ಹೈದ್ರಾಬಾದ್‍ನಲ್ಲಿ ಇಡಿ ದಾಳಿ, 150 ಕೋಟಿ ಆಸ್ತಿ ವಶ

Social Share

ಹೈದ್ರಾಬಾದ್, ಅ.21- ಇತ್ತೀಚೆಗೆ ಜಾರಿನಿರ್ದೇಶನಾಲಯ ಅಧಿಕಾರಿಗಳು ಹೈದ್ರಾಬಾದ್ ಮತ್ತು ವಿಜಯವಾಡದಲ್ಲಿ ಚಿನ್ನಾಭರಣ ಮಾಲೀಕರ ಕಚೇರಿ ಹಾಗೂ ನಿವಾಸಿಗಳ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ 150 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಎಂಬಿಎಸ್ ಜ್ಯುವೆಲಯರ್ಸ್, ಮುಸಾದ್ದಿ ಲಾಲ್ ಜೇಮ್ಸ್ ಅಂಡ್ ಜುವೆಲ್ಸ್ ಇಂಡಿಯಾ ಮತ್ತು ಅದರ ನಿರ್ದೇಶಕ ರಾದ ಸುಕೇಶ್ ಗುಪ್ತ ಮತ್ತು ಅನುರಾಗ್ ಗುಪ್ತ ಅವರ ಮನೆ ಹಾಗೂ ಮಳಿಗೆಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯ ನಡೆಸಿದಾಗ ಸುಮಾರು 149 ಕೋಟಿ ಮೌಲ್ಯದ ಆಭರಣಗಳು, 1.96 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು, ಈಗಾಗಲೇ ಸುಕೇಶ್ ಗುಪ್ತ ಅವರನ್ನು ಇಡೀ ಬಂಧಿಸಿ ನಾಂಧಿಪಲ್ಲಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.

ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಹೈಕೋರ್ಟ್ ಆದೇಶ

ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾಪೆರ್ರೇ ಷನ್‍ಗೆ ವಂಶಿಸಿದ್ದ ಪ್ರಕರಣ ಕುರಿತು ಸಿಬಿಐ ಪ್ರಕರಣ ದಾಖಲಿಸಿತ್ತು. ಇದಲ್ಲದೆ ಎಸಿಬಿ ಕೂಡ ಎಫ್‍ಐಆರ್ ದಾಖಲಿಸಿತ್ತು. ಇದರ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಇಡಿ ಮದ್ಯ ಪ್ರವೇಶಿಸಿತ್ತು.

ವಿದೇಶಿ ವಿನಿಮಯ ಕಾಯ್ದೆಯನ್ನು ಸ್ಪಷ್ಪವಾಗಿ ಉಲ್ಲಂಘಿಸಿ ನಿರಂತರವಾಗಿ ಚಿನ್ನಾಭರಣ ವ್ಯವಹಾರದಲ್ಲಿ ಅಕ್ರಮ ನಡೆಸಲಾಗಿತ್ತು ಎಂದು ಇಡಿ ಆರೋಪಿಸಿದೆ.

Articles You Might Like

Share This Article