ಬೆಂಗಳೂರು,ಫೆ.17- ಚುನಾವಣಾ ವರ್ಷದಲ್ಲಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅದರಲ್ಲೂ ಶಿಕ್ಷಣ ಇಲಾಖೆ ಬಜೆಟ್‍ನ ಅನುದಾನ ಹಂಚಿಕೆಯಲ್ಲಿ ಸಿಂಹಪಾಲು ಪಡೆದಿದೆ. ಇತರ ವೆಚ್ಚಗಳ ಗಾತ್ರ ಶೇ.30ರಷ್ಟನ್ನು ದಾಟಿದೆ.
ಇನ್ನೂ ಆದಾಯ ಸಂಗ್ರಹದಲ್ಲಿ ಎಂದಿನಂತೆ ವಾಣಿಜ್ಯ ತೆರಿಗೆ ಸಿಂಹಪಾಲು ಹೊಂದಿದೆ. ಮುಂದಿನ ವರ್ಷ 97 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇದೆ. ಇದು ಒಟ್ಟು ಆದಾಯದಲ್ಲಿ ಶೇ.59ರಷ್ಟು. ಇನ್ನೂ ಅಬಕಾರಿ ಬಾಬ್ತಿನಿಂದ 35 ಸಾವಿರ ಕೋಟಿ ರೂಪಾಯಿ ನಿರೀಕ್ಷಿಸಲಾಗಿದ್ದು, ಶೇ.21ರಷ್ಟಾಗಿದೆ. ನೋಂದಣಿ ಮತ್ತು ಮುದ್ರಾಂಕದಿಂದ 19 ಸಾವಿರ ಕೋಟಿ ರೂಪಾಯಿಯಾಗಿದ್ದು, ಶೇ.12ರಷ್ಟು, ಮೋಟಾರು ವಾಹನ ತೆರಿಗೆಯಿಂದ 10,500 ಕೋಟಿ ರೂಪಾಯಿಗಳಾಗಿದ್ದು, ಶೇ.6ರಷ್ಟು, ಇತರೆ ಬಾಬ್ತುಗಳಿಂದ 3153 ರೂಪಾಯಿ ವಸೂಲಿಯಾಗಲಿದೆ, ಅದು ಶೇ.2ರಷ್ಟು ಎಂದು ಅಂದಾಜಿಸಲಾಗಿದೆ.
ಇನ್ನೂ ಇಲಾಖಾವಾರು ವೆಚ್ಚದ ವಿವರ ಕೆಳಗಿನಂತಿದೆ.
ಇಲಾಖಾವಾರು ಹಂಚಿಕೆ ಮೊತ್ತ ಶೇ.
ಶಿಕ್ಷಣ-37,960 12
ಜಲಸಂಪನ್ಮೂಲ-22,854 7
ಗ್ರಾಮೀಣಾಭಿವೃದ್ಧಿ-ಪಂ.ರಾಜ್ 20,494 6
ನಗರಾಭಿವೃದ್ಧಿ -17,938 6
ಕಂದಾಯ -15,943 5
ಆರೋಗ್ಯ- ಕು.ಕಲ್ಯಾಣ 15.151 5
ಒಳಾಡಳಿತ-ಸಾರಿಗೆ 14,509 5
ಇಂಧನ -13.803 4
ಸಮಾಜ ಕಲ್ಯಾಣ- 11,163 4
ಲೋಕೋಪಯೋಗಿ -10,741 3
ಕೃಷಿ-ತೋಟಗಾರಿಕೆ -9456 3
ಮಹಿಳಾ-ಮಕ್ಕಳ ಕಲ್ಯಾಣ -5676 2
ಆಹಾರ-ನಾಗರೀಕ ಸರಬರಾಜು- 4600 1
ವಸತಿ -3787 1
ಇತರೆ ವೆಚ್ಚಗಳು -1,16968 36
#BasavarajBommai, #Budget2023, #StateBudget2023, #BommaiBudget, #ಬಜೆಟ್, #ಬಜೆಟ್2023,