ಜನರ ನೋವಿನ ಧ್ವನಿಯಾಗಿ 32ನೇ ವರ್ಷಕ್ಕೆ ಕಾಲಿಟ್ಟಿ `ಈ ಸಂಜೆ’

Social Share

ಕನ್ನಡಿಗರ ಕಣ್ಮಣಿ, ಸ್ವಾಭಿಮಾನದ ಪ್ರತೀಕವಾದ ಬದ್ಧತೆಯ ಸಂಕೇತವೂ ಆದ ಈ ಸಂಜೆ ಪತ್ರಿಕೆಯ ಯಶಸ್ಸಿನ ಪಯಣ 32ನೇ ವರ್ಷಕ್ಕೆ ಕಾಲಿಟ್ಟಿದೆ. ಸಾಮಾಜಿಕ ಕಳಕಳಿ, ಜೀವಪರ ಕಾಳಜಿಯಿಂದ ಯಶಸ್ಸಿನ ಹಾದಿಯನ್ನು ತೆರೆದುಕೊಳ್ಳುತ್ತಾ ಮುನ್ನಡೆಯುತ್ತಲೇ ಇರುವ ಈ ಸಂಜೆ ಹೊಸ ಹೊಸ ಆಯಾಮಗಳೊಂದಿಗೆ ಉತ್ತುಂಗದ ಶಿಖರವನ್ನು ಏರಿದೆ ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ.

ಈ ಸಂಜೆ ಪತ್ರಿಕೆ ಕನ್ನಡಿಗರ ಸ್ವಾಭಿಮಾನದ ಸಂಕೇತ. ನಾಡಿನ ಜನರ ಬದ್ಧತೆಯ ಪ್ರತೀಕವಾಗಿ 31 ವರ್ಷಗಳ ಹಿಂದೆ ಒಳಿತು-ಕೆಡುಕುಗಳ ಸಂಘರ್ಷಕ್ಕಾಗಿ ಜನ್ಮತಾಳಿದ ಪತ್ರಿಕೆ. ಅಂದಿನಿಂದ ಇಂದಿನವರೆಗೆ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಹೋರಾಟವನ್ನು ಸದ್ದಿಲ್ಲದೆ ನಡೆಸುತ್ತಾ ಬಂದಿದೆ.

31 ವರ್ಷ ಸಾಗಿರುವ ಹಾದಿ ಸುಲಭವಾದದ್ದೇನಲ್ಲ. ಸಂಜೆ ಮಾಧ್ಯಮ ಅವಸರದ ಅಡುಗೆ. ಅದು ತಂತಿ ಮೇಲಿನ ನಡಿಗೆ. ಈ ಎಲ್ಲಾ ಏಳು-ಬೀಳುಗಳ ನಡುವೆ ಮಾಧ್ಯಮದ ಪಾವಿತ್ರ್ಯತೆಗೆ ಧಕ್ಕೆ ಬರದಂತೆ ಈ ಸಂಜೆ ಪತ್ರಿಕೆ ಅಂದಿನಿಂದ ಇಂದಿನವರೆಗೂ ತನ್ನ ಹೊಳಪನ್ನು ಉಳಿಸಿಕೊಂಡು ಬೆಳೆಯುತ್ತಿದೆ.

ಕಾವೇರಿ ಜಲವಿವಾದದ ಹೋರಾಟವಿರಲಿ, ಪರಭಾಷೆಗಳ ದಾಳಿಗೆ ಸಿಕ್ಕಿ ಕನ್ನಡ ನಾಡು ನಲುಗಿದ ಪ್ರಸಂಗವೇ ಇರಲಿ, ಅತಿವೃಷ್ಟಿ- ಅನಾವೃಷ್ಟಿ ಯಂತಹ ಬಿಕ್ಕಟ್ಟಿನ ಸನ್ನಿವೇಶ, ಯಾವುದೇ ಪ್ರಾಕೃತಿಕ, ಮಾನವ ನಿರ್ಮಿತ ಪ್ರಮಾದದ ಪರಿಸ್ಥಿತಿಗಳಿಗೆ ಸಿಕ್ಕಿ ಸಂತ್ರಸ್ತರಾದವರ ಪರ ದನಿಯಾಗಿ ನಿಂತು ಜನಹಿತ ಕಾಪಾಡಿ ಸರ್ಕಾರವನ್ನು ಎಚ್ಚರಿಸುವ ಕಾಯಕವನ್ನು ಮುಂದುವರೆಸಿಕೊಂಡು ಬಂದಿದೆ ಈ ಸಂಜೆ ಪತ್ರಿಕೆ.

ಸುದೀರ್ಘ 31 ವಸಂತಗಳನ್ನು ಪೂರೈಸಿ 32ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದೆ. ಇದ್ಯಾವುದಕ್ಕೂ ಜಗ್ಗದೆ, ಬಗ್ಗದೆ, ಕುಗ್ಗದೆ ಮುನ್ನಡೆದಿದೆ. ಈ ಸಂಜೆಯ ಅಂತಃಶಕ್ತಿ ಅಂತಹದ್ದು. ವಿದ್ಯುನ್ಮಾನ ಮಾಧ್ಯಮಗಳು ಕ್ಷಣಮಾತ್ರದಲ್ಲಿ ಜನರನ್ನು ತಲುಪುತ್ತಿವೆಯಾದರೂ ಮುದ್ರಣ ಮಾಧ್ಯಮದ ಮೇಲಿನ ಜನರ ವಿಶ್ವಾಸ ಕುಂದಿಲ್ಲ.

ಪತ್ರಿಕೆ ಓದುಗರಿಗೆ ನೀಡುವ ಅಪ್ಯಾಯತೆಯೇ ಅಂತದ್ದು. ಇಂದಿನ ಕಾಲಘಟ್ಟದಲ್ಲಿ ಪತ್ರಿಕೆ ಘನತೆ, ಪಾವಿತ್ರ್ಯತೆ ಉಳಿಸಿಕೊಳ್ಳುವುದು ಕಷ್ಟ. ಆದರೆ, ಈ ಸಂಜೆಗೆ ಅದು ಸಾಧ್ಯ. ದೃಶ್ಯ ಮಾಧ್ಯಮಗಳು, ವೆಬ್‍ಸೈಟ್ ಚಾನಲ್‍ಗಳ ಅಬ್ಬರದ ಮಧ್ಯೆ ಮುದ್ರಣ ಮಾಧ್ಯಮ ಕಳೆದುಹೋಗಿ ಬಿಡುತ್ತವೇನೋ ಎಂಬ ಆತಂಕದ ನಡುವೆಯೂ ಈ ಸಂಜೆ ತನ್ನ ಜತನವನ್ನು ಕಾಪಾಡಿಕೊಂಡು ಬಂದಿದೆ. ಈ ಸಂಜೆಯ ಸಾರಥ್ಯ ವಹಿಸಿರುವ, ಪಾದರಸದಂತಿರುವ ಛಲದಂಕ ಮಲ್ಲ, ಸ್ವಾಭಿಮಾನಿ ಕನ್ನಡಿಗರಾದ ಟಿ.ವೆಂಕಟೇಶ್ ಅವರು ಸುದ್ದಿ ಪ್ರಸಾರದಲ್ಲಾಗಲಿ, ಗುಣಮಟ್ಟದಲ್ಲಾಗಲಿ ರಾಜಿ ಮಾಡಿಕೊಳ್ಳದ ೀಮಂತ ವ್ಯಕ್ತಿತ್ವವುಳ್ಳವರು.

ಪತ್ರಿಕೆಯ ಓದುಗರು, ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತ, ಕನ್ನಡ ನಾಡು, ನುಡಿ, ಜಲ ಇವುಗಳ ತುಡಿತ ಅವರಿಗೆ. ಇದೇ ಅವರ ಅಂತರ್ಗತ ಶಕ್ತಿ ಕೂಡ. ಸದಾ ಪತ್ರಿಕೆ ಸಿಬ್ಬಂದಿಗೆ ಅವರು ಹೇಳುವ ಮಾತು ಒಂದೇ. 3ರೂ. ಕೊಟ್ಟು ಪತ್ರಿಕೆ ಕೊಂಡು ಓದುವವರಿಗೆ ಅನ್ಯಾಯ ಮಾಡಬೇಡಿ, ತಪ್ಪು ಮಾಹಿತಿ ಕೊಡಬೇಡಿ, ಓದುಗರ ದಾರಿ ತಪ್ಪಿಸಬೇಡಿ. ಅದು ಅಕ್ಷರ ದ್ರೋಹವಾಗುತ್ತದೆ ಎಂದು. ಇದು ಅವರ ಅಂತಃಸಾಕ್ಷಿ , ಮನಸಾಕ್ಷಿಗೆ ನಿದರ್ಶನ.

ಯಾವಾಗಲೂ ಪತ್ರಿಕೆ ಸಂಕಷ್ಟದಲ್ಲಿರುವವರ ಪರವಾಗಿ ನಿಲ್ಲಬೇಕು ಎಂಬುದು ಅವರ ಅಭಿಮತ. ಇದನ್ನು ಅವರು ಅಕ್ಷರಶಃ ಪಾಲಿಸುತ್ತಾ ಬಂದಿದ್ದಾರೆ. ಈ ಸಂಜೆಯನ್ನು ಬೆಳೆಸುವ ಮೂಲಕ ಜನರ ನೋವಿಗೆ ದನಿಯಾಗಿ ಎಂದು ಪ್ರತಿನಿತ್ಯ ಬೋಸುತ್ತಾರೆ. ಅದೇ ರೀತಿ ಈ ಸಂಜೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದೆ. ಎಲ್ಲ ರೀತಿಯಲ್ಲೂ ಎಲ್ಲ ಸಿಬ್ಬಂದಿ ಸಹಕರಿಸುತ್ತಾ ಬಂದಿದ್ದಾರೆ.

ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಈ ಸಂಜೆ ಪತ್ರಿಕೆ ಈಗ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತನ್ನ ಪ್ರಸಾರ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಗಡಿನಾಡು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ತನ್ನ ಆವೃತ್ತಿಗಳನ್ನು ಪ್ರಾರಂಭಿಸಿ ಗದಗ, ಧಾರವಾಡ, ರಾಯಚೂರು, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ಜನರ ಮನೆ ಮಾತಾಗಿದೆ.

ಹಲವು ಪ್ರಥಮಗಳಿಗೆ ಕಾರಣವಾಗಿರುವ ಈ ಸಂಜೆ ಪತ್ರಿಕೆ ಸಾವಿರಾರು ಜನರಿಗೆ ಆಶ್ರಯವಾಗಿದೆ. ಅಭಿಮಾನಿ ಸಮೂಹ ಸಂಸ್ಥೆ ಸಾವಿರಕ್ಕೂ ಹೆಚ್ಚು ಜನರಿಗೆ ಬದುಕು ಕಟ್ಟಿ ಕೊಟ್ಟಿದೆ. ಇದು ಮಾಧ್ಯಮ ಲೋಕದ ಪ್ರಯೋಗ ಶಾಲೆ ಯೂ ಹೌದು. ಇಲ್ಲಿ ಕಲಿತು ನುರಿತವರು ಮಾಧ್ಯಮ ಲೋಕದಲ್ಲಿ ಬೆಳೆದು ಹೆಸರು ಗಳಿಸಿದ್ದಾರೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಈ ಸಂಜೆ ಸಮಾಜದ ಹೊಣೆಗಾರಿಕೆಯನ್ನು ಅರಿತು ತನ್ನ ಜವಾಬ್ದಾರಿಯನ್ನು ಯಾವುದೇ ಮುಲಾಜಿಗೆ ಒಳಗಾಗದೆ ನಿರ್ಭೀತಿಯಿಂದ ಪ್ರಸಾರ ಮಾಡುತ್ತಾ ಬಂದಿದೆ.

ಸಂಜೆ ಪತ್ರಿಕೆಯಾದರೂ ಯಾವುದೇ ದಿನಪತ್ರಿಕೆಗಳಿಗಿಂತ ಕಡಿಮೆಯಿಲ್ಲದಂತೆ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಸುದ್ದಿಗಳ ಆಳ-ಅಗಲಕ್ಕಿಳಿದು ವಿಸ್ತಾರವಾಗಿ ವಿಷಯ ಪ್ರಕಟಿಸುವುದಕ್ಕೆ ಎಲ್ಲ ದಿನಪತ್ರಿಕೆಗಳಿಗೆ ಈ ಸಂಜೆ ಪತ್ರಿಕೆ ಒಂದು ಆಕರವಾಗಿದೆ. ಈ ಮೂಲಕ ಜನಮನ್ನಣೆ ಜೊತೆಗೆ ಮಾಧ್ಯಮ ಮನ್ನಣೆಯನ್ನೂ ಗಳಿಸಿದೆ.

ನಮ್ಮಲ್ಲಿ ಬರುವ ಸುದ್ದಿಗಳು ದೃಶ್ಯ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ತಪ್ಪುಗಳಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು, ಪಾದರಸದಂತೆ ಕೆಲಸ ನಿರ್ವಹಿಸುವ ಸಂಪಾದಕರ ಕಾರ್ಯದಕ್ಷತೆಯಿಂದಾಗಿ ಈ ಸಂಜೆ ಪತ್ರಿಕೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಇದೆ.ಕನ್ನಡಪರ ಹೋರಾಟದಲ್ಲಿ ಈ ಸಂಜೆ ಪತ್ರಿಕೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕನ್ನಡದ ಮನಸುಗಳ ನೋವಿಗೆ ತಕ್ಷಣವೇ ಸ್ಪಂದಿಸುತ್ತದೆ. ಕನ್ನಡಿಗರ ಹೋರಾಟದಲ್ಲಿ ಕಿಚ್ಚು ಹಚ್ಚಿಸಿ ಹೋರಾಟಗಾರರನ್ನು ಸಂಘಟಿಸಿದ ಏಕೈಕ ಪತ್ರಿಕೆ ಈ ಸಂಜೆ. ನೊಂದವರಿಗೆ ದನಿಯಾಗಿ, ಸಂತ್ರಸ್ತರ ಪರವಾಗಿ, ದೀನ-ದಲಿತರ ಬೆನ್ನಿಗೆ ಈ ಸಂಜೆ ನಿಂತಿದೆ.

ಈ ಸಂಜೆ ರಾಜಕೀಯ ಕ್ಷಿಪ್ರ ಸುದ್ದಿಗಳನ್ನು ಪ್ರಕಟಿಸಿ ಸರ್ಕಾರಗಳ ಏರುಪೇರಿಗೂ ಕಾರಣವಾಗಿದೆ. ಜನಪ್ರತಿನಿಗಳ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸಿದೆ. ಅವರ ಕೆಟ್ಟ ಕೆಲಸಗಳನ್ನು ಆಕ್ಷೇಪಿಸಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದೆ. ಜನಸಾಮಾನ್ಯರಿಗೆ ತೊಂದರೆಯಾದಾಗ ಜನಪರವಾಗಿ ನಿಂತು ಸರ್ಕಾರಗಳ ಚಳಿ ಬಿಡಿಸಿದೆ.

ನೇರ-ನಿಷ್ಠುರ-ನಿಖರತೆ ಮೂಲಕ ಮಾಧ್ಯಮ ಲೋಕದಲ್ಲಿ ಅರಳಿ ನಿಂತಿದೆ. ಪತ್ರಿಕೆ ಕೇವಲ ನೀತಿ ಬೋಧಕನಾಗಿ ಅಷ್ಟೇ ಅಲ್ಲ, ಹೋರಾಟಗಳಿಗೆ ಸೂರ್ತಿಯಾಗಿದೆ. ರಾಷ್ಟ್ರ ಪ್ರೇಮ, ಸಮಗ್ರತೆ-ಐಕ್ಯತೆ, ಪರೋಪಕಾರದಂತಹ ಭಾವನೆಗಳನ್ನು ಪ್ರಚೋದಿಸುವ, ಸತ್ಪ್ರಜೆಗಳನ್ನು ಸೃಷ್ಟಿಸುವ ಸಾಧನವಾಗಿದೆ. ಯುವಜನರಿಗೆ ಆದರ್ಶವಾಗಿ ರೈತರು, ಮಹಿಳೆಯರು, ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಪತ್ರಿಕೆ ತನ್ನ ನಿಲುವನ್ನು ಪ್ರದರ್ಶಿಸುತ್ತಾ ಯಾವ ಶಕ್ತಿಗಳೊಂದಿಗೂ ರಾಜಿ ಮಾಡಿಕೊಳ್ಳದೆ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ.

ಅಂತರ್ಜಾಲದಲ್ಲಿ ಯಶಸ್ಸು:
ಈ ಸಂಜೆ ಅಂತರ್ಜಾಲದಲ್ಲೂ ಯಶಸ್ಸು ಸಾಸಿ ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಸೃಷ್ಟಿ ಮಾಡಿಕೊಂಡು ಕನ್ನಡ ಪತ್ರಿಕೆಗಳಲ್ಲಿ , ಅಂತರ್ಜಾಲ ಓದುಗರಲ್ಲಿ ಐದನೆ ಸ್ಥಾನ ಪಡೆದುಕೊಂಡಿರುವುದಕ್ಕೆ ಹೆಮ್ಮೆಯಿದೆ.

ಯಾವುದಕ್ಕೂ ಸೀಮಿತವಾಗದೆ ತನ್ನ ಪರಿಯನ್ನು ವಿಸ್ತರಿಸುತ್ತಲೇ ಹೊಸ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ವಿಸ್ತಾರಗೊಳ್ಳುತ್ತಾ ಸಾಗಿದೆ. ಹೊಸ ಮೊಬೈಲ್ ಆ್ಯಪ್ ಮೂಲಕ ಪ್ರಪಂಚದ ಮೂಲೆ ಮೂಲೆಗೂ ಈ ಸಂಜೆಯ ತಾಜಾ ಸುದ್ದಿಗಳು ಕ್ಷಣಾರ್ಧದಲ್ಲಿ ಓದುಗರಿಗೆ ತಲುಪುತ್ತವೆ. ವೆಬ್ ಚಾನಲ್‍ನಲ್ಲೂ ಕೂಡ ಈ ಸಂಜೆ ಮುಂಚೂಣಿಯಲ್ಲಿದ್ದು, ವೀಕ್ಷಕರ ಸಂಖ್ಯೆ ಲಕ್ಷ ದಾಟಿದೆ.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್-19 ಸಂದರ್ಭದಲ್ಲಿ ಶತಮಾನ, ಅರ್ಧ ಶತಮಾನ ಕಂಡಂತಹ ಪತ್ರಿಕೆಗಳು ಮುಗ್ಗರಿಸಿದ್ದವು. ವಿದ್ಯುನ್ಮಾನ ಮಾಧ್ಯಮಗಳ ಧ್ವನಿಯೂ ಕ್ಷೀಣಿಸಿತ್ತು. ಬಹುತೇಕ ಮಾಧ್ಯಮಗಳಲ್ಲಿ ಸಿಬ್ಬಂದಿಯನ್ನು ಕೈಬಿಟ್ಟು ಪ್ರಸಾರ ಸೀಮಿತಗೊಳಿಸಲಾಯಿತು. ಆದರೆ, ಈ ಸಂಜೆ ಸಂಕಷ್ಟದ ಸಂದರ್ಭದಲ್ಲೂ ಸಿಬ್ಬಂದಿಯನ್ನು ಕೈ ಬಿಡಲಿಲ್ಲ.

ವೇತನವನ್ನೂ ನಿಲ್ಲಿಸಲಿಲ್ಲ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಪತ್ರಿಕೆ ಯಥಾವತ್ತಾಗಿ ನಡೆಯಿತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ 2021ರ ಸೆ.19ರಂದು ಸಂಜೆ 4.45ರ ಸುಮಾರಿನಲ್ಲಿ ಘೋರ ದುರಂತವೊಂದು ನಡೆದುಹೋಯಿತು. ಅಂದು ಆಕಸ್ಮಿಕ ಬೆಂಕಿ ತಗುಲಿ ಈ ಸಂಜೆ ಕಚೇರಿ ಹೊತ್ತಿ ಉರಿದಿತ್ತು. ಭಾರೀ ಅಗ್ನಿ ಅವಘಡದಿಂದಾಗಿ 4 ಕೋಟಿಗೂ ಅಕ ನಷ್ಟ ಉಂಟಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಕಚೇರಿಯಲ್ಲಿದ್ದ ಕಂಪ್ಯೂಟರ್‍ಗಳು ಸೇರಿದಂತೆ ಪೀಠೋಪಕರಣಗಳೂ ಬೆಂಕಿಗೆ ಆಹುತಿಯಾದವು.

ಅಂತಹ ಸಂದರ್ಭದಲ್ಲೂ ಎದೆಗುಂದದೆ ಎಲ್ಲ ಸಿಬ್ಬಂದಿ ವರ್ಗದವರನ್ನು ಹುರಿದುಂಬಿಸಿದ ಸಂಪಾದಕರು ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ಮರುದಿನದಂದೇ ಪತ್ರಿಕೆ ಎಂದಿನಂತೆ ಮುದ್ರಣವಾಗಬೇಕು ಎಂದು ಸೂಚಿಸಿದರು.

ಕಚೇರಿಗೆ ಹೊತ್ತಿದ್ದ ಬೆಂಕಿ ಆರುವ ಮುನ್ನವೇ ಸವಾಲುಗಳನ್ನು ಮೆಟ್ಟಿನಿಂತು ಸೆ.20ರಂದು ಈ ಸಂಜೆ ಸಂಚಿಕೆ ಎಂದಿನಂತೆ ಮುದ್ರಣವಾಯಿತು. ಇದೇ ಸಂಪಾದಕರ ಆದ್ಯಾತ್ಮಿಕತೆ ಶಕ್ತಿ. ಪತ್ರಿಕೆಯ ಅಂತಃಸ್ಸತ್ವ.

eesanje kannada

Articles You Might Like

Share This Article