ಸಕಾಲದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ತಲುಪಲಿವೆ : ಬಿ.ಸಿ.ನಾಗೇಶ್

Spread the love

ಚಾಮರಾಜನಗರ,ಮೇ 25- ಈಗಾಗಲೇ ಶೇ.80ರಷ್ಟು ಪಠ್ಯಪುಸ್ತಕ ಮುದ್ರಣವಾಗಿದೆ. ಕ್ಷೇತ್ರ ಶಿಕ್ಷಣಾಕಾರಿಗಳಿಗೂ ತಲುಪಿದ್ದು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಆರಂಭವಾಗಿದ್ದು, ಕಲಿತಾ ಚೇತರಿಕೆ ನಡೆಯುತ್ತಿದೆ. ಸಕಾಲದಲ್ಲಿ ಪಠ್ಯಪುಸ್ತಕ ಒದಗಿಸುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಪಠ್ಯ ಮುದ್ರಣವಾಗಿದೆ. ಉಕ್ರೇನ್ ಯುದ್ಧದಿಂದಾಗಿ ಮುದ್ರಣ ಕಾಗದ ಅಭಾವ ಉಂಟಾಗಿ ವಿಳಂಬವಾಗಿತ್ತು.

ಪಠ್ಯ ಪುಸ್ತಕ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಸಾಹಿತ್ಯ ದೇವನೂರು ಮಹದೇವ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ಈಗಾಗಲೇ ಪಠ್ಯ ಮುದ್ರಣವಾಗಿದೆ. ಅವರ ಬಗ್ಗೆ ಅಪಾರ ವಿಶ್ವಾಸವಿದೆ. ಅವರ ಹೋರಾಟದ ಬಗ್ಗೆಯೂ ಕಳಕಳಿ ಇದೆ ಎಂದರು.
100 ವರ್ಷ ದಾಟಿರುವ ಕಾಂಗ್ರೆಸ್ ಪಕ್ಷಕ್ಕೆ ವೈಚಾರಿಕಾ ಅಧಃಪತನಕ್ಕೆ ಬಂದಿದೆ.

ಉತ್ತರಪ್ರದೇಶ ಚುನಾವಣೆ ನಂತರ ರಾಷ್ಟ್ರದಲ್ಲಿ ಕಾಂಗ್ರೆಸ್ ಎಲ್ಲೂ ಇಲ್ಲದಂತಾಗುತ್ತದೆ ಎಂಬ ಭಯದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚನೆಯಾಗಿ 8 ತಿಂಗಳು ಕಳೆದ ನಂತರ ಈಗ ಮಾತನಾಡುತ್ತಿದ್ದಾರೆ. ನಾವು ಪಠ್ಯ ಪುಸ್ತಕವನ್ನು ಮುಚ್ಚಿಟ್ಟಿಲ್ಲ. ಯಾರೂ ಬೇಕಾದರೂ ನೋಡಬಹುದು. ಹತಾಶರಾಗಿ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದರು.

ಪಠ್ಯದ ವಿಚಾರವನ್ನು ರಾಜಕೀಯಗೊಳಿಸಲು ಹಾಗೂ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್ನ್ನು ರಾಜಕೀಯ ಅಸ್ತ್ರವಾಗಿ ಬಳಸಿ ವಿಫಲವಾದರು. ಪರಿಷ್ಕರಣೆಗೆ ಮುನ್ನವೇ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.
ನಾರಾಯಣಗುರು ವಿಚಾರದಲ್ಲೂ ಜಾತಿ ಬೀಜ ಬಿತ್ತುವ ಕೆಲಸ ಮಾಡಿದರು. ಕುವೆಂಪು ವಿಚಾರದಲ್ಲೂ ಸುಳ್ಳು ಹೇಳಿದರು. ಎಲ್ಲವೂ ವಿಫಲವಾದ ಮೇಲೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.

Facebook Comments

Sri Raghav

Admin