಮೇಲಿಯಲ್ಲಿ 2 ವರ್ಷದಲ್ಲಿ 400 ಬಾರಿ ಭೂಕಂಪ..!

Social Share

ಅಹಮದಾಬಾದ್,ಫೆ.26- ಕಳೆದ ಎರಡು ವರ್ಷಗಳಲ್ಲಿ 400ಕ್ಕೂ ಹೆಚ್ಚು ಲಘು ಕಂಪನದ ಮೂಲಕ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಮಿಟಿಯಾಲ ಗ್ರಾಮ ಭೂಕಂಪದ ಸಮೂಹ ಕೇಂದ್ರ ಬಿಂಧುವಾಗಿ ಮಾರ್ಪಟ್ಟಿದೆ.

ಸಾಮಾನ್ಯವಾಗಿ ಅಲ್ಪಾವಯ ಸಣ್ಣ ಭೂಕಂಪಗಳ ಅನುಕ್ರಮವಾಗಿ ದಿನಗಳು, ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳವರೆಗೆ ಮುಂದುವರಿಯಬಹುದು ಅಥವಾ ಒಂದೇ ಸ್ಥಳದಲ್ಲಿ ಪದೇ ಪದೇ ಮರುಕಳಿಸಬಹುದು. 400ಕ್ಕೂ ಹೆಚ್ಚಿನ ಕಂಪನಗಳನ್ನು ಅನುಭವಿಸಿದ ಮಿಟಿಯಾಲ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳ ಹೊರಗೆ ಮಲಗಲು ಪ್ರಾರಂಭಿಸಿದ್ದಾರೆ.

ಸ್ಥಳೀಯ ನಿವಾಸಿ ಮಹಮ್ಮದ್ ರಾಥೋಡ್ ಮಾತನಾಡಿ, ಕಂಪನದ ಭೀತಿಯಿಂದ ಸರಪಂಚ್ ಸೇರಿದಂತೆ ಗ್ರಾಮದ ಬಹುತೇಕ ಜನರು ರಾತ್ರಿ ವೇಳೆ ಮನೆಗಳ ಹೊರಗೆ ಮಲಗಲು ಆರಂಭಿಸಿದ್ದಾರೆ.

ಗಾಂನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‍ಆರ್) ನ ಕಾರ್ಯನಿರ್ವಾಹಕ ಮಹಾನಿರ್ದೇಶಕ ಸುಮರ್ ಚೋಪ್ರಾ, ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಜಿಲ್ಲೆಯಲ್ಲಿ ಭೂಕಂಪನ ಸಮೂಹ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಟೆಕ್ಟೋನಿಕ್ ಸೆಟಪ್ ಮತ್ತು ಹೈಡ್ರೋಲಾಜಿಕಲ್ ಲೋಡಿಂಗ್‍ನಿಂದಾಗಿ ಕಾಲೋಚಿತ ಭೂಕಂಪನ ಚಟುವಟಿಕೆಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ.

ಜಲವಿಜ್ಞಾನದ ಮೇಲ್ಮೈ ಮಣ್ಣಿನ ತೇವಾಂಶ, ಹಿಮ ಮತ್ತು ಸಸ್ಯವರ್ಗದಲ್ಲಿ ಸಂಗ್ರಹವಾಗಿರುವ ನೀರಿನ ದ್ರವ್ಯರಾಶಿಯನ್ನು ಆಧರಿಸಿವೆ. ಟೆಕ್ಟೋನಿಕ್ ಸೆಟಪ್ ಮತ್ತು ಮಾನ್ಸೂನ್ ಸಮಯದಲ್ಲಿ ಮತ್ತು ಕೆಲವೊಮ್ಮೆ ಈ ಸೌಮ್ಯವಾದ ನಡುಕಗಳನ್ನು ಉಂಟುಮಾಡಿದ ನಂತರ ಜಲವಿಜ್ಞಾನದ ಲೋಡಿಂಗ್ ಕಾರಣದಿಂದಾಗಿ ಭೂಮಿಯ ಕೆಳಭಾಗದಲ್ಲಿ ಕಂಪನಗಳು ತೀವ್ರಗೊಳ್ಳುತ್ತವೆ.

ಕಳೆದ ಎರಡು ವರ್ಷ ಮತ್ತು ಎರಡು ತಿಂಗಳುಗಳಲ್ಲಿ, ನಾವು ಅಮ್ರೇಲಿಯಲ್ಲಿ 400 ಸೌಮ್ಯವಾದ ಕಂಪನಗಳು ಕಂಡು ಬಂದಿವೆ. ಅದರಲ್ಲಿ ಶೇ.86ರಷ್ಟು 2 ರ ತೀವ್ರತೆಗಿಂತ ಕಡಿಮೆಯಾಗಿವೆ. ಶೇ.13ರಷ್ಟು 2 ಮತ್ತು 3 ರ ತೀವ್ರತೆಯ ನಡುವೆ ದಾಖಲಾಗಿದ್ದರೆ, ಐದು ಘಟನೆಗಳಲ್ಲಿ 3ಕ್ಕಿಂತಲೂ ಹೆಚ್ಚಿನ ಪ್ರಮಾಣದ ಕಂಪನ ದಾಖಲಾಗಿದೆ. ಫೆಬ್ರವರಿ 23 ರಿಂದ 48 ಗಂಟೆಗಳ ಅವಯಲ್ಲಿ ಅಮ್ರೆಲಿಯ ಸಾವರಕುಂಡ್ಲಾ ಮತ್ತು ಖಂಬಾ ತಾಲೂಕುಗಳಲ್ಲಿ 3.1 ರಿಂದ 3.4 ರ ತೀವ್ರತೆಯ ವ್ಯಾಪ್ತಿಯಲ್ಲಿ ನಾಲ್ಕು ಕಂಪನಗಳು ದಾಖಲಾಗಿದ್ದು, ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಸೌಮ್ಯವಾದ ಕಂಪನಗಳು ಹೆಚ್ಚಾಗಿ ಜನರ ಅನುಭವಕ್ಕೆ ಬರುವುದಿಲ್ಲ. ಭೂಕಂಪನ ಮಾಪನ ಅವನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ. ಸದಸ್ಯದ ಪರಿಸ್ಥಿತಿಯ ಪ್ರಕಾರ ದೊಡ್ಡ ಭೂಕಂಪದ ಸಾಧ್ಯತೆ ಕಡಿಮೆ ಎಂದು ಚೋಪ್ರಾ ಹೇಳಿದ್ದಾರೆ. ಅಮ್ರೇಲಿ ಜಿಲ್ಲೆ ಸೇರಿದಂತೆ ಸೌರಾಷ್ಟ್ರದ ಹೆಚ್ಚಿನ ಭಾಗಗಳು ಭೂಕಂಪನ ವಲಯ 3 ರಲ್ಲಿ ಬರುತ್ತವೆ. ಇದನ್ನು ಮಧ್ಯಮ ಹಾನಿ ಅಪಾಯದ ವಲಯ ಎಂದು ವರ್ಗೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಟರ್ಕಿಯಲ್ಲಿ ಇತ್ತೀಚಿಗೆ ಘಟಿಸಿದ ವಿನಾಶಕಾರಿ ಭೂಕಂಪದಿಂದ 45 ಸಾವಿರ ಮಂದಿ ಮೃತಪಟ್ಟ ಬಳಿಕ, ಅಮ್ರೇಲಿಯಲ್ಲಿನ ಭೂಕಂಪನ ಚಟುವಟಿಕೆಗಳು ಆತಂಕ ಹೆಚ್ಚಿಸಿವೆ. ಗುಜರಾತ್‍ನ ಕಚ್ ಜಿಲ್ಲೆಯಲ್ಲಿ 2001ರ ಜನವರಿಯಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ 13,800 ಜನರು ಸಾವನ್ನಪ್ಪಿದರು, 1.67 ಲಕ್ಷ ಜನ ಗಾಯಗೊಂಡಿದ್ದರು. ಅಪಾರ ಪ್ರಮಾಣಧ ಆಸ್ತಿಗಳಿಗೆ ತೀವ್ರ ಹಾನಿಯಾಗಿತ್ತು.

#EarthquakeSwarm, #Earthquake, #Gujarat, #Amreli, #400mildtremors, #recorded,

Articles You Might Like

Share This Article