ವಿವಿಧ ರಾಜ್ಯಗಳ 5 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

Social Share

ನವದೆಹಲಿ,ನ.5- ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜ್ಯಗಳಲ್ಲಿ ಐದು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ.

ಆಯೋಗದ ಇಂದು ಪ್ರಕಟಣೆ ಹೊರಡಿಸಿದ್ದು, ಉತ್ತರಪ್ರದೇಶದ ಮೈನಾಪುರಿ ಲೋಕಸಭಾ ಕ್ಷೇತ್ರ, ಒಡಿಶಾದ ಪದಂಪುರ್, ರಾಜಸ್ಥಾನದ ಸರ್ದಾರ್‍ಶಹರ್, ಬಿಹಾರದ ಕ್ರುಹಾನಿ, ಛತ್ತೀಸ್‍ಘಡದ ವಾಯುಪ್ರತಾಪ್‍ಪುರ್, ಉತ್ತರಪ್ರದೇಶದ ಲಾಹೋರ್ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ.

ಚಂದ್ರಶೇಖರ್ ಕೊನೆಯ ಬಾರಿಗೆ ಕರೆ ಮಾಡಿದ್ದು ಯಾರಿಗೆ..?

ನ.10ರಂದು ಅಸೂಚನೆ ಜಾರಿಯಾಗಲಿದ್ದು, ನ.17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ನ.21ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಡಿ.5ರಂದು ಚುನಾವಣೆ ನಡೆದು, ಡಿ.8ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್‍ಗೂ ಇದೇ ವೇಳಾಪಟ್ಟಿಯಲ್ಲಿ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ.

Articles You Might Like

Share This Article