ಕೊಚ್ಚಿ , ಡಿ. 6- ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕರುವನ್ನೂರ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಮಿಷನ್ ಏಜೆಂಟ್‍ನೊಬ್ಬನ 30.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಎ ಕೆ ಬಿಜೋಯ್ ಎಂಬ ಏಜೆಂಟ್ ಇಡಿ ಬಿಸಿ ಮುಟ್ಟಿಸಿದೆ, ಅಧಿಕಾರಿಗಳ ಪ್ರಕಾರ ಜಪ್ತಿಯಾದ ಆಸ್ತಿ ವಿವರ ನೋಡಿದರೆ ಅಚ್ಚರಿಯಾಗುತ್ತದೆ. ಕೇರಳ ರಾಜ್ಯದ ವಿವಿದೆಢೆ 20 ಸ್ಥಿರ ಆಸ್ತಿಗಳಿವೆ ಇದಲ್ಲದೆ ಎರಡು ಕಾರುಗಳು, 3,40 ಲಕ್ಷ ರೂ ನಗದು ಮತ್ತು ವಿದೇಶಿ ಕರೆನ್ಸಿ ಹಾಗು 57 ಬ್ಯಾಂಕ್ ಖಾತೆಗಳಲ್ಲಿ 35,86 990 ರೂ ಮೌಲ್ಯದ ಬ್ಯಾಲೆನ್ಸ್‍ಗಳನ್ನು ಪತ್ತೆ ಹಚ್ಚಲಾಗಿದೆ.
ಕಳೆದ 2010 ರಿಂದ ಬ್ಯಾಂಕ್‍ನ ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರು ವ್ಯವಸ್ಥಿತ ಪಿತೂರಿ ನಡೆಸಿ ಅಧಿಕಾರ ವ್ಯಪ್ತಿ ಮೀರಿ ಅಕ್ರಮವಾಗಿ 26.60 ಕೋಟಿ ರೂಪಾಯಿಗಳ ಸಾಲವನ್ನು ಮಂಜೂರು ಮಾಡಿದ್ದಾರೆ.
ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್‍ಲೈನ್‍ವರೆಗೆ ರಸ್ತೆ ಅಗಲೀಕರಣ
ಕೇರಳ ಪೊಲೀಸರು (ಕ್ರೈಮ್ ಬ್ರಾಂಚ್) ಕರುವನ್ನೂರ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ವಂಚನೆಗೆ ಸಂಬಂಧಿಸಿದಂತೆ ತ್ರಿಶೂರ್ ಜಿಲ್ಲಾಯಲ್ಲಿ 16 ಕ್ಕೂ ಹೆಚ್ಚು ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ. ಈಗ ಇಡಿ ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿದೆ. ಸೊಸೈಟಿಯ ಸದಸ್ಯರಿಗೆ ತಿಳಿಯದೆ ಒಂದೇ ಆಸ್ತಿಯಲ್ಲಿ ಬ್ಯಾಂಕ್‍ನಿಂದ ಅನೇಕ ಬೋಗಸ್ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾರೆ.
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂತು ಆದಾಯ
ಅಕ್ರಮದಲ್ಲಿ ವಿಶೇಷ ವೆಂದರೆ ಸಾಲದ ಮೊತ್ತವನ್ನು ನಗದು ರೂಪದಲ್ಲಿ ವಿತರಿಸಲಾಗಿದೆ ಮತ್ತು ಬ್ಯಾಂಕ್‍ನ ಖಾತೆಗಳ ಪುಸ್ತಕಗಳಲ್ಲಿ ಭಾರಿ ನಗದು ಠೇವಣಿ ಕಂಡುಬಂದಿದೆ ತಿರುವನಂತಪುರಂನಲ್ಲಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕೂಡ ಪರಿಶೀಲನೆಗೆ ಒಳಪಟ್ಟಿತ್ತು ಎಂದು ಗೊತ್ತಾಗಿದೆ.
ಉತ್ತಮ ಜೀವನ ನಡೆಸಲು ಸರಳ ಸೂತ್ರಗಳನ್ನು ಹೇಳಿದ ನಿರ್ಮಲಾನಂದನಾಥ ಶ್ರೀಗಳು
ಜುಲೈ 2021 ರ ನಂತರ, ರಿಜಿಸ್ಟ್ರಾರ್ ತಮ್ಮ ಲೆಕ್ಕಪರಿಶೋಧನೆಯಲ್ಲಿ 100 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಬೇರೆಡೆಗೆ ಕಂಡುಬಂದಿತ್ತು ನಂತರ ಇಡಿ ಅಧಿಕಾರಿಗಳು ವಿವಿದೆಡೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು ನಂತರ ಸಾಲ ಕೊಡಿಸುವ ಏಜೆಂಟ್ ಕರಾಮತ್ತು ಕೂಡ ಕಂಡುಬಂದಿತ್ತು ಎಂದು ತಿಳಿಸಲಾಗಿದೆ.
ED, attaches, properties, worth, Rs 30.70 cr, Kerala, cooperative, bank, agent,