ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ..!

Social Share

ನವದೆಹಲಿ,ಜು.19- 200ರ ಗಡಿ ದಾಟಿದ್ದ ಸೂರ್ಯಕಾಂತಿ ಖಾದ್ಯ ತೈಲ ಇದ್ದಕ್ಕಿದ್ದಂತೆ ಭಾರೀ ಇಳಿಕೆಯಾದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ಇಳಿಕೆಯಾದ ನಂತರ ದೇಶದ ಪ್ರಮುಖ ಖಾದ್ಯ ತೈಲ ಉತ್ಪಾದನಾ ಕಂಪನಿಯಾಗಿರುವ ಅದಾನಿ ಒಡೆತನದ ಅದಾನಿ ವಿಲ್ಮರ್ ಕಂಪನಿಯು ಫಾರ್ಚೂನ್ ಖಾದ್ಯತೈಲ ಬೆಲೆಯನ್ನು ಪ್ರತಿ ಲೀಟರ್‍ಗೆ 30 ರೂ. ವರೆಗೆ ಇಳಿಕೆ ಮಾಡಿದೆ.

ಇದರ ಬೆನ್ನಲ್ಲೇ ಅಲ್ಪಸ್ವಲ್ಪ ಇಳಿಕೆ ಮಾಡಿದೆ. ಇತರ ಕಂಪನಿಗಳು ಇದೇ ಹಾದಿ ಹಿಡಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಬೆಲೆ ಇಳಿಕೆ ಮತ್ತು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ.5ರಷ್ಟು ಇಳಿಸಿದ ಪರಿಣಾಮ ಫಾರ್ಚೂನ್ ವಿವಿಧ ಮಾದರಿಯ ಖಾದ್ಯ ತೈಲ ಬೆಲೆಯನ್ನು ಲೀಟರ್‍ಗೆ 5 ರೂ. ನಿಂದ 30 ರೂ. ವರೆಗೂ ಇಳಿಸಲಾಗಿದೆ.

ಹೀಗಾಗಿ ಅದಾನಿ ವಿಲ್ಮರ್ ಕಂಪನಿಯ ಸೋಯಾ ಎಣ್ಣೆ ದರದಲ್ಲಿ ಲೀ.ಗೆ 195 ರೂ. ನಿಂದ 165 ರೂ.ಗೆ, ಸೂರ್ಯಕಾಂತಿ ಎಣ್ಣೆ 210 ರೂ. ನಿಂದ 199 ರೂ.ಗೆ, ಎಳ್ಳೆಣ್ಣೆ 195 ರೂ. ನಿಂದ 190 ರೂ.ಗೆ, ಶೇಂಗಾ ಎಣ್ಣೆ 220 ರೂ. ನಿಂದ 210 ರೂ. ಇಳಿಕೆ ಆಗಲಿದೆ.

Articles You Might Like

Share This Article