ನವದೆಹಲಿ, ಫೆ.4- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪ್ತ ಅಲಂಕಾರ್ ಸಾವಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಇತರ ಸೇವೆಗಳಿಗೆ ಹಣ ಬಳಕೆಯಾಗಿರುವ ಕುರಿತು ತನಿಖೆ ಆರಂಭಗೊಂಡಿದೆ.
ಕ್ರೌಡ್ ಫಂಡಿಂಗ್ ಹಗರಣದಲ್ಲಿ ಗುಜರಾತ್ ಪೊಲೀಸರು ತೃಣಮೂಲ ಕಾಂಗ್ರಸ್ ವಕ್ತಾರ ಸಾಕೆತ್ ಗೋಕುಲೆಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಹಣ ವಹಿವಾಟಿನ ಮಾಹಿತಿ ಬೆಳಕಿಗೆ ಬಂದಿದೆ. ಸಹಜವಾಗಿ ಪ್ರಕರಣದ ಜಾರಿ ನಿರ್ದೇಶನಾಲಯ ವಿಚಾರಣೆಗೆ ಪ್ರೇರೆಪಿಸಿದೆ. ಬಂಧಿತ ಗೋಕುಲೆಯನ್ನು ತಮ್ಮ ವಶಕ್ಕೆ ನೀಡಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಹಮದಾಬಾದ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಅಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ತಾಯಿ ಶವವನ್ನು 2 ವರ್ಷಗಳಿಂದ ಫ್ರೀಜರ್ನಲ್ಲಿಟ್ಟಿದ್ದ ಮಹಿಳೆ
ಒಂದು ವರ್ಷದಲ್ಲಿ ಗೋಕುಲೆ ಅವರ ಖಾತೆಗೆ ನಗದು ರೂಪದಲ್ಲಿ 23.54 ಲಕ್ಷ ರೂ.ಗಳ ಹಣ ಹರಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಗೋಕುಲೆ ಹೇಳಿಕೆ ಪ್ರಕಾರ ಅಲಂಕಾರ್ ಸವಾಯಿ ಹಣ ಹಾಕಿದ್ದಾರೆ. ಭಾರತೀಯ ರಾಷ್ಟೀಯ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಕೆಲಸ ಮತ್ತು ಇತರ ಸೇವೆಗಳಿಗಾಗಿ ಈ ಹಣ ನೀಡಿರುವುದಾಗಿ ತಿಳಿಸಿದ್ದಾನೆ.
ನಗದು ರೂಪದಲ್ಲೇ ಹಣ ನೀಡಿರುವುದೇಕೆ ಎಂಬ ಪ್ರಶ್ನೆಗೆ ಅದನ್ನು ಅಲಂಕಾರ್ ಸವಾಯಿಯೆ ಉತ್ತರಿಸಬೇಕು ಎಂದು ಗೋಕುಲೆ ಸ್ಪಷ್ಟಪಡಿಸಿದ್ದಾನೆ. ಮುಂದುವರೆದು ಪ್ರಶ್ನೆ ಮಾಡಿದಾಗ ಇಬ್ಬರ ನಡುವೆ ಲಿಖಿತವಾದ ಯಾವುದೇ ಕರಾರುಗಳಿಲ್ಲ, ಕೇವಲ ಮೌಖಿಕ ಒಪ್ಪಂದದ ಮೂಲಕ ವಹಿವಾಟು ನಡೆದಿದೆ ಎಂದು ಇಡಿ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅರ್ಥಮಾಡಿಕೊಳ್ಳಲು ಸವಾಯಿ ಅವರ ವಿಚಾರಣೆ ಅನಿವಾರ್ಯ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಈವರೆಗಿನ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಸವಾಯಿ ನಗದು ರೂಪದ ಪಾವತಿಯನ್ನು ಅಲ್ಲಗಳೆದಿದ್ದಾನೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನುಸಾರ ಹೇಳಿಕೆ ದಾಖಲಿಸುವ ಅಗತ್ಯ ಇದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬಲೂನ್ ಹಾರಾಟದ ಬೆನ್ನಲ್ಲೇ ಅಮೇರಿಕಾ ಕಾರ್ಯದರ್ಶಿ ಚೀನಾ ಪ್ರವಾಸ ಮುಂದೂಡಿಕೆ
ಗುಜರಾತ್ ಪೊಲೀಸರು ಕಳೆದ ವರ್ಷದ ಡಿಸೆಂಬರ್‍ನಲ್ಲಿ ಗೂಕುಲೆಯನ್ನು ದೆಹಲಿಯಲ್ಲಿ ಬಂಧಿಸಿದ್ದರು. ಕ್ರೌಡ್ ಫಂಡಿಂಗ್ ಮೂಲಕ ಆತ ಬೃಹತ್ ಪ್ರಮಾಣದ ಹಣ ಸಂಗ್ರಹಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಅದನ್ನು ಆರೋಪಿಗಳಿ ಅಲ್ಲಗಳೆದಿದ್ದಾರೆ.
ED, questions, Rahul Gandhi, aide, money, laundering, case,