ಆರ್ಥಿಕ ದುರ್ಬಲರ ಮೀಸಲಾತಿ ಅನುಷ್ಠಾನಕ್ಕೆ ವಿಶೇಷ ಕಾಯ್ದೆ

Social Share

ಬೆಂಗಳೂರು,ನ.9- ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್) ದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ವಿಶೇಷ ಕಾಯ್ದೆ ರೂಪಿಸಲು ಮುಂದಾಗಿದೆ.

ಮುಂದಿನ ತಿಂಗಳು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಕಾಯ್ದೆಯನ್ನು ಮಂಡಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಜ್ಜಾಗಿದೆ.

ಈಗಾಗಲೇ ಕಾಯ್ದೆ ಅನುಷ್ಠಾನಕ್ಕೆ ಸಿದ್ದತೆಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದ ಯಥಾವತ್ ಕಾಯ್ದೆಯನ್ನೇ ರಾಜ್ಯದಲ್ಲೂ ಅನುಷ್ಠಾನ ಮಾಡಲಾಗುತ್ತಿದೆ. ವಿಧಾನಸಭೆಯಲ್ಲಿ ಇದು ಬಹುಮತದಿಂದ ಅಂಗೀಕೃತವಾದ ನಂತರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುತ್ತದೆ.

ಸುಪ್ರೀಂಕೋರ್ಟ್‍ನ 50ನೇ ಸಿಜೆ ಆಗಿ ಚಂದ್ರಚೂಡ್ ಪ್ರಮಾಣ ವಚನ

ಬಳಿಕ ಮಸೂದೆ ಅನುಷ್ಠಾನಕ್ಕೆ ಬರಲಿದ್ದು, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ಸಿಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ.50ರಷ್ಟು ಮೀಸಲಾತಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ. ಇಡಬ್ಲ್ಯುಎಸ್ ಜಾರಿಯಾದರೆ ಸಾಮಾನ್ಯ ವರ್ಗದಲ್ಲಿರುವ ಶೇ.50ರಷ್ಟು ಮೀಸಲಾತಿಯಲ್ಲಿ ಕಡಿತವಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ.

ಇದೇ ವೇಳೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಇದೀಗ ಇಡಬ್ಲ್ಯುಎಸ್ ಕಾಯ್ದೆ ಜಾರಿ ಮಾಡಲು ಮುಂದಾಗಿರುವುದರಿಂದ ಹೆಚ್ಚುವರಿ ಮೀಸಲಾತಿಯನ್ನು ಸರ್ಕಾರ ಹೇಗೆ ಸರಿದೂಗಿಸುತ್ತದೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ಹೀಗಾಗಿ ಈ ಬಗ್ಗೆ ಗೊಂದಲಗಳು ಮುಂದುವರೆದಿವೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಬಹುಮತದಿಂದ ಎತ್ತಿ ಹಿಡಿದಿತ್ತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಮುಕುಟ

ಯಾರ್ಯಾರಿಗೆ ಅನುಕೂಲ:
ಬರುವ ಅಧಿವೇಶನದಲ್ಲಿ ಇಡಬ್ಲ್ಯುಎಸ್ ಕಾಯ್ದೆ ಅನುಷ್ಠಾನವಾದರೆ ರಾಜ್ಯದಲ್ಲಿರುವ ಐದು ಸಮುದಾಯಗಳಿಗೆ ಇದರ ಲಾಭ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬ್ರಾಹ್ಮಣರು, ಆರ್ಯವೈಶ್ಯರು, ಜೈನರು, ಮೊದಲಿಯರ್ ಮತ್ತು ನಗರ್ತ ಸಮುದಾಯಗಳಿಗೆ ಇಡಬ್ಲುಎಸ್ ಅನ್ವಯವಾಗಲಿದೆ.

ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ:
ಪ್ರಸ್ತುತ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಪರಿಶಿಷ್ಟ ಜಾತಿಗೆ ಶೇ.17(101 ಜಾತಿ), ಪರಿಶಿಷ್ಟ ವರ್ಗ ಶೇ.7( 50 ಜಾತಿಗಳು),ಇತರೆ ಹಿಂದುಳಿದ ವರ್ಗ ಶೇ.32( 206 ಜಾತಿಗಳು), ಪ್ರವರ್ಗ 1( 95 ಜಾತಿ, ಪ್ರವರ್ಗ 2ಎ( 102 ಜಾತಿ), ಪ್ರವರ್ಗ 2ಬಿ( 1 ಜಾತಿ), ಪ್ರವರ್ಗ 3ಎ( 3 ಜಾತಿಗಳು), ಪ್ರವರ್ಗ 3ಬಿ ( 6 ಜಾತಿಗಳು) ಸೇರಿದಂತೆ ಒಟ್ಟು ಈ ಸಮುದಾಯಗಳಿಗೆ ಶೇಕಡ 56ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು

ರಾಜ್ಯದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತಂದು ಸುಗ್ರೀವಾಜ್ಞೆಯನ್ನು ಸಹ ಹೊರಡಿಸಿದ್ದು, ಈಗ ಮೀಸಲಾತಿ ಹೇಗೆ ಸರಿಪಡಿಸುತ್ತದೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

Articles You Might Like

Share This Article