ಬೆಂಗಳೂರು,ಏ.1-ರಾತ್ರಿ ವೇಳೆ ಕುಡಿದು ತೂರಾಡುವವರನ್ನು ಮನೆಗೆ ಸೇರಿಸುವಂತಹ ಕಾರ್ಯದ ಜೊತೆಗೆ ಅನಾಥರಿಗೆ ಆಶ್ರಯ ಒದಗಿಸಿಕೊಡುವಲ್ಲಿಯೂ ನಗರ ಪೊಲೀಸರು ಸೈ ಎನಿಸಿಕೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಭ್ರಮ್ ಕಾಲೇಜು ಸಮೀಪ ಮದ್ಯಪಾನ ಮಾಡಿ ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ.
ಮಧ್ಯರಾತ್ರಿ ಯುವತಿಯೊಬ್ಬರು ನಡು ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಿದ್ದಾರೆಂದು ಸಾರ್ವಜನಿಕರೊಬ್ಬರು ನಮ್ಮ-112 ಗೆ ಮಾಡಿದ್ದ ಕರೆಯ ಮಾಹಿತಿ ಬೆನ್ನತ್ತಿದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿಗಳಾದ ಎಎಸ್‌ಐ ಸಿದ್ದಲಿಂಗಮೂರ್ತಿ, ಹೆಡ್ ಕಾನ್‌್ಸಸ್ಟೇಬಲ್ ಸೋಮಣ್ಣ ಅವರು ಕೇವಲ 3 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿ ಯುವತಿಯನ್ನು ರಕ್ಷಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಯುವತಿ ಅಜ್ಜ,ಅಜ್ಜಿ ಜೊತೆ ಜಗಳವಾಡಿ ಮನೆ ಬಿಟ್ಟು ಬಂದು ಮದ್ಯಪಾನ ಮಾಡಿರುವುದಾಗಿ ಹೇಳಿದ್ದು, ಪೊಲೀಸರು ಆಕೆಯನ್ನು ಸಮಾಧಾನ ಪಡಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಇದೇ ರೀತಿ ನಮ್ಮ -112 ಗೆ ಬಂದ ಕರೆಯನ್ನಾಧರಿಸಿ ಮಾದನಾಯಕಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಸಂದ್ರದ ಎಪಿಎಂಸಿ ಬಳಿ ರಸ್ತೆ ಬದಿ ಮಲಗಿದ್ದ ಅನಾಥ ವೃದ್ಧರೊಬ್ಬರನ್ನು ಚೀತಾ ಸಿಬ್ಬಂದಿ ಸಮೀಪದ ಅಮ್ಮನ ಮಡಿಲು ಆಶ್ರಮಕ್ಕೆ ಸೇರಿಸಿ ದಯೆ ತೋರಿದ್ದಾರೆ.
ಈ ಘಟನೆಗಳು ನಗರ ಪೊಲೀಸರ ಸಾಮಾಜಿಕ ಹೊಣೆಗಾರಿಕೆಯ ಪ್ರತಿಬಿಂಬದಂತೆ ಇದ್ದು, ಸಾರ್ವಜನಿಕರು ಅಗತ್ಯ ಸಂದರ್ಭದಲ್ಲಿ ನಮ್ಮ-112 ಸಂಪರ್ಕಿಸಲು ಕೋರಲಾಗಿದೆ.
ಜೀವ ರಕ್ಷಿಸು ಕಾರ್ಯಕ್ಕೂ ಪೊಲೀಸರು ಸೈ..
ಬೆಂಗಳೂರು,ಏ.1-ಕುಡಿದು ತೂರಾಡುವ ಮಹಿಳೆಯರನ್ನು ಜೋಪಾನವಾಗಿ ಮನೆಗೆ ಕಳುಹಿಸುವ ಚಾಕರಿ ಜೊತೆಗೆ ಇದೀಗ ಆತಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವ ಸ್ತ್ರೀಯರನ್ನು ರಕ್ಷಿಸುವ ಕಾಯಕವೂ ಪೊಲೀಸರ ಹೆಗಲೇರಿದೆ. ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಆತಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದ ಯುವತಿಯನ್ನು ರಕ್ಷಿಸುವಲ್ಲಿ ವೈಟ್ ಫೀಲ್ಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮಡಿಹಳ್ಳಿ ಸಮೀಪದ ಟೆಕ್ನೋ ಸ್ಕೂಲ್ ರಸ್ತೆ ಬಳಿಯಿಂದ ಯುವತಿ ಆಕೆಯ ಪ್ರಿಯಕರನಿಗೆ ಕರೆ ಮಾಡಿ ನೀನು ನನ್ನನ್ನು ವಿವಾಹವಾಗದ ಹಿನ್ನೆಲೆಯಲ್ಲಿ ನಾನು ನನ್ನ ಮನೆಯಲ್ಲಿ ಆತಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.
ಪ್ರಿಯತಮೆಯ ಬೆದರಿಕೆ ಯಿಂದ ಆತಂಕಕ್ಕೊಳಗಾದ ಪ್ರಿಯಕರ ತಕ್ಷಣವೇ 112 ಗೆ ಕರೆ ಮಾಡಿ ಪೊಲೀಸರಿಗೆ ಆತಹತ್ಯೆಯ ವಿಷಯ ತಿಳಿಸಿದ್ದ.
ತಕ್ಷಣ ಕಾರ್ಯಾಚರಣೆಗೆ ಇಳಿದ ನಮ -112 ಸಿಬ್ಬಂದಿಯವರು ವೈಟ್‌ಫೀಲ್‌್ಡ ಠಾಣೆಯ ಚೀತಾ ಕರ್ತವ್ಯದಲ್ಲಿದ್ದ ಬಂಗಾರಪ್ಪ ಎಂಬ ಹೆಡ್ ಕಾನ್‌್ಸಸ್ಟೇಬಲ್‌ಗೆ ವಿಷಯ ತಲುಪಿಸಿದ್ದರು. ಮಾಹಿತಿ ಬರುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಆ ಮಹಿಳೆಯ ಮನೆಯನ್ನು ಪತ್ತೆ ಹಚ್ಚಿ ಕಿಟಕಿ ತೆರೆದು ನೋಡಿದಾಗ ಆಕೆ ಆತಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂತು. ಪರಿಸ್ಥಿತಿಯ ಗಂಭೀರತೆ ಯನ್ನು ಅರಿತ ಪೊಲೀಸರು ತಕ್ಷಣವೇ ಆಕೆಯೊಂದಿಗೆ ಶಾಂತ ರೀತಿಯ ಮಾತುಕತೆ ನಡೆಸಿ ಮನೆ ಬಾಗಿಲು ತೆಗಿಸುವಲ್ಲಿ ಯಶಸ್ವಿಯಾದರು.
ನಂತರ ಸಮಾಲೋಚನೆ ಮುಂದುವರೆಸಿ ಆತಹತ್ಯೆ ಮಾಡಿಕೊಳ್ಳದಂತೆ ಆಕೆಯ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಡಿದು ತೂರಾಡುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದಲ್ಲದೇ, ಸಮಾಜ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಕಾಯಕದ ಜೊತೆಗೆ ಭಾವನಾತಕ ಸಂಕಷ್ಟಕ್ಕೆ ಸಿಲುಕಿ ಜೀವ ಹಾನಿ ಮಾಡಿಕೊಳ್ಳಲು ಮುಂದಾಗು ವವರ ರಕ್ಷಿಸುವ ಬದ್ಧತೆಯೂ ನಮಲ್ಲಿದೆ ಎಂಬುದನ್ನು ನಗರ ಪೊಲೀಸರು ಸಾಬೀತುಪಡಿಸಿದ್ದಾರೆ.
ನಗರದಲ್ಲಿ ವಾಹನ ಕದ್ದು ಚಿತ್ತೂರಿನಲ್ಲಿ ಮಾರಾಟ
ಬೆಂಗಳೂರು,ಏ.1-ನಗರ ದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿಕೊಂಡು ಹೋಗಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮಾರಾಟ ಮಾಡುತ್ತಿದ್ದ ವಾಹನ ಕಳ್ಳನೊಬ್ಬನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಽಸಿ 7.20 ಲಕ್ಷ ವೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶ ಚಿತ್ತೂರಿನ ನಿವಾಸಿ ಸುರೇಶ್ (40) ಬಂಽತ ವಾಹನ ಚೋರ.
ಆರ್‌ಟಿ ನಗರದಲ್ಲಿ ವಾಸವಾಗಿರುವ ಪಿರ್ಯಾದುದಾರರು ಕಮ್ಮನಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾನು ಕೆಲಸ ಮಾಡುವ ಕಂಪನಿಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ವಾಪಸ್ ಬಂದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಕಂಡು ಬಂದಿದೆ. ನಂತರ ಅವರು ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ನ್ಯೂಬಿಇಎಲ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ಆರೋಪಿಯು ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿಕೊಂಡು ಹೋಗಿ ಚಿತ್ತೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಕಾರ್ಯಾಚರಣೆ ಕೈಗೊಂಡ ಪೊಲೀಸರು ವಿವಿಧ ಕಂಪನಿಯ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ವೌಲ್ಯ 7.20 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆ 2, ಕೆಆರ್‌ಪುರ ,ಆರ್‌ಟಿನಗರ, ಸಂಜಯನಗರ, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್‌ನ ತಲಾ 1 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
