ಬಿಆರ್‌ಎಸ್‌ ನಾಯಕಿ ಕವಿತಾ ದೆಹಲಿಗೆ ಶಿಫ್ಟ್

ನವದೆಹಲಿ,ಮಾ.16- ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಿನ್ನೆ ಸಂಜೆ ಜಾರಿ ನಿರ್ದೇಶನಾಲಯದಿಂದ ಹೈದರಾಬಾದ್ ಮನೆಯಿಂದ ಬಂಧಿಸಲಾಗಿರುವ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರನ್ನು ಮಧ್ಯರಾತ್ರಿಯ ಸುಮಾರಿಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಗಿದೆ. ನಗರದಲ್ಲಿ ಇಳಿದ ನಂತರ, ಆಕೆಯನ್ನು ಏಜೆನ್ಸಿಯ ಕೇಂದ್ರ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಯಿತು ಎಂದು ತಿಳಿದುಬಂದಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯನ್ನು ಇಂದು ಬೆಳಗ್ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆಕೆಯನ್ನು ಕಸ್ಟಡಿ ವಿಚಾರಣೆಗಾಗಿ ಒಪ್ಪಿಸುವಂತೆ … Continue reading ಬಿಆರ್‌ಎಸ್‌ ನಾಯಕಿ ಕವಿತಾ ದೆಹಲಿಗೆ ಶಿಫ್ಟ್