ನವದೆಹಲಿ,ಫೆ.11- ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ಅವರ ಪುತ್ರ ರಾಘವ್ ಮಾಗುಂಟ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಆಂಧ್ರಪ್ರದೇಶದ ಒಂಗೋಲ್ ಕ್ಷೇತ್ರದ ಸಂಸದರಾಗಿರುವ ಮಾಗುಂಟ ಶ್ರೀನಿವಾಸಲು ಅವರ ಪುತ್ರ ರಾಘವ್‍ನನ್ನು ದೆಹಲಿ ಅಬಕಾರಿ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಡಿ ಇದುವರೆಗೂ 8 ಮಂದಿಯನ್ನು ಬಂಧಿಸಲಾಗಿದೆ. ರಾಘವ್ ಬಂಧಿತ ಒಂಬತ್ತನೆ ಆರೋಪಿಯಾಗಿದ್ದು, ಅವರನ್ನು ಇಂದು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.
ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ: ಲಾಲೂ ಪುತ್ರಿಯ ಭಾವನಾತ್ಮಕ ಟ್ವಿಟ್
ಪಜಾಬ್‍ನ ಮಾಜಿ ಎಸ್‍ಎಡಿ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ ಗೌತಮ್ ಮಲ್ಹೋತ್ರಾ ಮತ್ತು ಚಾರಿಯಟ್ ಪ್ರೊಡಕ್ಷನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಜಾಹೀರಾತು ಕಂಪನಿಯ ನಿರ್ದೇಶಕ ರಾಜೇಶ್ ಜೋಶಿ ಅವರನ್ನು ವಾರದ ಆರಂಭದಲ್ಲಿ ಅದು ಬಂಧಿಸಲಾಗಿತ್ತು.
ಈಗ ರದ್ದಾದ ದೆಹಲಿ ಅಬಕಾರಿ ನೀತಿಯ ಭಾಗವಾಗಿ ಮದ್ಯದ ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಮತ್ತು ತಯಾರಕರ ‘ಸೌತ್ ಗ್ರೂಫ್ ಎಂಬ ಸಂಘಟನೆಯಲ್ಲಿ ರಾಘವ್ ಗುರುತಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಸಿಬಿಐ ಎಫ್‍ಐಆರ್‍ನಿಂದ ಹುಟ್ಟಿಕೊಂಡಿರುವ ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಇದುವರೆಗೆ ಎರಡು ಚಾರ್ಜ್ ಶೀಟ್ ಅಥವಾ ಪ್ರಾಸಿಕ್ಯೂಷನ್ ದೂರುಗಳನ್ನು ಸಲ್ಲಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸರ್ಕಾರದ ಇತರ ಅಬಕಾರಿ ಅಧಿಕಾರಿಗಳನ್ನು ಸಿಬಿಐ ಮತ್ತು ಇಡಿ ಅಧಿಕಾರಿಗಳು ಆರೋಪಿಗಳೆಂದು ಪರಿಗಣಿಸಿವೆ.
ED, arrests, son, YSR, Congress, MP,