ಪಠ್ಯ ಪರಿಷ್ಕರಣೆ ಕುರಿತು ವಿಪಕ್ಷಗಳ ಆರೋಪಕ್ಕೆ ಬಿ.ಸಿ.ನಾಗೇಶ್ ಖಡಕ್ ತಿರುಗೇಟು
ಬೆಂಗಳೂರು.ಮೇ.22- ಶಿಕ್ಷಣ ಇಲಾಖೆಯ ಪ್ರಗತಿ ಸಹಿಸದೇ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಅಪ ಪ್ರಚಾರ ಮಾಡುವ ಮೂಲಕ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ ಎಂದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಧ ಸತ್ಯ ಹೇಳುವ ಮೂಲಕ ಜಾತಿ ರಾಜಕಾರಣ ಮಾಡಲಾಗುತ್ತಿದೆ. ಕಳೆದ ವರ್ಷ ಶಾಲೆ ಪ್ರಾರಂಭ ಆಗಲ್ಲ ಅಂದರು, ಶಾಲೆ ಪ್ರಾರಂಭವಾದಾಗ ಕೆಲವರು ವಿರೋಸಿದರು. ಶಾಲೆ ನಡೆಸಿ ಮಕ್ಕಳ ಪ್ರಾಣಕ್ಕೆ ಸಂಚಕಾರ ಅಂದರು. ಆದರೆ ನಾವು ಶಾಲೆ ಪ್ರಾರಂಭಿಸಿ ಯಶಸ್ವಿಯಾಗಿರುವುದನ್ನು ಕೆಲವರಿಗೆ ಸಹಿಸಲಾಗಲಿಲ್ಲ ಎಂದು ಕಿಡಿಕಾರಿದರು.
ಹಿಜಾಬ್ ವಿಚಾರದಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡಿ ವಿಫಲರಾದರು. 15 ಸಾವಿರ ಶಿಕ್ಷಕರ ನೇಮಕ, ಶಾಲೆ ಆರಂಭದಲ್ಲೇ 27 ಸಾವಿರ ಶಿಕ್ಷಕರ ನೇಮಕದ ನಿರ್ಣಯ, ಎಸ್ಎಸ್ಎಲ್, ಪಿಯುಸಿ ಪರೀಕ್ಷೆ ಸುಗಮವಾಗಿ ನಡೆಸಿದ್ದು, 24 ಸಾವಿರ ಶಿಕ್ಷಕರು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಆದದ್ದು,7 ಸಾವಿರ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಶೈಕ್ಷಣಿಕ ಪ್ರಗತಿ ಸಹಿಸಲಾಗುತ್ತಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಪ್ಪು ಪಠ್ಯ ಕೈಬಿಟ್ಟಿದ್ದಾರೆ, ಭಗತ್ ಸಿಂಗ್ ಪಾಠ ತೆಗೆದಿದ್ದಾರೆ ಅಂದರು. ಯಾವುದನ್ನೂ ನಾವು ಪಾಠ ತೆಗೆದಿಲ್ಲ. ಮಕ್ಕಳಿಗೆ ಬೇಡವಾದ ಪಾಠ ಕೈಬಿಟ್ಟಿದ್ದೇವೆ. ಭಾವುಟದ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರದ ಅವಯಲ್ಲಿದ್ದ ಪಠ್ಯ ಪರಿಷ್ಕರಣ ಸಮಿತಿ ಕೈಬಿಟ್ಟಿದೆ. ಭಾರತದ ಸಂಸ್ಕøತಿ ಮಕ್ಕಳಿಗೆ ಹೇಳುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದನೇ ತರಗತಿಯಲ್ಲಿ ಮಕ್ಕಳಿಗೆ ಒಂದೇ ಒಂದು ಕಥೆಯನ್ನು ಸೇರಿಸಿಲ್ಲ. ಬೆಂಗಳೂರು ನಿರ್ಮಾತೃಕೆಂಪೇಗೌಡರ ಬಗ್ಗೆ ಒಂದೇ ಒಂದು ಸಾಲು ಇಲ್ಲ. ಕೆಂಪೇಗೌಡರ ಮೇಲೆ ಇವರಿಗೆ ಏನು ಧ್ವೇಷ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದರು. ಸಾಹಿತಿ ಬರಗೂರರು ರಾಮಚಂದ್ರಪ್ಪ ನೃತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಒಳ್ಳೆಯ ವಿಚಾರವನ್ನು ಏಕೆ ಕೈಬಿಟ್ಟಿತು ಎಂದು ಇವತ್ತು ಕೇಳುವವರು ಅಂದು ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಕಲಿಕಾ ಚೇತರಿಕೆ ತಂದಿದ್ದಕ್ಕೂ ಬಿಸಿಲು ಶಾಲೆ ಯಾಕೆ ಮಾಡುತ್ತಾರೆ ಅಂದರು. ಮದ್ಯಂತರ ರಜೆ ನಾವು ಕಡಿತ ಮಾಡಿದೆವು ಆಗಲೂ ಕೆಲವರ ಛೂ ಬಿಡುವ ಕೆಲಸ ಮಾಡಿದರು. ನಾರಾಯಣಗುರು ಪಠ್ಯವನ್ನ ಕೈಬಿಟ್ಟಿಲ್ಲ, ನಾವು ಇತಿಹಾಸದಿಂದ ತೆಗೆದು ಕನ್ನಡಕ್ಕೆ ಹಾಕಿದ್ದೇವೆ. ಆರನೇ ತರಗತಿಯಲ್ಲಿ ಅವರ ಪಾಠವಿದೆ.ಭಗತ್ ಸಿಂಗ್,ಚಂದ್ರಶೇಖರ್ ಅಜÁದ್, ರಾಜಗುರು, ಸುಖದೇವ್ ಅವರನ್ನು ಸೇರಿಸಿದ್ದೇವೆ ಎಂದರು.
ಟಿಪ್ಪು ಸುಲ್ತಾನ್ ಕುರಿತ ಒಂದು ಪುಟವಿದ್ದದ್ದನ್ನು 5 ಪುಟಕ್ಕೆ ವಿಸ್ತರಿಸಿದರು. ಬ್ರಿಟೀಷರ ವಿರುದ್ಧ ಹೋರಾಡಿದ್ದು ಟಿಪ್ಪು ಮಾತ್ರನಾ? ಎಂದು ಪ್ರಶ್ನಿಸಿದರು
ರಾಮರಾಜ್ಯ ಬರಬೇಕು ಅಂತಾ ಹೇಳಿದ್ದು ಗಾಂೀಜಿ. ರಾಮ ವೈದಿಕ ಸಂಸ್ಕøತಿ. ರಾವಣ ದ್ರಾವಿಡ ಸಂಸ್ಕøತಿ ಅಂತ ಬರೆದಿದ್ದನ್ನು ಇವರಿಗೆ ಕೋಪ ಯಾಕೆ? ಬಿಜೆಪಿ ಬಂದ ಮೇಲೆ ರಾಮ ಬರಲಿಲ್ಲ. ಕಾಂಗ್ರೆಸ್ನ ಸೋಕಾಲ್ಡ ಬುದ್ಧಿ ಜೀವಿಗಳಿಗೆ ಏನಾಗಿದೆ ರಾಮನ ಬಗ್ಗೆ ತೆಗೆಯಬೇಕು,ರಾವಣನನ್ನ ಹಾಕಬೇಕು ಮಕ್ಕಳಲ್ಲಿ ಜÁತಿಯವಿಷ ಬೀಜ ಬಿತ್ತಿದ್ದಾರೆ ಎಂದು ಟೀಕಿಸಿದರು.
ಕುವೆಂಪು ಅವರ ಎರಡು ಪಾಠ ಹಿಂದಿನ ಸಮಿತಿ ಕೈ ಬಿಟ್ಟಿತ್ತು. ನಾವು ಸೇರಿಸಿದ್ದೇವೆ. ಟಿಪ್ಪು ಸುಲ್ತಾನ್ ಮತಾಂತರ ಮಾಡುತ್ತಿದ್ದ ವಿಷಯವನ್ನು ತೆಗೆದಿದ್ದು ಏಕೆ? ಇವರಿಗೆ ಬೇಕಾದಂತೆ ಇತಿಹಾಸ ಹಾಕಿಕೊಂಡಿದ್ದಾರೆ. ಏನೂ ಇಲ್ಲದಾಗ ಜಾತಿಯನ್ನು ಮುಂದೆ ತರೋದೇ? ಮದಕರಿನಾಯಕ, ಸಂಗೊಳ್ಳಿ ರಾಯಣ್ಣ , ಕಿತ್ತೂರರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಯಾರ ವಿರುದ್ಧ ಹೋರಾಟ ಮಾಡಿದ್ದರು? ಇವರೆಲ್ಲ ಹಿಂದೂ ಅಂತಾ ಪಠ್ಯದಿಂದ ಕೈಬಿಟ್ಟರಾ? ಡಾ.ಹೆಡಗೆವಾರ್ ಒಬ್ಬ ಕ್ರಾಂತಿಕಾರಿ, ಬ್ರಿಟೀಷ್ ಆಡಳಿತದ ವೇಳೆ ಚಳುವಳಿಗೆ ಧುಮುಕಿದವರು, ಕಾಂಗ್ರೆಸ್ ಮೂವ್ ಮೆಂಟ್ ನಲ್ಲಿ ಇದ್ದವರು. ಹಾಗಾಗಿ ಅವರ ಪಾಠವನ್ನ ಸೇರಿಸಿದ್ದೇವೆ ಎಂದು ಸಮರರ್ಥಿಸಿಕೊಂಡರು.
ಸಿಂಧೂ ಸಂಸ್ಕೃತಿ ಬಿಜೆಪಿ ಬಂದ ಮೇಲೆ ಬಂದಿರುವುದೆ? ಅಂಬೇಡ್ಕರ, ಮಹಾತ್ಮ ಗಾಂೀಜಿ ವಿಚಾರಗಳನ್ನು ಪಠ್ಯದಿಂದ ತೆಗೆಯಲಾಗಿತ್ತು.ಧರ್ಮವೆಂದರೆ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮಾತ್ರವೇ? ಬ್ರಿಟಿಷರು, ಕೋಲಾರ ಮತ್ತು ತಾಳಗುಪ್ಪಕ್ಕೆ ಏಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಿದರು ಎಂಬುದನ್ನು ಮುಂದೆ ಹೇಳುತ್ತೇವೆ. ಸಕಾಲದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ದೊರೆಯಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.