ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಪರ್ಕಿತರ ಮೇಲೆ ಇಡಿ ದಾಳಿ

Social Share

ಬೆಂಗಳೂರು,ಫೆ.15- ಜಾರಿ ನಿರ್ದೇಶ ನಾಲಯ(ಇಡಿ)ವು ಭೂಗತ ಜಗತ್ತು, ಕಾನೂನುಬಾಹಿರ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳಿಗೆ ಸಂಬಂಧ ಪಟ್ಟ ಅಕ್ರಮ ಹಣಕಾಸು ವರ್ಗಾವಣೆಗೆ ಸಂಪರ್ಕಿತ ತನಿಖೆಯ ಭಾಗವಾಗಿ ಮುಂಬೈನಲ್ಲಿ ಹಲವು ಕಡೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ.
ಮಹಾರಾಷ್ಟ್ರದ ರಾಜಧಾನಿಯ ಸುಮಾರು 10 ಸ್ಥಳಗಳಲ್ಲಿ ದಾಳಿ ನಡೆಸ ಲಾಗಿದ್ದು ಅಕ್ರಮ ಹಣಕಾಸು ವ್ಯವಹಾರ ತಡೆ ಅನಿಯಮದನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ.
1993ರ ಮುಂಬೈ ಸೋಟಗಳ ರೂವಾರಿ ಮತ್ತು ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ವಿರುದ್ಧ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಎಫ್‍ಐಆರ್ ದಾಖಲಿಸಿದ ಮೇರೆಗೆ ಮತ್ತು ಸ್ವತಂತ್ರ ಗುಪ್ತಚರ ಮಾಹಿತಿ ಆಧರಿಸಿ ಇಡಿ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.
ಅಕ್ರಮ ಹಣಕಾಸು ವಹಿವಾಟು ನಿಗ್ರಹ ಸಂಸ್ಥೆಯ ಮುಂಬೈನ ಭೂಗತ ಜಗತ್ತು ಸಂಪರ್ಕಿತ ಹವಾಲಾ, ಸುಲಿಗೆ ಮತ್ತು ಅಕ್ರಮ ಆಸ್ತಿ ವ್ಯವಹಾರಗಳಿಗೆ ಸಂಬಂಸಿ ಸಾಕ್ಷ್ಯಗಳಿಗೆ ಎದುರು ನೋಡುತ್ತಿದೆ. ಈ ಕರಾಳ ವ್ಯವಹಾರಗಳಲ್ಲಿ ರಾಜಕಾರಣಿಗಳ ಸಂಪರ್ಕ ಇರುವ ಬಗ್ಗೆಯೂ ಸಂಸ್ಥೆಯು ನಿಗಾ ಇರಿಸಿದೆ ಎಂದು ಮೂಲಗಳು ಅರುಹಿವೆ.

Articles You Might Like

Share This Article