ನವದೆಹಲಿ,ಫೆ.20- ಛತ್ತೀಸ್‍ಗಢದ ಹಲವಾರು ಕಾಂಗ್ರೆಸ್ ನಾಯಕರುಗಳ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲ್ಲಿದ್ದಲು ಲೇವಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಮುಂಜಾನೆ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಸಂಬಂಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಯ್‍ಪುರದಲ್ಲಿ ಇದೇ 24 ರಿಂದ ಮೂರು ದಿನಗಳ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೆ ಈ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.
ಭಿಲಾಯಿ ನಲ್ಲಿರುವ ಶಾಸಕ ದೇವೇಂದ್ರ ಯಾದವ್, ಛತ್ತೀಸ್‍ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಖಜಾಂಚಿ ರಾಮಗೋಪಾಲ್ ಅಗರವಾಲ, ಛತ್ತೀಸ್‍ಗಢ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುಶೀಲ್ ಸೇರಿದಂತೆ ಹನ್ನೆರಡು ಕಾಂಗ್ರೆಸ್ ಮುಖಂಡರುಗಳ ಸ್ಥಳಗಳಲ್ಲಿ ಇಂದು ಮುಂಜಾನೆಯಿಂದ ಶೋಧ ನಡೆಯುತ್ತಿದೆ.
ಜಾಲಿಮೂಡ್‍ನಲ್ಲಿ ರಾಹುಲ್, ಪ್ರಿಯಾಂಕಾ
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಡೆಸಲಾದ ಕಲ್ಲಿದ್ದಲು ಲೆವಿ ಹಗರಣದ ಅಪರಾಧದ ಆದಾಯದ ಫಲಾನುಭವಿ ಆಗಿರುವವರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಮ್ಮ ಪಕ್ಷ ಹಮ್ಮಿಕೊಂಡಿರುವ ಸಮಾವೇಶದಿಂದ ಬೆದರಿ ಹೋಗಿರುವ ಬಿಜೆಪಿಯವರು ಇಡಿ ತನಿಖೆಯ ಮೂಲಕ ನಮ್ಮನ್ನು ಹೆದರಿಸಲು ನೋಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ತಿಳಿಸಿದ್ದಾರೆ.
ಬಿಜೆಪಿಯವರು ರಾಜಕೀಯ ಎದುರಾಳಿಗಳ ವಿರುದ್ಧ ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಇದನ್ನು ಖಂಡಿಸಿ ರಾಯಪುರ್ ಇಡಿ ಕಚೇರಿ ಘೇರಾವ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆ ನಾಶ
ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕಾರ್ಟೆಲ್‍ನಿಂದ ಛತ್ತೀಸ್‍ಗಢದಲ್ಲಿ ಸಾಗಿಸುವ ಪ್ರತಿ ಟನ್ ಕಲ್ಲಿದ್ದಲು ಸಾಗಾಣಿಕಗೆ ಅಕ್ರಮವಾಗಿ ಹಣ ಸುಲಿಗೆ ಮಾಡಲಾಗುತ್ತಿರುವ ಬೃಹತ್ ಹಗರಣ ನಡೆದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ರಾಜ್ಯ ಆಡಳಿತ ಸೇವಾ ಅಧಿಕಾರಿ ಸೌಮ್ಯ ಚೌರಾಸಿಯಾ, ಸೂರ್ಯಕಾಂತ್ ತಿವಾರಿ, ಅವರ ಚಿಕ್ಕಪ್ಪ ಲಕ್ಷ್ಮೀಕಾಂತ್ ತಿವಾರಿ, ಛತ್ತೀಸ್‍ಗಢ ಕೇಡರ್ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇನ್ನೊಬ್ಬ ಕಲ್ಲಿದ್ದಲು ಉದ್ಯಮಿ ಸುನೀಲ್ ಅಗರವಾಲ್ ಸೇರಿದಂತೆ ಒಂಬತ್ತು ಜನರನ್ನು ಇದುವರೆಗೆ ಬಂಧಿಸಲಾಗಿದೆ.
ED, raids, Congress, leaders, Chhattisgarh,