ಬೆಂಗಳೂರು,ಫೆ.4- ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಕನ್ನಡ ಹಾಗೂ ಕನ್ನಡಿಗರ ಹಿತಕಾಪಾಡುವ ಸದುದ್ದೇಶದಿಂದ ಉದಯವಾದ ಹೆಮ್ಮೆಯ ಪತ್ರಿಕೆಯಾದ ಈ ಸಂಜೆ ಇದೀಗ ಯಶಸ್ವಿ ಮೂರು ದಶಕ ಪೂರ್ಣಗೊಳಿಸಿ ನಾಲ್ಕನೇ ದಶಕಕ್ಕೆ ಕಾಲಿಟ್ಟಿದೆ.
ಹಲವು ಏಳು-ಬೀಳುಗಳ ನಡುವೆಯೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸಂಜೆ ಪತ್ರಿಕೆ ಮೂರು ದಶಕಗಳನ್ನು ಪೂರ್ಣಗೊಳಿಸುವುದು ಸಾಮಾನ್ಯ ಮಾತಲ್ಲ.
ಇದೀಗ 32ನೇ ವರ್ಷಕ್ಕೆ ಕಾಲಿಟ್ಟಿರುವ ಪತ್ರಿಕೆಯ ಹೆಮ್ಮೆಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದೇ ಸ್ನೇಹಕೂಟ!
ಹೌದು! ಶುಕ್ರವಾರ ಅಭಿಮಾನಿ ವಸತಿಯಲ್ಲಿ ನಡೆದ ಅಪರೂಪದ ಕಾರ್ಯಕ್ರಮ ಹಲವು ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು.

ಪತ್ರಿಕೆಯ ಸಂಪಾದಕರಾದ ಟಿ.ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿದೇರ್ಶಕ ಡಿ.ಪಿ.ಮುರಳೀಧರ್, ಉಪನಿದೇರ್ಶಕ ಕೆ.ಪಿ.ಪುಟ್ಟಸ್ವಾಮಯ್ಯ, ಅಭಿಮಾನಿ ಸಮೂಹದ ಕಾರ್ಯನಿರ್ವಾಹಕ ನಿದೇರ್ಶಕರಾದ ವಿ.ಶ್ರೀನಿವಾಸ್, ಟಿ.ನಾಗರಾಜ್, ನಿರ್ದೇಶಕರಾದ ವಿ.ದಿವಾಕರ್, ವಿ.ಪುರೋಷತ್ತಮ್ ಸೇರಿದಂತೆ ಹಲವಾರು ಪ್ರಮುಖರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ದಾಖಲಾರ್ಹವಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಸೇರಿದಂತೆ ಪ್ರತಿಯೊಬ್ಬರೂ ಪತ್ರಿಕೆ ನಡೆದು ಬಂದ ದಾರಿ, ಎದುರಾಗಿದ್ದ ಸವಾಲುಗಳು, ನೆಲ-ಜಲ, ಭಾಷೆ ವಿಷಯದಲ್ಲಿ ಪತ್ರಿಕೆಯ ಬದ್ಧತೆ ಸೇರಿದಂತೆ ಹಲವಾರು ವಿಷಯಗಳನ್ನು ಸಿಂಹಾವಲೋಕನ ಮಾಡಿದರು.
ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಜಂಟಿ ನಿದೇರ್ಶಕ ಮುರಳಿಧರ್ ಮಾಡಿದ ಭಾಷಣ ನೆರೆದಿದ್ದ ಪ್ರತಿಯೊಬ್ಬರ ಗಮನ ಸೆಳೆಯಿತು. ತುಂಬಾ ಸುಟವಾಗಿ ಮಾತನಾಡಿದ ಅವರು ಪತ್ರಿಕೆ, ಪತ್ರಕರ್ತರ ಹೊಣೆಗಾರಿಕೆ ಕುರಿತು ಮಾಡಿದ ಭಾಷಣಕ್ಕೆ ನೆರೆದಿದ್ದವರೆರಲ್ಲೂ ತಲೆದೂಗಿದರು.
ಪತ್ರಕರ್ತರಲ್ಲಿ ಸದಾ ಕಲಿಕೆಯ ಮನೋಧರ್ಮವಿರಬೇಕು. ಭಾಷೆ, ಪದ ಬಳಕೆ ಮತ್ತು ಭಾಷಾಂತರದ ಮೇಲೆ ಪ್ರತಿಯೊಬ್ಬರು ಹಿಡಿತ ಸಾಸಿದರೆ ಸಮಾಜದಲ್ಲಿ ಉತ್ತಮ ಪತ್ರಕರ್ತನಾಗಲು ಸಾಧ್ಯ.
ಈ ಸಂಜೆ ಪತ್ರಿಕೆ ಕನ್ನಡ ಭಾಷೆ ಉಳಿಸಿ, ಬೆಳೆಸಿ ಪೋಷಿಸುವ ಪತ್ರಿಕೆಯಾಗಿದೆ. ಅದು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಇದು ಕೇವಲ ನನ್ನ ಒಬ್ಬನ ಆಸೆಯಲ್ಲ. ಸಮಸ್ತ ಕನ್ನಡಿಗರ ಆಶಯ ಎಂದು ಹೇಳಿದರು.
ಇಂದಿನ ಸ್ಪರ್ಧಾಯುಗದಲ್ಲಿ ಸಂಜೆ ಪತ್ರಿಕೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಒಬ್ಬ ಮನುಷ್ಯನಿಗೆ 32 ಹಲ್ಲುಗಳಿದ್ದರೆ ಅದು ಗಟ್ಟಿತನ ತೋರುತ್ತದೆ. ಅದೇ ರೀತಿ ಸಂಪಾದಕರು ಗಟ್ಟಿತನದಿಂದ ಇದ್ದರೆ ಪತ್ರಿಕೆ ಬೆಳೆಯಲು ಸಾಧ್ಯ. ಅದು ವೆಂಕಟೇಶ್ ಅವರಿಗಿದೆ ಎಂದು ಪ್ರಶಂಸಿದರು.
ಒಂದು ಪತ್ರಿಕೆ ಮೂರು ದಶಕ ಪೂರೈಸುವುದೆಂದರೆ ಅದೊಂದು ದೊಡ್ಡ ಸವಾಲು. ಮೀನಿಗೆ ಈಜಲು ಕಲಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪತ್ರಕರ್ತರಿಗೆ ಸಲಹೆ, ಸೂಚನೆ ನೀಡಲಾಗದು. ವೆಂಕಟೇಶ್ ಅವರು ಎಲ್ಲ ಏಳು-ಬೀಳುಗಳನ್ನು ತುಂಬ ಹತ್ತಿರದಿಂದ ಕಂಡಿದ್ದಾರೆ. ಹಾಗಾಗಿ ಅವರಿಗೆ ಸವಾಲು ಹೊಸದಲ್ಲ. ಏನೇ ಬಂದರೂ ಗಟ್ಟಿತನದಿಂದ ಎದುರಿಸುವ ಶಕ್ತಿ ಇದೆ. ಹೀಗಾಗಿಯೇ ಇಂದು ಪತ್ರಿಕೆ ಹೆಮ್ಮರವಾಗಿ ಬೆಳೆದಿದೆ. ಅದರ ಶ್ರೇಯಸ್ಸು ಪ್ರತಿಯೊಬ್ಬರಿಗೂ ಸಲ್ಲಬೇಕೆಂದು ತಿಳಿಸಿದರು.
ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ
ವೆಂಕಟೇಶ್ ಅವರನ್ನು ನಾನು ತುಂಬ ಹತ್ತಿರದಿಂದ ಬಲ್ಲೆ. ಅನೇಕ ಮುಖ್ಯಮಂತ್ರಿಗಳು ಬೆಳಗಿನ ಉಪಹಾರ, ಊಟಕ್ಕೆ ಕರೆದಾಗ ಬಹುತೇಕ ಸಂಪಾದಕರು ಬರಿಗೈಯಲ್ಲಿ ಬರುತ್ತಾರೆ. ಆದರೆ ವೆಂಕಟೇಶ್ ಅವರು ಪ್ರತಿ ಸಂದರ್ಭದಲ್ಲೂ ಯಾವುದೇ ಮುಖ್ಯಮಂತ್ರಿಯನ್ನು ಭೇಟಿ ಮಾಡುವಾಗ ಕೈಯಲ್ಲೊಂದು ಹೂಗುಚ್ಛ ಹಿಡಿದುಕೊಂಡೇ ಬಂದು ಶುಭಕೋರುತ್ತಾರೆ. ಇದು ಅವರ ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿ ಎಂದು ಪ್ರಶಂಸಿಸಿದರು.
ಪತ್ರಿಕೆ ಸಂಪಾದಕರಾದ ಟಿ.ವೆಂಕಟೇಶ್ ಅವರು ಮಾತನಾಡಿ, ಕಳೆದ ಮೂರು ದಶಕಗಳಲ್ಲಿ ಪತ್ರಿಕೆ ಅನೇಕ ಏಳು-ಬೀಳುಗಳನ್ನು ಕಂಡಿದೆ. ನಾನು ಅತ್ಯಂತ ಶ್ರದ್ಧೆ ಮತ್ತು ಪರಿಶ್ರಮದಿಂದ ಪತ್ರಿಕೆಯನ್ನು ಹೊರತಂದಿದ್ದೇನೆ. ಇದರ ಶ್ರೇಯಸ್ಸು ಈ ಸಂಜೆಯ ಸಮಸ್ತ ಸಿಬ್ಬಂದಿಗೆ ಸಲ್ಲಬೇಕೆಂದು ಭಾವುಕರಾದರು.
ಕಾವೇರಿ ಹೋರಾಟದಿಂದ ಆರಂಭವಾದ ಈ ಸಂಜೆ ಪತ್ರಿಕೆ, ನಾಡು-ನುಡಿ, ನೆಲ-ಜಲ ಸೇರಿದಂತೆ ಯಾವುದೇ ವಿಷಯದಲ್ಲೂ ಎಂದಿಗೂ ರಾಜೀಯಾಗಿಲ್ಲ. ನಮ್ಮ ನಾಡು ನಮ್ಮ ಜನರ ಹಿತ ಮುಖ್ಯ. ಯಾವ ಉದ್ದೇಶದಿಂದ ಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತೋ ಈಗಲೂ ಕೂಡ ಅದೇ ಬದ್ಧತೆ ಇದೆ ಎಂದರು.
ಪತ್ರಕರ್ತ ಪ್ರತಿದಿನ ಏನಾದರೊಂದು ಕಲಿಯಲೇಬೇಕು. ಪರಿವರ್ತನೆ ಜಗದ ನಿಯಮ ಎಂಬಂತೆ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಿರಂತರವಾಗಿ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಓದುಗರ ಅಭಿರುಚಿಗೆ ತಕ್ಕಂತೆ ನಾವು ಪತ್ರಿಕೆಯನ್ನು ರೂಪಿಸಬೇಕಾಗುತ್ತದೆ. ಇದು ಪ್ರತಿಯೊಬ್ಬರ ಹೊಣೆಗಾರಿಕೆ ಎಂಬುದನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದರು.
ಅಭಿಮಾನಿ ಸಮೂಹ ಸಂಸ್ಥೆಯ ನಿರ್ದೇಶಕರು ಹಾಗೂ ಸಹ ಸಂಪಾದಕರೂ ಆದ ವಿ.ಶ್ರೀನಿವಾಸ್ ಮಾತನಾಡಿ, ಪತ್ರಿಕೆಗೆ ಕೆಲವು ಸವಾಲುಗಳು ಎದುರಾದಾಗಲೂ ನಾವು ಎದೆಗುಂದದೆ ಪತ್ರಿಕೆ ಹೊರತಂದೆವು. ಇದಕ್ಕೆ ಕಾರಣ ನಿಮ್ಮೆಲ್ಲರ ಪರಿಶ್ರಮ ಎಂದು ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು.
ಅಭಿಮಾನಿ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಅನಿಲ್ ಹೊಸಕೊಪ್ಪ ಮಾತನಾಡಿ, ಪತ್ರಿಕೆ ಬೆಳೆದು ಬಂದ ಹಾದಿಯನ್ನು ಸಿಂಹಾವಲೋಕನ ಮಾಡಿದರು. ಈ ಸಂಜೆ ಪತ್ರಿಕೆ ಪತ್ರಿಕಾರಂಗದ ಪಾಠಶಾಲೆ ಇದ್ದಂತೆ. ಏಕೆಂದರೆ, ಇಲ್ಲಿ ಕೆಲಸ ಮಾಡಿದ ಅನೇಕ ಪತ್ರಕರ್ತರು ಇಂದು ನಾಡಿನ ವಿವಿಧ ಕಡೆ ಉನ್ನತ ಹುದ್ದೆಯಲ್ಲಿದ್ದಾರೆ. ಸಂಪಾದಕರು, ಮುಖ್ಯ ವರದಿಗಾರರು ಸೇರಿದಂತೆ ಅನೇಕ ಪತ್ರಕರ್ತರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಈ ಸಂಜೆಯಲ್ಲೇ ಕಲಿತು ಬೆಳೆದವರು ಎಂದರು.
90ರ ದಶಕದಲ್ಲಿ ಆರಂಭವಾದ ಈ ಸಂಜೆ ರಾಜ್ಯದ ಪ್ರಮುಖ ಪತ್ರಿಕೆಯಾಗಿ ಹೊರಹೊಮ್ಮಿದೆ. ನಮ್ಮ ಪತ್ರಿಕೆ ಎಂದಿಗೂ ಯಾವುದೇ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ. ನಿಷ್ಪಕ್ಷಪಾತ ಮತ್ತು ನಿರ್ಭೀತಿಯಿಂದ ಕೆಲಸ ಮಾಡಿದ್ದೇವೆ ಎಂಬ ತೃಪ್ತಿ ಇದೆ. ಮುಂದೆ ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
3 ದಿನ ಸರಕು ಸಾಗಣೆ ವಾಹನಗಳ ಬೆಂಗಳೂರು ಪ್ರವೇಶ ನಿಷೇಧ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರಾಜಾಜಿನಗರ ಶಾಖೆಯ ಪ್ರಧಾನ ವ್ಯವಸ್ಥಾಪಕ ಹರೇರಾಮ್, ಅಭಿಮಾನಿ ಸಮೂಹದ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಂಟಿ ನಿರ್ದೇಶಕ ಡಿ.ಪಿ.ಮುರುಳೀದರ್ ಮತ್ತು ಉಪ ನಿರ್ದೇಶಕ ಕೆ.ಪಿ.ಪುಟ್ಟಸ್ವಾಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.
Eesanje, Kannada, evening, daily, newspaper,