ಪಂಜಾಬ್ ಸಿಎಂ ಸೋದರಳಿಯ ಭೂಪಿಂದ ಸಿಂಗ್ ಬಂಧನ

Social Share

ಲೂಯಾನ,ಫೆ.4-ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ದಿನವಿಡೀ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ತಡರಾತ್ರಿ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಜಲಂಧರ್ ಅವರನ್ನು ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲïಎ)ಯ ನಿಬಂಧನೆಗಳ ಅಡಿಯಲ್ಲಿ ತಡರಾತ್ರಿ ಹನಿಯನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ,  ಭೂಪಿಂದರ್ ಸಿಂಗ್ ಹನಿ ಅವರ ವಸತಿಯಲ್ಲಿ 10 ಕೋಟಿ ನಗದು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸï ವಾಚ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಹಾಲಿ, ಲುಯಾನ, ರೂಪನಗರ, ಫತೇಘರ್ ಸಾಹಿಬ್ ಮತ್ತು ಪಠಾಣ್ಕೊಟನ್‍ನಲ್ಲಿ ಸೇರಿ ಹನ್ನೆರಡು ಸ್ಥಳಗಳಲ್ಲಿಇಡಿ ಅಧಿಕಾರಿಗಳು ಸತತ ನ 2 ದಿನದ ಕಾರ್ಯಾಚರಣೆ ನಡೆಸಿದ್ದರು ಪಿಂರ್ಜೋ ರಾಯಲ್ಟಿ ಕಂಪನಿಯ ಮಾಲೀಕ ಕುದ್ರತ್ದೀಪ್ ಸಿಂಗ್ ಮತ್ತು ಅವರ ಪಾಲುದಾರರು ಮತ್ತು ಷೇರುದಾರರಾದ ಕನ್ವಮರ್‍ಹಿಪ್ ಸಿಂಗï, ಮನ್ಪ್ರೀತ್ ಸಿಂಗï, ಸುನೀಲ್ ಕುಮಾರ್ ಜೋಶಿ, ಜಗವೀರ್ ಇಂದರ್ ಸಿಂಗ್ ಸೇರಿದಂತೆ ಆರೋಪಿಗಳು ಮತ್ತು ಅವರ ಸಹಚರರ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮತ್ತು ಇತರ ಏಜೆನ್ಸಿಗಳನು ಬಳಸಿಕೊಂಡು ಕೇಂದ್ರ ಸರ್ಕಾರವು ತನ್ನನ್ನು ಸಿಲುಕಿಸಲು ಪಯತ್ನಿಸುತ್ತಿದೆ ಎಂದುಸಿಎಂ ಚರಂಜಿತ್ ಸಿಂಗ್ ಚನಿ ಅವರು ಹೇಳಿದರು. ಇದೆ ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದರ ನಡುವೆ ಇಡಿ ದಾಳಿ ಕುತೂಹಲ ಮೂಡಿಸಿದೆ.

Articles You Might Like

Share This Article