ಉದ್ಧವ್ ಕಾಲೆಳೆದ ಸಚಿವ ಅನುರಾಗ್ ಠಾಕೂರ್

Social Share

ಇಂದೋರ್,ಫೆ.22 – ಏಕನಾಥ್ ಶಿಂದೆ ಅವರ ಬಣವು ನಿಜವಾದ ಶಿವಸೇನೆ ಎಂದು ಕೇಂದ್ರ ಚುನಾವಣೆ ಆಯೋಗ ಸ್ಪಷ್ಟಪಡಿಸಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲ ಯಾರಿಗಿದೆ ಎಂಬುವುದು ಉದ್ಧವ್ ಠಾಕ್ರೆ ಅವರಿಗೆ ಅರ್ಥ ಆಗಿರಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕೆ ಮಾಡಿದ್ದಾರೆ.

ಶಿವಸೇನೆಯ ಸೈನಿಕರ, ಪಕ್ಷದ ಶಾಸಕರ, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಬೆಂಬಲ ಯಾರಿಗಿದೇ ಎಂಬುವುದು ಠಾಕ್ರೆ ಅವರಿಗೆ ಅರ್ಥವಾಗಿದೆ. ಈ ಸಂಖ್ಯೆಗಳೇ ಪೂರ್ಣ ಕಥೆಯನ್ನು ಹೇಳುತ್ತವೆ. ಕಳೆದು ಹೋದದ್ದಕ್ಕೆ ಚಿಂತಿಸಿ ಫಲವೇನು ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯರ ವೀಸಾ ಸಮಸ್ಯೆ ನಿವಾರಣೆಗೆ ಅಮೆರಿಕ ಆದ್ಯತೆ

ಕಳೆದ ವಾರ ಚುನಾವಣ ಆಯೋಗವು ಶಿಂದೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ, ಪಕ್ಷದ ಬಿಲ್ಲು ಬಾಣ ಚಿಹ್ನೆಯನ್ನು ಬಳಸಲು ಅನುಮತಿ ನೀಡಿತ್ತು. ಅಯೋಗದ ಆದೇಶದ ಬಳಿಕ ಮೊದಲ ರಾಷ್ಟ್ರೀಯ ಕಾರ್ಯಕಾರಣಿ ಸಭೆಯು ನಿನ್ನೆ ಸಂಜೆ ನಡೆದಿದ್ದು, ಏಕನಾಥ ಶಿಂದೆ ಅವರನ್ನು ಪಕ್ಷದ ಮುಖ್ಯಸ್ಥ ಎಂದು ಘೋಷಿಸಲಾಗಿದೆ.

EC, order, Shiv Sena, made, things, crystal clear, Thakur

Articles You Might Like

Share This Article