ಬೆಂಗಳೂರು,ಫೆ.13- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆದರೆ ಸಾತ್ವಿಕ ಆಹಾರದ ಬಗ್ಗೆ ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.
ವಿಧಾನಪರಿಷತ್ನಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದರಿಂದ ಎಂಟನೇ ತರಗತಿಯವರೆಗೂ ಮೊಟ್ಟೆ ನೀಡಬೇಕು ಎಂದು 2007ರಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಯಾವುದೇ ವಿರೋಧ ಬಂದರೂ ಲೆಕ್ಕಿಸದೆ ಮೊದಲು ಅಪೌಷ್ಠಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ಮೊಟ್ಟೆ ನೀಡುವುದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು.
ಅಲ್ಲಿನ ಫಲಿತಾಂಶವನ್ನು ವೈಜಾ್ಞನಿಕವಾಗಿ ಅಧ್ಯಯನ ನಡೆಸಿದ ಬಳಿಕ ಅಪೌಷ್ಠಿಕತೆ ಕಡಿಮೆಯಾಗಿರುವುದು ಕಂಡು ಬಂದಿದೆ. ನಂತರ ರಾಜ್ಯದ ಎಲ್ಲಾ ಭಾಗಗಳಿಗೂ ಮೊಟ್ಟೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ವರ್ಷದಲ್ಲಿ 46 ದಿನ ಮೊಟ್ಟೆ ನೀಡಲಾಗುತ್ತಿದೆ, ಮುಂದಿನ ವರ್ಷದಿಂದ ಅದನ್ನು ಮತ್ತಷ್ಟು ವಿಸ್ತರಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದರು.
ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಅಥಬಾ ಚುಕ್ಕಿ ನೀಡಲಾಗುತ್ತಿದೆ. ಮಕ್ಕಳು ತಮಗೆ ಇಷ್ಟವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಬಲವಂತ ಇಲ್ಲ. ಮೊಟ್ಟೆ ತಿನ್ನಲೇಬೇಕು, ತಿನ್ನಬಾರದು ಎಂಬ ಒತ್ತಾಯ ಮಾಡುತ್ತಿಲ್ಲ ಎಂದರು.
ಶಾಲಾ ಶಿಕ್ಷಣದ ಕುರಿತು ಚರ್ಚಿಗಳು ಇತ್ತೀಚೆಗೆ ಸರ್ವ ಧರ್ಮಗಳ ಚಿಂತಕರ ದುಂಡು ಮೇಜಿನ ಸಭೆ ನಡೆಸಲಾಗಿತ್ತು. ಅಲ್ಲಿ ಕೆಲವರು ಸಾತ್ವಿಕ ಆಹಾರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ವ್ಯಕ್ತ ಪಡಿಸುವುದು ಅವರ ಸ್ವಾತಂತ್ರ್ಯ ಅಭಿಪ್ರಾಯವನ್ನು ಇದೇ ರೀತಿ ವ್ಯಕ್ತಪಡಿಸಿ ಎಂದು ಹೇಳಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಸಾತ್ವಿಕ ಆಹಾರ ನೀಡುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದರು.
ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಎಲ್ಲರೂ ಸಲಹೆ ನೀಡಿದ್ದಾರೆ. ಅದನ್ನು ಮುಂದಿನ ವರ್ಷದಿಂದ ಜಾರಿಗೆ ತರಲು ಪಯತ್ನಗಳು ನಡೆದಿವೆ. ಇಲ್ಲಿ ನೈತಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರವನ್ನು ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.ಸಭಾಪತಿ ಅವರು ಧ್ವನಿಗೂಡಿಸಿ ನೈತಿಕ ಶಿಕ್ಷಣ ಬೋಸುವ ಅಗತ್ಯ ಇದೆ ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪೌಷ್ಠಿಕತೆ ಕುರಿತು ಅಧ್ಯಯನ ನಡೆಸಿರುವ ಸಮೀಕ್ಷೆಯೊಂದು ಶೇ.3.6ರಷ್ಟು ಮಕ್ಕಳಿಗೆ ಮಾತ್ರ ಪೌಷ್ಠಿಕ ಆಹಾರ ಸಿಗುತ್ತಿದೆ. ಉಳಿದ ಮಕ್ಕಳಿಗೆ ಸೂಕ್ತ ಆಹಾರ ಸಿಗುತ್ತಿಲ್ಲ ಎಂಬ ವರದಿ ಇದೆ. ಶಾಲೆಗಳಲ್ಲಿ ಮೊಟ್ಟೆ ನೀಡಬೇಕು ಎಂಬ ಚರ್ಚೆಗಳು ನಡೆದಾಗ ಅಭಿಪ್ರಾಯ ಸಂಗ್ರಹಿಸಿದಾಗ ರಾಜ್ಯದಲ್ಲಿ 48 ಲಕ್ಷ ಮಕ್ಕಳ ಪೈಕಿ 37 ಲಕ್ಷ ಮಕ್ಕಳು ಮೊಟ್ಟೆ ಬೇಕು ಎಂದು ತಿಳಿಸಿವೆ. 10 ಲಕ್ಷ ಮಕ್ಕಳು ಮಾತ್ರ ಮೊಟ್ಟೆ ಬೇಡ ಎಂದಿದ್ದಾರೆ ಎಂದರು.
ನಿರಾಣಿ ಹಣಮಂತ ರುದ್ರಪ್ಪ, ಎಸ್.ವಿ.ಸಂಕನೂರು, ಪ್ರೌಢಶಾಲೆಯ ಸಹ ಶಿಕ್ಷಕರಿಗೆ ಪದವಿ ಪೂರ್ವ ಉಪನ್ಯಾಸಕರಾಗಿ ಬಡ್ತಿ ನೀಡಲು 12 ವರ್ಷದಿಂದ ಕ್ರಮ ಕೈಗೊಂಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಾಗು ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಅನುಸರಿಸಿ ಜೇಷ್ಠತಾ ಪಟ್ಟಿ ತಯಾರಿಸಲು ವಿಳಂಬವಾಗಿದ್ದರಿಂದ ಬಡ್ತಿ ನೀಡಿಕೆಯಲ್ಲಿ ವಿಳಂಬವಾಗಿದೆ ಎಂದು ಕಾರಣ ನೀಡಲಾಗಿದೆ. ಈ ಎರಡು ಘಟನೆಗಳು ನಡೆದು ಬಹಳಷ್ಟು ವರ್ಷಗಳಾಗಿವೆ. ಇಷ್ಟು ವಿಳಂಬವೇಕೆ ಎಂದು ಸದಸ್ಯರು ಪ್ರಶ್ನಿಸಿದರು.
ಈ ಮೊದಲು ಮುಖ್ಯಮಂತ್ರಿ ಸಿದ್ದರಾವiಯ್ಯ ಅವರ ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ ಶೇ.50:50ರ ಅನುಪಾತದಲ್ಲಿ ಮುಂಬಡ್ತಿ ನೀಡಬೇಕು, ಲಿಖಿತ ಪರೀಕ್ಷೆ ನಡೆಸದೆ ನೇರವಾಗಿ ಬಡ್ತಿಗೆ ಪರಿಗಣಿಸಬೇಕು ಎಂಬ ನಿರ್ಣಯಕೈಗೊಳ್ಳಲಾಗಿದೆ. ಅದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದಾಗ ಉತ್ತರಿಸಿದ ಉತ್ತರಿಸಿ ಸಚಿವರು, ಈ ಅವೇಶನ ಮುಗಿಯುವುದರ ಒಳಗ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದರು.
#Govt, #commits, #implement, #moraleducation, #schools, #BCNagesh,