ರಾಂಚಿ, ಜೂನ್. 1- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಕಾಂಗ್ರೆಸ್ ಶಾಸಕ ಪ್ರದೀಪ್ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಡಿಸಿದೆ.
ಪೊರೈಯಾಹತ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಮತ್ತು ವಿಧಾನಸಭೆಯ ಕಾಂಗ್ರೆಸ್‍ನ ಉಪ ನಾಯಕರಾಗಿರುವ ಯಾದವ್ ಅವರಿಗೆ ಸಂಬಂಸಿದ0ತೆ ಜಾರ್ಖಂಡ್‍ನ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡಿದಿನ ವಿಚಾರಣೆಯ ನಂತರ ಈ ಕುರಿತು ಶೀಘ್ರದಲ್ಲೇ ನ್ಯಾಯಾಲಯವನ್ನು ಕಾನೂನು ಹೊರಾಟ ನಡೆಸುವುದಾಗಿ ಶಾಸಕ ಯಾದವ್ ಹೇಳಿದ್ದು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ: ತಮಿಳುನಾಡು
ಜಾರ್ಖಂಡ್‍ನಲ್ಲಿ ಕಲ್ಲಿದ್ದಲು ವ್ಯಾಪಾರ ಮತ್ತು ಸಾಗಣೆ, ಕಬ್ಬಿಣದ ಅದಿರು ಹೊರತೆಗೆಯುವಿಕೆ ಮತ್ತು ಸ್ಪಾಂಜ್ ಕಬ್ಬಿಣದ ಉತ್ಪಾದನೆಯಲ್ಲಿ ತೊಡಗಿರುವ ಕೆಲವು ವ್ಯಾಪಾರ ಗುಂಪುಗಳ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಯಾದವ್ ಮತ್ತು ಇನ್ನೊಬ್ಬ ಶಾಸಕರ ಪಾತ್ರವಿದ್ದು ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
enforcementdirectorate, #raids, #CongressMLA, #PradeepYadav,