ಮೀಸಲಾತಿಗೆ ಆರ್ಥಿಕತೆ ಮಾನದಂಡವಲ್ಲ : ಸಿದ್ದರಾಮಯ್ಯ

Social Share

ಬೆಳಗಾವಿ,ನ.7- ಸಂವಿಧಾನದ ಆಶಯಗಳ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಪರಿಗಣಿಸಲಾಗುತ್ತದೆಯೇ ಹೊರತು ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಬ್ಲ್ಯೂಎಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ಪ್ರಕಟಿಸಿದೆ. ನಾನು ಅದರ ಕುರಿತು ಚರ್ಚೆ ಮಾಡಲು ಬಯಸುವುದಿಲ್ಲ. ಆದರೆ, ಸಂವಿಧಾನವನ್ನು ಓದಿ ಅರ್ಥೈಸಿಕೊಂಡಿರುವ ಮಟ್ಟಿಗೆ ಹೇಳುವುದಾದರೆ ಮೀಸಲಾತಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳೇ ಮಾನದಂಡ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್‍ ಗೆಲ್ಲುತ್ತೆ ಎಂಬ ಭ್ರಮೆಯಲ್ಲಿದ್ದಾರೆ : ಬೊಮ್ಮಾಯಿ

ಬಿಜೆಪಿಯಲ್ಲೂ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೇ ಬಹಳಷ್ಟು ಬಿಜೆಪಿಗರು ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ತಮ್ಮಲ್ಲಿನ ಹುಳುಕುಗಳ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಕಾಂಗ್ರೆಸ್ ಬಗ್ಗೆಯೇ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.11ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮೊದಲು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಆಗ ಬಂದು ನೋಡಲಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸಲಿಲ್ಲ. ರಾಜ್ಯ ಸರ್ಕಾರದ ಶೇ.40ರಷ್ಟು ಕಮಿಷನ್ ದಂಧೆ ಬಗ್ಗೆ ವ್ಯಾಪಕ ದೂರುಗಳು ಇದ್ದವು. ಅದರ ಬಗ್ಗೆಯೂ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಈವರೆಗೂ ನಾನು ನಿರ್ಧಾರ ಕೈಗೊಂಡಿಲ್ಲ. ಬಾದಾಮಿ ಬಿಟ್ಟು ಹೋಗಬಾರದು. ಇಲ್ಲಿಂದಲೇ ಸ್ರ್ಪಸಬೇಕು ಎಂಬ ಒತ್ತಡಗಳಿವೆ. ಸಾವಿರಾರು ಮಹಿಳೆಯರು ಮನೆ ಮುಂದೆ ಪ್ರತಿಭಟಿಸುವ ಎಚ್ಚರಿಕೆ ಪತ್ರ ನೀಡಿದ್ದಾರೆ. ಆದರೆ, ತಮಗೆ ವಾರಕ್ಕೊಮ್ಮೆ ಬಾದಾಮಿಗೆ ಭೇಟಿ ನೀಡಲಾಗುತ್ತಿಲ್ಲ. ಅಲ್ಲಿನ ಸ್ಥಳೀಯರಿಗೆ ಸಮಯ ನೀಡಲಾಗುತ್ತಿಲ್ಲ. ಹೀಗಾಗಿ ಆ ಕ್ಷೇತ್ರದಿಂದಲೇ ಮತ್ತೆ ಸ್ರ್ಪಸಲು ಮನಸ್ಸು ಒಪ್ಪುತ್ತಿಲ್ಲ ಎಂದರು.

ಚಾಮರಾಜಪೇಟೆ, ಕೋಲಾರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಬೇಡಿಕೆಗಳು ಬಂದಿವೆ. ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಮ್ಮ ಪಕ್ಷದವರು ತೀರ್ಮಾನ ಮಾಡುತ್ತಾರೆ. ಜೆಡಿಎಸ್ನವರಾಗಲಿ ಅಥವಾ ತಮ್ಮ ಸ್ನೇಹಿತರಾಗಿರುವ ಜೆಡಿಎಸ್ ನಾಯಕ ಸಿ.ಎಂ.ಇಬ್ರಾಹಿಂ ಆಗಲಿ ತೀರ್ಮಾನಿಸುವಂತಿಲ್ಲ.

ಈ ಹಿಂದೆ ಇಬ್ರಾಹಿಂ ಭದ್ರಾವತಿಯಲ್ಲಿ ನಿಂತು ಠೇವಣಿ ಕಳೆದುಕೊಂಡಿದ್ದರು. ಅವರು ಈಗ ನನಗೆ ವರಣಾ ಸ್ಪರ್ಧೆ ಮಾಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ನಲ್ಲಿ ನಾನು ಒಂಟಿ ಎಂಬುದು ಬಿಜೆಪಿಯವರ ಅಪಪ್ರಾಚರ.

ಮುರುಗಾ ಶರಣರ ಪೋಕ್ಸ್ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..!

ಪಕ್ಷದಲ್ಲಿ ನನಗೆ ಎಲ್ಲರ ಬೆಂಬಲ ಇದೆ. ಬೆಳಗಾವಿಗೆ ಆಗಮಿಸಿರುವ ನನಗೆ ಸ್ಥಳೀಯ ಶಾಸಕರು, ಮುಖಂಡರು ಜತೆಯಾಗಿ ಸಾಥ್ ನೀಡಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇಡಿ ಪ್ರಕರಣಕ್ಕೆ ಸಂಬಂಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕೊಲೆ ಆರೋಪ ಹೊತ್ತಿರುವವರು ಶಾಸಕರು ಸಂಸದರಾಗಿದ್ದಾರೆ.

ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡುವವರೆಗೂ ಆರೋಪಿಯನ್ನು ಅಮಾಯಕ ಎಂದೇ ಕಾನೂನು ಪರಿಗಣಿಸುತ್ತೆ. ಹಾಗೆ ನೋಡಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಗಡಿಪಾರು ಶಿಕ್ಷೆಗೆ ಒಳಗಾಗಿದ್ದರು ಎಂದು ಪ್ರತಿಕ್ರಿಯಿಸಿದರು.

ಮುರುಘರಾಜೇಂದ್ರ ಶರಣರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Articles You Might Like

Share This Article